ಅರೆಬಿಕ್ ಹಾಗೂ ಉರ್ದು ಶಾಲೆಗಳಲ್ಲಿಯೂ ಎನ್ಇಪಿ ಅಸ್ತ್ರ ಕಡ್ಡಾಯ
ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಅರೆಬಿಕ್ ಹಾಗೂ ಊರ್ದು ಶಾಲೆಗಳಲ್ಲಿಯೂ ಈ ವರ್ಷದಿಂದಲೇ ಎನ್ಇಪಿ ಪಠ್ಯಕ್ರಮ ಜಾರಿಗೆ ಮಾಡಲು ಮುಂದಾಗಿದೆ.
ಬೆಂಗಳೂರು: ಭಾರತದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಸಾಕಷ್ಟು ವಿರೋಧದ ನಡುವೆಯೂ ಶಿಕ್ಷಣ ಇಲಾಖೆ ಎನ್ಇಪಿ (NEP) ಜಾರಿಗೆ ಮಾಡಿದೆ. ಈಗ ಸರ್ಕಾರ ಅರೆಬಿಕ್ (Arabic) ಹಾಗೂ ಉರ್ದು (Urdu) ಶಾಲೆಗಳ (School) ಮೇಲೂ ಶಿಕ್ಷಣ ಇಲಾಖೆ (Education Department) ಚಾಟಿ ಬಿಸಿದ್ದು, ಅರೆಬಿಕ್ ಹಾಗೂ ಉರ್ದು ಶಾಲೆಗಳಲ್ಲಿಯೂ ಎನ್ಇಪಿ ಜಾರಿ ಬಗ್ಗೆ ಯೋಜನೆ ರೂಪಿಸಿದೆ.
ಅರೆಬಿಕ್ ಹಾಗೂ ಉರ್ದು ಶಾಲೆಗಳ ಮೇಲೆ ಎನ್ಇಪಿ ಅಸ್ತ್ರ
ಶಿಕ್ಷಣ ಇಲಾಖೆ ಒಂದಲ್ಲ ಒಂದು ದರ್ಮ ದಂಗಲ್ಗೆ ಮುನ್ನಡೆ ಬರೆಯುತ್ತಲೆ ಇದೆ ಮದರಸಾಗಳ ಬಳಿಕ ಈಗ ಅರೆಬಿಕ್ ಹಾಗೂ ಉರ್ದು ಭಾಷಾ ಶಾಲೆಗಳ ಮೇಲೆ ಚಾಟಿ ಬೀಸಲು ಶಿಕ್ಷಣ ಇಲಾಖೆ ಹೊಸ ತಂತ್ರ ರೂಪಿಸಿದೆ. ಇಷ್ಟು ದಿನ ಮದರಸಾ ಶಾಲೆಗಳನ್ನು ಟಾರ್ಗೆಟ್ ಮಾಡಿದ್ದ ಶಿಕ್ಷಣ ಇಲಾಖೆ, ಈಗ ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಅರೆಬಿಕ್ ಹಾಗೂ ಊರ್ದು ಶಾಲೆಗಳಲ್ಲಿಯೂ ಈ ವರ್ಷದಿಂದಲೇ ಎನ್ಇಪಿ ಪಠ್ಯಕ್ರಮ ಜಾರಿಗೆ ಮಾಡಲು ಮುಂದಾಗಿದೆ.
ಡಿಸೆಂಬರ್ನಿಂದ ಅರೆಬಿಕ್ ಹಾಗೂ ಉರ್ದು ಶಾಲೆಗಳಲ್ಲಿಯೂ ಎನ್ಇಪಿ ಜಾರಿ
ಬರುವ ಡಿಸೆಂಬರ್ನಿಂದ ನಡೆಯಲಿರುವ ಎನ್ಇಪಿ ಮಾದರಿ ಪಾಠಗಳನ್ನು ಮಾಡಲು ಅರೆಬಿಕ್ ಹಾಗೂ ಉರ್ದು ಶಾಲೆಗಳನ್ನೂ ಆಯ್ಕೆ ಮಾಡಿಕೊಳ್ಳು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಮೂಲಕ ಮದರಸಾ ಶಾಲೆಗಳ ಜೊತೆ ಈಗ ಉರ್ದು ಮತ್ತು ಅರೆಬಿಕ್ ಶಾಲೆಗಳಲ್ಲಿ ಎನ್ಇಪಿ ಜಾರಿಗೆ ಮಾಡಲಾಗುತ್ತದೆ. ಈ ಮೂಲಕ ಮತ್ತೆ ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಈ ನಡೆಗೆ ದರ್ಮ ದಂಗಲ್ ಶುರುವಾಗುವ ಆತಂಕ ಎದುರಾಗಿದೆ.
“ರಾಜ್ಯದಲ್ಲಿರುವ ಎಲ್ಲ ಅರೇಬಿಕ್ ಶಾಲೆಗಳ ಮಕ್ಕಳು ಬೇರೆ ಶಾಲೆಗಳ ಮಕ್ಕಳಂತೆ ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಅರೇಬಿಕ್ ಹಾಗೂ ಉರ್ದು ಶಾಲೆಗಳಲ್ಲಿಯೂ ಎನ್ಇಪಿ ಜಾರಿ ಮಾಡಲಾಗುತ್ತೀದೆ. ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಮದರಸಾ, ಅರೇಬಿಕ್ ಹಾಗೂ ಉರ್ದು ಶಾಲೆಗಳಲ್ಲಿಯೂ ನಾವು ಎನ್ಇಪಿ ಜಾರಿಗೆ ಮಾಡುತ್ತೇವೆ” ಅಂತಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಸಿದ್ದಾರೆ.
ರಾಜ್ಯದಲ್ಲಿ 106 ಅನುದಾನಿತ ಅರೇಬಿಕ್ ಶಾಲೆಗಳು ಇವೆ. 80 ಅನುದಾನ ರಹಿತ ಶಾಲೆಗಳಿವೆ. ಇಲ್ಲಿ ಶಿಕ್ಷಣ ಇಲಾಖೆಯ ಪಠ್ಯಕ್ರಮದ ಅನುಸಾರ ಬೋಧನೆ ನಡೆಯುತ್ತಿಲ್ಲ ಎಂಬ ಆರೋಪಗಳಿವೆ. ಅನುದಾನಿತ ಶಾಲೆಗಳ ರೀತಿಯಲ್ಲಿ ಅರೇಬಿಕ್ ಶಾಲೆಗಳು ಶಿಕ್ಷಣ ನೀಡಬೇಕು. ಆದರೆ, ಬಹಳಷ್ಟು ಶಾಲೆಗಳಲ್ಲಿ ಭಾಷೆ ಮತ್ತು ವಿಜ್ಞಾನದ ಕಲಿಕೆ ಆಗುತ್ತಿಲ್ಲ. ರಾಜ್ಯದಲ್ಲಿ ಇಂತಹ ಶಾಲೆಗಳಿಗೆ ಅಂದರೆ ಅರೆಬೀಕ್ ಹಾಗೂ ಉರ್ದು ಮಾದರಿಯ ಶಾಲೆಗಳಿಗೆ ಪ್ರತಿವರ್ಷ ಸುಮಾರು 27 ಸಾವಿರ ಸಂಖ್ಯೆ ಮಕ್ಕಳು ಸೇರುತ್ತಾರೆ. ಆದರೆ, ಎಸ್‍ಎಸ್‍ಎಲ್‍ಸಿಯಲ್ಲಿ ಕೇವಲ 2 ಸಾವಿರ ವಿದ್ಯಾರ್ಥಿಗಳು ಮಾತ್ರವೇ ಪರೀಕ್ಷೆಗೆ ಹಾಜರಾಗ್ತಾರೆ. ಬಹಳಷ್ಟು ಶಾಲೆಗಳಲ್ಲಿ ನೋಂದಣಿಯಾದ ವಿದ್ಯಾರ್ಥಿಗಳಿಗೂ, ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೂ ಭಾರೀ ವ್ಯತ್ಯಾಸ ಇದೆ. ಅಂದರೆ ಒಂದು ನಿರ್ದಿಷ್ಟ ಧರ್ಮದ ಮಕ್ಕಳು ಶಾಲೆಗಳಿಂದ ಹೊರಗುಳಿಯುತ್ತಿದ್ದಾರೆ. ಇದು ಆಗಬಾರದು, ಎಲ್ಲರಿಗೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಶಿಕ್ಷಣ ದೊರಕಬೇಕು ಅನ್ನೋ ಅಂಶವನ್ನೆ ಮುಂದಿಟ್ಟುಕೊಂಡು ಅರೆಬಿಕ್ ಹಾಗೂ ಉರ್ದು ಶಾಲೆಗಳ ಮೇಲೆ ಶಿಕ್ಷಣ ಇಲಾಖೆ ಚಾಟಿ ಬಿಸಿದೆ. ಇದೇ ಡಿಸಬಂರ್ ನಿಂದ ಆ ಶಾಲೆಗಳಲ್ಲಿಯೂ ಎನ್ಇಪಿ ಪಠ್ಯಕ್ರಮದ ಮೂಲಕ ಮದರಸಾ, ಅರೇಬಿಕ್ ಹಾಗೂ ಉರ್ದು ಶಾಲೆಗಳ ಮೇಲೆ ಸಂಪೂರ್ಣ ಹಿಡತಕ್ಕೆ ಶಿಕ್ಷಣ ಸಚಿವರು ಮುಂದಾಗಿದ್ದಾರೆ
ಒಟ್ಟಿಲ್ಲಿ ರಾಜ್ಯದಲ್ಲಿ ಶಿಕ್ಷಣ ಇಲಾಖೆ ಹಠಕ್ಕೆ ಬಿದ್ದಂತೆ ಎನ್ಇಪಿ ಜಾರಿಗೆ ಮಾಡುವುದರ ಜೊತೆಗೆ ಮದರಸಾ, ಅರೆಬಿಕ್ ಹಾಗೂ ಉರ್ದು ಶಾಲೆಗಳಲ್ಲಿಯೂ ಕಡ್ಡಾಯ ಎನ್ಇಪಿ ಜಾರಿಗೆ ಮುಂದಾಗಿರೊದು ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರಕ್ಕೆ ಮುಂದಾಗಿದ್ದು ಶಿಕ್ಷಣ ಇಲಾಖೆಯ ಈ ನಡೆ ಹೊಸ ಧರ್ಮ ದಂಗಲ್ ಮುನ್ನಡಿ ಬರೆಯುವ ಸಾಧ್ಯತೆ ಎದುರಾಗಿದೆ.
ವರದಿ- ವಿನಯಕುಮಾರ್ ಕಾಶಪ್ಪನವರ್, ಟಿವಿ9, ಬೆಂಗಳೂರು