AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Devar Hippargi Election Result: ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ದೇವಾನು ದೇವತೆಗಳ ನಾಡಲ್ಲಿ ಮತದಾರರ ಕೃಪೆ ಯಾರ ಮೇಲೆ?

Devar Hippargi Assembly Election Result 2023 Live Counting Updates: ದೇವರ ಹಿಪ್ಪರಗಿ ದೇವಾನು ದೇವತೆಗಳ ನಾಡು ಎಂದೇ ಪ್ರಸಿದ್ಧಿ. 1972ರಿಂದ ಚುನಾವಣ ಇತಿಹಾಸ ಸಾರುವ ಹೂವಿನಹಿಪ್ಪರಗಿ ಕ್ಷೇತ್ರ, 2008ರಲ್ಲಿ ಕ್ಷೇತ್ರ ಮರು ವಿಂಗಡಣೆ ಬಳಿಕ ಕ್ಷೇತ್ರದ ಸ್ವರೂಪವೂ ಬದಲಾಗಿದ್ದು, ಈ ಬಾರಿಯ ವಿಧಾನಸಭೆ ಚುನಾವಣೆ ರಂಗೇರಿದೆ. ಕಾಂಗ್ರೆಸ್​ನಿಂದ ಶರಣಪ್ಪ ಟಿ ಸುಣಗಾರ್‌ ಕಣದಲ್ಲಿದ್ದರೆ, ಜೆಡಿಎಸ್​ನಿಂದ ರಾಜುಗೌಡ ಪಾಟೀಲ್‌ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಸೋಮನಗೌಡ ಪಾಟೀಲ್‌ (ಸಾಸನೂರು) ಸ್ಪರ್ಧೆಗಿಳಿದಿದ್ದಾರೆ. ಆದ್ರೆ, ಜಿದ್ದಾಜಿದ್ದಿ ಇರುವುದು ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ಮಾತ್ರ.

Devar Hippargi Election Result: ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ದೇವಾನು ದೇವತೆಗಳ ನಾಡಲ್ಲಿ ಮತದಾರರ ಕೃಪೆ ಯಾರ ಮೇಲೆ?
ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ
ರಮೇಶ್ ಬಿ. ಜವಳಗೇರಾ
| Edited By: |

Updated on: May 13, 2023 | 2:10 AM

Share

Devar Hippargi Assembly Election Result 2023: ವಿಜಯಪುರ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಒಂದಾಗಿರುವ ದೇವರ ಹಿಪ್ಪರಗಿ ದೇವಾನು ದೇವತೆಗಳ ನಾಡು ಎಂದೇ ಪ್ರಸಿದ್ಧಿ. 1972ರಿಂದ ಚುನಾವಣ ಇತಿಹಾಸ ಸಾರುವ ಹೂವಿನಹಿಪ್ಪರಗಿ ಕ್ಷೇತ್ರ, 2008ರಲ್ಲಿ ಕ್ಷೇತ್ರ ಮರು ವಿಂಗಡಣೆ ಬಳಿಕ ಕ್ಷೇತ್ರದ ಸ್ವರೂಪವೂ ಬದಲಾಗಿ, ದೇವರಹಿಪ್ಪರಗಿ ಹೆಸರಿನಲ್ಲಿ ಮರು ನಾಮಕರಣಗೊಂಡಿದ್ದು ಮೂರು ತಾಲೂಕುಗಳನ್ನು ಒಳಗೊಂಡಿದೆ.

ಹೂವಿನ ಹಿಪ್ಪರಗಿ ಕ್ಷೇತ್ರ(ಈಗಿನ ದೇವರ ಹಿಪ್ಪರಗಿ) ಅಸ್ತಿತ್ವಕ್ಕೆ ಬಂದಿದ್ದು 1967ರಲ್ಲಿ. ಆಗ ಕಾಂಗ್ರೆಸ್​ನ ಪಿಜಿ ನಿಂಗನಗೌಡ, 11972ರಲ್ಲಿ ಸಂಸ್ಥಾ ಕಾಂಗ್ರೆಸ್​ನ ಕೆಡಿ ಪಾಟೀಲ್​ ಆಯ್ಕೆಯಾಗಿದ್ದರು. ಆ ನಂತರ ನಡೆದ ಏಳು ಚುನಾವಣೆಗಳಲ್ಲಿ ಬೀಗರದ್ದೇ ಪಾರುಪತ್ಯ. ಮಾವ-ಅಳಿಯರಾಗಿದ್ದ ಶಿವಪುತ್ರಪ್ಪ ದೇಸಾಯಿ ಮತ್ತು ಬಿ ಎಸ್ ಪಾಟೀಲ ಸಾಸನೂರ ಅವರು 1978-2008ರವರೆಗೆ ಸುಮಾರು ಮೂರು ದಶಕಗಳ ಕಾಲ ಚುನಾವಣಾ ಅಖಾಡದಲ್ಲಿ ಪರಸ್ಪರ ವಿರೋಧಿಗಳಾಗಿದ್ದರು.

ದೇವರ ಹಿಪ್ಪರಗಿಯಲ್ಲಿ ಒಟ್ಟು 15 ಚುನಾವಣೆಗಳು ನಡೆದಿದ್ದು, ಇಲ್ಲಿನ ಮತದಾರರು ಕಾಂಗ್ರೆಸ್, ಜನತಾ ಪಕ್ಷ, ಜನತಾ ದಳ, ಬಿಜೆಪಿ, ಸ್ವತಂತ್ರ ಪಕ್ಷ ಸೇರಿದಂತೆ ಎಲ್ಲಾ ಪಕ್ಷಗಳನ್ನೂ ಬೆಂಬಲಿಸಿದ್ದಾರೆ. ಕೆ.ಡಿ.ಪಾಟೀಲ ಮೂಲಕ ಕಾಂಗ್ರೆಸ್‌ ತೆಕ್ಕೆಯಲ್ಲಿದ್ದ ಈ ಕ್ಷೇತ್ರವನ್ನು 1978ರಲ್ಲಿ ಜನತಾ ಪಕ್ಷದಿಂದ ಗೆದ್ದವರು ಬಿ.ಎಸ್‌.ಪಾಟೀಲ ಸಾಸನೂರು. ಬದಲಾದ ರಾಜಕೀಯ ಕಾರಣದಿಂದ ಬಿ.ಎಸ್‌. ಪಾಟೀಲ ಸಾಸನೂರು ಮತ್ತೆ ಕಾಂಗ್ರೆಸ್‌ ಸೇರಿ 1983ರಲ್ಲಿ ಗೆಲುವು ಸಾಧಿಸಿದ್ದರು. ಶಿವಪುತ್ರಪ್ಪ ದೇಸಾಯಿ ಮೂಲಕ 1986ರಲ್ಲಿ ಜನತಾಪಕ್ಷ, 19904ರಲ್ಲಿ ಜನತಾದಳ ಗೆದ್ದಿದ್ದರೆ, 2004ರಲ್ಲಿ ಇವರಿಂದಲೇ ಬಿಜೆಪಿ ಕಮಲ ಅರಳಿತ್ತು. ಅನಂತರ ನಡೆದ ಚುನಾವಣೆಯಲ್ಲಿ ಸತತ ಎರಡು ಬಾರಿ ಎ.ಎಸ್‌.ಪಾಟೀಲ ನಡಹಳ್ಳಿ ಮೂಲಕ ಕಾಂಗ್ರೆಸ್‌ ವಶವಾಗಿದ್ದ ಕ್ಷೇತ್ರದಲ್ಲೀಗ ಸಾಸನೂರು ಪುತ್ರ ಸೋಮನಗೌಡ ಪಾಟೀಲ ಬಿಜೆಪಿ ಶಾಸಕರಾಗಿದ್ದಾರೆ.

ಜಾತಿವಾರು ಪ್ರಾಬಲ್ಯ

ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ. ಲಿಂಗಾಯತ ಮತದಾರರು 60 ಸಾವಿರಕ್ಕೂ ಹೆಚ್ಚಿದ್ದಾರೆ. ಉಳಿದಂತೆ ಪರಿಶಿಷ್ಟ ಜಾತಿ 46 ಸಾವಿರ, ಪರಿಶಿಷ್ಟ ಪಂಗಡ 5 ಸಾವಿರ, ಮುಸ್ಲಿಂ 30 ಸಾವಿರ ಹಾಗೂ ಇತರೆ ಹಿಂದುಳಿದ ಸಮುದಾಯ 50 ಸಾವಿರಕ್ಕೂ ಮೇಲ್ಪಟ್ಟು ಮತದಾರರಿದ್ದಾರೆ.

2023ರ ಚುನಾವಣೆಯ ಚಿತ್ರಣ

ಕಾಂಗ್ರೆಸ್​ನಿಂದ ಶರಣಪ್ಪ ಟಿ ಸುಣಗಾರ್‌ ಕಣದಲ್ಲಿದ್ದರೆ, ಜೆಡಿಎಸ್​ನಿಂದ ರಾಜುಗೌಡ ಪಾಟೀಲ್‌ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಸೋಮನಗೌಡ ಪಾಟೀಲ್‌ (ಸಾಸನೂರು) ಸ್ಪರ್ಧೆಗಿಳಿದಿದ್ದಾರೆ. ಆದ್ರೆ, ಜಿದ್ದಾಜಿದ್ದಿ ಇರುವುದು ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ಮಾತ್ರ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ