Vijayanagara Election Result 2023: ವಿಜಯನಗರ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಆನಂದ್ ಸಿಂಗ್ ಮಗ ಸಿದ್ದಾರ್ಥ ಸೋಲು
Vijayanagars Assembly Election Results 2023: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ (Vijayanagara Assembly Constituency) ಕಾಂಗ್ರೆಸ್ ಪಕ್ಷದಿಂದ ಎಚ್‌ಆರ್ ಗವಿಯಪ್ಪ ವಿರುದ್ಧ ಬಿಜೆಪಿಯಿಂದ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಸ್ಪರ್ಧಿಸಿದ್ದಾರೆ.

Vijayanagara Election Result 2023:ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟವಾಗಿದೆ. ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ (Vijayanagara Assembly Constituency) ಕಾಂಗ್ರೆಸ್ ಪಕ್ಷದಿಂದ ಎಚ್‌ಆರ್ ಗವಿಯಪ್ಪ ವಿರುದ್ಧ ಬಿಜೆಪಿಯಿಂದ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಸ್ಪರ್ಧಿಸಿದ್ದಾರೆ. ವಿಜಯನಗರವು ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಅಡಿಯಲ್ಲಿ ಬರುತ್ತದೆ. ಕಾಂಗ್ರೆಸ್ ಪಕ್ಷದಿಂದ ಎಚ್‌ಆರ್ ಗವಿಯಪ್ಪ ಬಾರಿ ಮುನ್ನಡೆಯಲ್ಲಿ ಗೆದ್ದಿದ್ದಾರೆ. 2019 ರಲ್ಲಿ, ಭಾರತೀಯ ಜನತಾ ಪಕ್ಷದ ಆನಂದ್ ಸಿಂಗ್ ಅವರು 30125 ಮತಗಳ ಅಂತರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನವಿವೈ ಘೋರ್ಪಡೆ ಅವರನ್ನು ಸೋಲಿಸಿದರು.
ವಿಜಯನಗರ ಜಿಲ್ಲೆ ಆನಂದ್ ಸಿಂಗ್ ಪುತ್ರ ಸಿಧಾರ್ಥ ಅವರಿಗೆ ಬಹುದೊಡ್ಡ ಪ್ಲಸ್ ಪಾಯಿಂಟ್ ಎಂಬುದು ಸ್ಪಷ್ಟ, ಕಾಂಗ್ರೆಸ್ ಕೂಡ ಲಿಂಗಾಯತ ಸಮುದಾಯದ ಪ್ರಬಲ ಅಭ್ಯರ್ಥಿ ಎಚ್‌ಆರ್ ಗವಿಯಪ್ಪ ಅವರಿಗೆ ಟಿಕೆಟ್ ನೀಡಿತ್ತು. ವಿಜಯನಗರ ಕ್ಷೇತ್ರದಲ್ಲಿ ಒಟ್ಟು 220,653 ಮತದಾರರಿದ್ದಾರೆ, ಅದರಲ್ಲಿ ಪುರುಷ ಮತದಾರರ ಸಂಖ್ಯೆ 109,235, ಮಹಿಳಾ ಮತದಾರರ ಸಂಖ್ಯೆ 111,371, ಮಂಗಳಮುಖಿಯರು 47.
Published On - 4:09 am, Sat, 13 May 23