Hungund Election Result: ಹುನಗುಂದ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಗ್ರಾನೈಟ್ ನಾಡಿನ ಅಧಿಪತಿ ಯಾರು?
Hungund Assembly Election Result 2023 Live Counting Updates: ಗ್ರಾನೈಟ್ ನಾಡಿ ಹುನುಗುಂದ ಪಾರುಪತ್ಯಕ್ಕೆ ಕಾಂಗ್ರೆಸ್ ವಿಜಯಾನಂದ ಕಾಶಪ್ಪನವರ್ ಹಾಗೂ ಬಿಜೆಪಿಯ ದೊಡ್ಡನಗೌಡ ನಡುವೆ ಬಿಗ್ ಫೈಟ್ ಇದ್ದು, ಗೆಲುವು ಯಾರಾ ಪಾಲಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

Hungund Assembly Election Result 2023: ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ ಹುನಗುಂದ. ಈ ತಾಲೂಕಿನಲ್ಲಿರುವ ಐಹೊಳೆಯನ್ನು ಭಾರತದ ವಾಸ್ತುಶಿಲ್ಪದ ತೊಟ್ಟಿಲು ಎಂದು ಕರೆಯುತ್ತಾರೆ. 12ನೇ ಶತಮಾನದ ಸಮಾಜ ಸುಧಾರಕರಾದ ಬಸವಣ್ಣ ಅವರು ಐಕ್ಯರಾದ ಕೂಡಲ ಸಂಗಮ ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಇಲ್ಲಿ ತಯಾರಾಗುವ ರೇಷ್ಮೆ ಸೀರೆ ವಿಶ್ವಪ್ರಸಿದ್ಧಿ ಪಡೆದಿದೆ. ಗ್ರಾನೈಟ್ ವ್ಯವಹಾರದಲ್ಲಿಯೂ ಕ್ಷೇತ್ರದ ಹೆಸರು ಚಿರಪರಿಚಿತ. ಮುಖ್ಯವಾಗಿ ಹುನಗುಂದ ಇಳಕಲ್ ಸೀರೆಗೆ ತುಂಬಾ ಫೇಮಸ್ ಆಗಿದ್ದು, ಇದಕ್ಕೆ ಬೇಡಿಕೆ ಇದೆ. ಹಾಗೆಯೇ ಗ್ರಾನೈಟ್ ವ್ಯವಹಾರದಲ್ಲಿಯೂ ಹುನಗುಂದ ಹೆಸರು ಚಿರಪರಿಚಿತ. ಇಲ್ಲಿ ದೊರೆಯುವ ಗುಲಾಬಿ ಬಣ್ಣದ ಗ್ರಾನೈಟ್ ನಾನಾ ದೇಶಗಳಿಗೆ ರಫ್ತಾಗುತ್ತದೆ.
ಇನ್ನು ಈ ಕ್ಷೇತ್ರದ ರಾಜಕೀಯವನ್ನು ನೋಡುವುದಾದರೆ ಕಳೆದ ಎರಡು ದಶಕಗಳಲ್ಲಿ ಕ್ಷೇತ್ರದ ಚುನಾವಣಾ ಇತಿಹಾಸ ಗಮನಿಸಿದರೆ ಇಲ್ಲಿ ಸದಾ ಬಿಜೆಪಿ–ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳಾಗಿವೆ. ಅದಕ್ಕೂ ಮೊದಲು ಹುನಗುಂದ ಕಾಂಗ್ರೆಸ್ಸಿನ ಭದ್ರಕೋಟೆಯಾಗಿತ್ತು.
2008ರಲ್ಲಿ ಬಿಜೆಪಿ ಎರಡನೇ ಅವಧಿಗೆ ಇಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗುತ್ತದೆ. ದೊಡ್ಡನಗೌಡ ಪಾಟೀಲ್ ಅವರು ಕಾಂಗ್ರೆಸ್ಸಿನ ವಿಜಯಾನಂದ ಕಾಶಪ್ಪನವರ್ ಅವರನ್ನು ಸೋಲಿಸಿದ್ದರು. ಆದ್ರೆ, 2013ರ ಚುನಾವಣೆಯಲ್ಲಿ ವಿಜಯಾನಂದ ಕಾಶಪ್ಪನವರ್ಭರ್ಜರಿ ಜಯ ಸಾಧಿಸುವುದರೊಂದಿಗೆ ಕಾಂಗ್ರೆಸಿನ ಹಿಡಿತಕ್ಕೆ ಕ್ಷೇತ್ರ ಮರಳುತ್ತದೆ. ಇನ್ನು ಕಳೆದ ಚುನಾವಣೆಯಲ್ಲಿ 2018ರ ಚುನಾವಣೆಯಲ್ಲಿ ಬಿಜೆಪಿಯ ದೊಡ್ಡನಗೌಡ ಪಾಟೀಲ್, ಕಾಂಗ್ರೆಸ್ನ ವಿಜಯಾನಂದ ಕಾಶಪ್ಪನವರ್ ಅವರನ್ನು 5227 5227 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಇದೀಗ 2023ರ ವಿಧಾನಸಭೆ ಚುನಾವಣೆಯಲ್ಲೂ ಸಹ ಇವರಿಬ್ಬರ ನಡುವೆ ಪೈಪೋಟಿ ನಡೆದಿದ್ದು, ಗೆಲುವಿನ ಮಾಲೆ ಯಾರ ಕೊರಳಿಗೆ ಎನ್ನುವುದನ್ನು ಕಾದುನೋಡಬೇಕಿದೆ.
ಕ್ಷೇತ್ರದಲ್ಲಿ ವೀರಶೈವ–ಲಿಂಗಾಯತ, ಪಂಚಮಸಾಲಿ ಲಿಂಗಾಯತ, ಬಣಜಿಗ, ಗಾಣಿಗ, ಕುರುಬ, ನೇಕಾರರು, ಪರಿಶಿಷ್ಟ ಜಾತಿ–ಪಂಗಡ, ಮುಸ್ಲಿಂ ಮತದಾರರ ಸಂಖ್ಯೆ ಗಣನೀಯವಾಗಿದ್ದು, ಈ ಎಲ್ಲ ಸಮುದಾಯಗಳು ಕೂಡ ಗೆಲುವಿನಲ್ಲಿ ನಿರ್ಣಾಯಕವಾಗಿವೆ.