ಎನ್ಇಪಿ ಕೆಲವು ಅಂಶಗಳನ್ನು ಎಸ್‌ಇಪಿ ಅಲ್ಲಿ ಅಳವಡಿಸುವಂತೆ ತಜ್ಞರ ಸಮಿತಿ ಸಲಹೆ ನೀಡಿದೆ
ರಾಜ್ಯ ಶಿಕ್ಷಣ ನೀತಿಯನ್ನು (SEP) ರೂಪಿಸುವಾಗ ರಾಷ್ಟ್ರೀಯ ಶಿಕ್ಷಣ ನೀತಿಯಿಂದ (NEP) ಕೆಲವು ಅಂಶಗಳನ್ನು ಅಳವಡಿಸುವಂತೆ ಹಲವಾರು ಶಿಕ್ಷಣ ತಜ್ಞರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ರಾಜ್ಯ ಶಿಕ್ಷಣ ನೀತಿಯನ್ನು (SEP) ರೂಪಿಸುವಾಗ ರಾಷ್ಟ್ರೀಯ ಶಿಕ್ಷಣ ನೀತಿಯಿಂದ (NEP) ಕೆಲವು ಅಂಶಗಳನ್ನು ಅಳವಡಿಸುವಂತೆ ಹಲವಾರು ಶಿಕ್ಷಣ ತಜ್ಞರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಶುಕ್ರವಾರ (ಜುಲೈ 28) ಆಲ್ ಇಂಡಿಯಾ ಸೇವ್ ಎಜುಕೇಶನ್ ಕಮಿಟಿ (AISEC) ಆಯೋಜಿಸಿದ್ದ ಶಿಕ್ಷಣ ಸಮಾವೇಶದಲ್ಲಿ ಭಾಗವಹಿಸಿದ ತಜ್ಞರು ಎನ್‌ಇಪಿಯಲ್ಲಿ ಒದಗಿಸಲಾದ ಕೆಲವು ಅಂಶಗಳನ್ನು ಶ್ಲಾಘಿಸಿದರು ಮತ್ತು ವಿಮರ್ಶಾತ್ಮಕ ಚಿಂತನೆಯ ಮೇಲೆ ಒತ್ತು ನೀಡಿದರು.
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮಾಜಿ ಅಧ್ಯಕ್ಷ ಪ್ರೊ ಸುಖದೇವ್ ಥೋರಟ್, “ಮಲ್ಟಿಪಲ್ ಎಂಟ್ರಿ ಆ್ಯಂಡ್ ಎಕ್ಸಿಟ್ ಆಯ್ಕೆಯು ಉತ್ತಮವಾಗಿದೆ ಮತ್ತು ಇದನ್ನು ಪರಿಗಣಿಸಬಹುದು. ಆದರೆ, ಡ್ರಾಪ್ಔಟ್‌ಗಳಿಗೆ ಕಾರಣವಾಗುವ ಪದವಿಗಳನ್ನು ನಾವು ನೀಡಬಾರದು.” ಎಂದು ಹೇಳಿದರು.
ಮಲ್ಟಿಪಲ್ ಎಂಟ್ರಿ ಆ್ಯಂಡ್ ಎಕ್ಸಿಟ್ ಆಯ್ಕೆ:
NEP ವಿದ್ಯಾರ್ಥಿಗಳಿಗೆ ಬಹು ನಿರ್ಗಮನ ಆಯ್ಕೆಗಳನ್ನು ನೀಡುತ್ತದೆ, ಉದಾಹರಣೆಗೆ ಒಬ್ಬ ವಿದ್ಯಾರ್ಥಿ 4 ವರ್ಷದ ಒಂದು ಕೋರ್ಸ್ ಅನ್ನು ಸೇರಿದರೆ, ಒಂದು ವರ್ಷ ಮುಗಿಸಿದ ನಂತರ ಆತನಿಗೆ ಒಂದು ಸರ್ಟಿಫಿಕೇಟ್ ಅನ್ನು ನೀಡಲಾಗುತ್ತದೆ. ನಂತರ ಆತ ಆ ಕೋರ್ಸ್ ಮುಂದುವರಿಸದಿದ್ದರೂ, ಒಂದು ವಿರಾಮದ ನಂತರ ಕೋರ್ಸ್‌ಗೆ ಮತ್ತೆ ಸೇರಿಕೊಳ್ಳಬಹುದು. ವಿದ್ಯಾರ್ಥಿಗೆ ಒಂದು ವರ್ಷ ಪೂರ್ಣಗೊಂಡ ನಂತರ ಪ್ರಮಾಣಪತ್ರ, ಎರಡು ವರ್ಷಗಳ ನಂತರ ಡಿಪ್ಲೊಮಾ ಪ್ರಮಾಣಪತ್ರ, ಮೂರು ವರ್ಷಗಳ ನಂತರ ಪದವಿ ಪ್ರಮಾಣಪತ್ರ ಮತ್ತು ನಾಲ್ಕು ವರ್ಷಗಳ ನಂತರ ‘ಬ್ಯಾಚುಲರ್ ವಿತ್ ರಿಸರ್ಚ್’ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಎನ್‌ಇಪಿಯ ವಿಮರ್ಶಾತ್ಮಕ ಚಿಂತನೆಯ ಅಂಶವು ಉತ್ತಮ ಕ್ರಮವಾಗಿದೆ ಎಂದು ಕರ್ನಾಟಕ ಪ್ರಾದೇಶಿಕ ಶಿಕ್ಷಣ ಆಯೋಗದ ಕಾರ್ಯದರ್ಶಿ ಫ್ರಾನ್ಸಿಸ್ ಅಸಿಸಿ ಅಲ್ಮೇಡಾ ಈ ಅಂಶವನ್ನು ಉಳಿಸಿಕೊಳ್ಳಲು ಸರ್ಕಾರಕ್ಕೆ ಸಲಹೆ ನೀಡಿದರು. “ಇಡೀ ನೀತಿಯು ಖಾಸಗೀಕರಣದಂತೆ ಕಾಣುತ್ತದೆ. SEP ಯಲ್ಲಿ ವಿಶೇಷವಾಗಿ ಇತಿಹಾಸದಲ್ಲಿ ಸತ್ಯಗಳನ್ನು ವಿರೂಪಗೊಳಿಸಬಾರದು. ನಮಗೆ ಸಮಾನ ಶಿಕ್ಷಣ ನೀಡುವ ನೀತಿಯ ಅಗತ್ಯವಿದೆ” ಎಂದು ಅವರು ಹೇಳಿದರು.
AISEC ಆಯೋಜಿಸಿದ ಶಿಕ್ಷಣ ಸಮಾವೇಶದ ಚರ್ಚೆಯಲ್ಲಿ ಭಾಗವಹಿಸಿದ ತಜ್ಞರು ರಾಷ್ಟ್ರೀಯ ಶಿಕ್ಷಣ ನೀತಿ (NEP) ಪಾಶ್ಚಿಮಾತ್ಯ ವ್ಯವಸ್ಥೆಗಳ ಪ್ರತಿರೂಪವನ್ನು ಹೋಲುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದರ ಹೊರತಾಗಿಯೂ, ನೀತಿಯ ಅನೇಕ ಕಲ್ಪನೆಗಳನ್ನು SEP ಅಲ್ಲಿ ಅಳವಡಿಸಿಕೊಳ್ಳಲು ಅವರು ಶಿಫಾರಸು ಮಾಡಿದರು.
“ಹಲವು ಸುಧಾರಣೆಗಳಲ್ಲಿ, ನಾವು ಮಧ್ಯಮ ಮಾರ್ಗವನ್ನು ತೆಗೆದುಕೊಳ್ಳಬೇಕು. ನಾವು ಮೂರು ವರ್ಷಗಳ ಪದವಿ ಕಾರ್ಯಕ್ರಮಗಳನ್ನು ಉಳಿಸಿಕೊಳ್ಳಬೇಕು. ಪದವಿ ಕಾರ್ಯಕ್ರಮದ ಅವಧಿಯನ್ನು ನಾಲ್ಕು ವರ್ಷಕ್ಕೆ ಹೆಚ್ಚಿಸುವುದು ಅಸಮಾನತೆಯನ್ನು ಸೃಷ್ಟಿಸುತ್ತದೆ” ಎಂದು ಥೋರಟ್ ಹೇಳಿದ್ದಾರೆ.
ಇದನ್ನೂ ಓದಿ: ಐಐಟಿಗಳಲ್ಲಿ ಸರಣಿ ಆತ್ಮಹತ್ಯೆ ಪ್ರಕರಣ; ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಲು ಹೊಸ ಮಾರ್ಗಗಳನ್ನು ಪರಿಚಯಿಸಲಿರುವ ಐಐಟಿ
ನವದೆಹಲಿಯ ಮೌಂಟ್ ಕಾರ್ಮೆಲ್ ಶಾಲೆಗಳ ಕಾರ್ಯದರ್ಶಿ ಮೈಕೆಲ್ ವಿಲಿಯಮ್ಸ್, ಎಲ್ಲರಿಗೂ ಶಿಕ್ಷಣವನ್ನು ಖಾತ್ರಿಪಡಿಸುವ ನೀತಿಯನ್ನು ರೂಪಿಸಲು ಮತ್ತು ವಿದ್ಯಾರ್ಥಿಗಳು ಇಂಗ್ಲಿಷ್ನಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಲು ಸಹಾಯ ಮಾಡಲು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು. “ಯಾರೂ ಹಿಂದೆ ಬೀಳದಂತೆ ನೋಡಿಕೊಳ್ಳಿ ಮತ್ತು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಿ” ಎಂದು ವಿಲಿಯಮ್ಸ್ ಸಲಹೆ ನೀಡಿದರು.
ಸಭೆಯಲ್ಲಿ ಹಾಜರಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಸ್‌ಇಪಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.
ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ