AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Assembly Election Voter Slip: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸುವುದು, ಫೋಟೊ ವೋಟರ್ ಸ್ಲಿಪ್ ಡೌನ್​ಲೋಡ್ ಮಾಡುವುದು ಹೇಗೆ

ಫೋಟೊ ವೋಟರ್ ಸ್ಲಿಪ್​ಗಳು ಒಂದು ವೇಳೆ ನಿಮಗೆ ಸಕಾಲಕ್ಕೆ ತಲುಪದಿದ್ದರೆ ನೀವೇ ಅದನ್ನು ಚುನಾವಣಾ ಆಯೋಗದ ವೆಬ್​ಸೈಟ್​ನಿಂದ ಡೌನ್​ಲೋಡ್ ಮಾಡಿಕೊಳ್ಳಬಹುದು

Assembly Election Voter Slip: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸುವುದು, ಫೋಟೊ ವೋಟರ್ ಸ್ಲಿಪ್ ಡೌನ್​ಲೋಡ್ ಮಾಡುವುದು ಹೇಗೆ
ಮತದಾರರ ಫೋಟೊ ಗುರುತಿನ ಚೀಟಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Feb 10, 2022 | 6:30 AM

Share

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೆ ಎಂದು ಪರಿಶೀಲಿಸುವುದು ತುಂಬಾ ಸುಲಭ. ಫೋಟೊ ವೋಟರ್ ಸ್ಲಿಪ್​ಗಳು ಒಂದು ವೇಳೆ ನಿಮಗೆ ಸಕಾಲಕ್ಕೆ ತಲುಪದಿದ್ದರೆ ನೀವೇ ಅದನ್ನು ಚುನಾವಣಾ ಆಯೋಗದ ವೆಬ್​ಸೈಟ್​ನಿಂದ ಡೌನ್​ಲೋಡ್ ಮಾಡಿಕೊಳ್ಳಬಹುದು. ಮತಗಟ್ಟೆ ಕೇಂದ್ರ, ಮತದಾನದ ದಿನಾಂಕ ಮತ್ತು ಕ್ಷೇತ್ರದ ವಿವರಗಳು ಫೋಟೊ ವೋಟರ್​ ಸ್ಲಿಪ್​ನಲ್ಲಿ ಸಿಗುತ್ತವೆ. ಉತ್ತರ ಪ್ರದೇಶದಲ್ಲಿ (Uttar Pradesh) ಮೊದಲ ಹಂತದ ಮತದಾನ ಫೆ 10ರಂದು ನಡೆಯಲಿದೆ.

ಫೋಟೊ ವೋಟರ್ ಸ್ಲಿಪ್ ಡೌನ್​ಲೋಡ್ ಮಾಡಿಕೊಳ್ಳುವ ಹಂತಹಂತದ ವಿವರ ಹೀಗಿದೆ. 1) ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್​ಗೆ (National Voters’ Service Portal – NVSP) ಭೇಟಿ ನೀಡಿ. ಪೋರ್ಟಲ್​ನ ವೆಬ್​ಸೈಟ್ https://www.nvsp.in/ 2) ಇದರಲ್ಲಿ ಎಲೆಕ್ಟ್ರಾಲ್ ರೋಲ್​ ಟ್ಯಾಬ್ ಕ್ಲಿಕ್ ಮಾಡಿ 3) ಹೊಸದೊಂದು ವೆಬ್​ಪೇಜ್ ಓಪನ್ ಆಗುತ್ತದೆ. ಅದರಲ್ಲಿ ವೋಟರ್ ಲಿಸ್ಟ್​ ಮೇಲೆ ಕ್ಲಿಕ್ ಮಾಡಿ 4) ನಿಮಗೆ ಮೊದಲ ಆಯ್ಕೆಯಲ್ಲಿ ವಿವರಗಳನ್ನು ನಮೂದಿಸಿ ಸ್ಲಿಪ್ ಹುಡುಕಲು ಅವಕಾಶ ಸಿಗುತ್ತದೆ. ನೀವು ನಿಮ್ಮ ಹೆಸರು, ನಿಮ್ಮ ತಂದೆ / ಗಂಡನ ಹೆಸರು, ವಯಸ್ಸು, ಜನ್ಮದಿನಾಂಕ ಮತ್ತು ಲಿಂಗದ ಆಧಾರದ ಮೇಲೆ ಹುಡುಕಬಹುದು. 5) ಮತ್ತೊಂದು ಆಯ್ಕೆಯಲ್ಲಿ ಎಪಿಕ್ ನಂಬರ್ ಅಂದರೆ ಚುನಾವಣಾ ಗುರುತಿನ ಚೀಟಿ ಸಂಖ್ಯೆಯ ಆಧಾರದ ಮೇಲೆ ನೀವು ವೋಟರ್ ಸ್ಲಿಪ್ ಹುಡುಕಬಹುದು. 6) ವೋಟರ್ ಐಡಿ ನಂಬರ್ (ಎಪಿಕ್ ನಂಬರ್) ಎಲ್ಲಿದೆ ಅಂತ ಗೊಂದಲಕ್ಕೆ ಒಳಗಾಗಬೇಡಿ. ಅದು ನಿಮ್ಮ ಚುನಾವಣಾ ಮತದಾರರ ಗುರುತಿನ ಚೀಟಿಯಲ್ಲಿ ಮೇಲೆಯೇ ಇರುತ್ತದೆ. 7) ಚುನಾವಣಾ ಗುರುತಿನ ಚೀಟಿಯ ವಿವರ ನೀಡಿದ ಮೇಲೆ ವೆಬ್​ಸೈಟ್​ನಲ್ಲಿ ಮತದಾರರ ಮಾಹಿತಿ ಪರದೆಯ ಮೇಲೆ ಬರುತ್ತದೆ 8) ಒಂದು ವೇಳೆ ನಿಮ್ಮ ಹೆಸರು ಚುನಾವಣಾ ಆಯೋಗದ ವಿರದಲ್ಲಿ ಇಲ್ಲದಿದ್ದರೆ ನೋ ರೆಕಾರ್ಡ್ಸ್​ ಫೌಂಡ್ ಎಂಬ ಮಾಹಿತಿ ಪರದೆಯ ಮೇಲೆ ಮೂಡಿ ಬರುತ್ತದೆ

ನೀವು ಎಸ್​ಎಂಎಸ್ ಮೂಲಕವೂ ವೋಟರ್ ಲಿಸ್ಟ್ ಮಾಹಿತಿ ಪಡೆಯಬಹುದು 1) ನಿಮ್ಮ ಮೊಬೈಲ್​ನಲ್ಲಿ EPIC ಎಂದು ಟೈಪ್ ಮಾಡಿ 2) ನಿಮ್ಮ ವೋಟರ್ ಐಡಿ ನಮೂದಿಸಿ 3) ಈ ಮೆಸೇಜ್ ಅನ್ನು 9211728082 ಅಥವಾ 1950 ಸಂಖ್ಯೆಗೆ ಎಸ್​ಎಂಎಸ್ ಮಾಡಿ 4) ನಿಮ್ಮ ಮತಗಟ್ಟೆ ಸಂಖ್ಯೆ ಮತ್ತು ಹೆಸರು ನಿಮ್ಮ ಫೋನ್ ಸ್ಕ್ರೀನ್ ಮೇಲೆ ಮೂಡಿಬರಲಿದೆ 5) ಒಂದು ವೇಳೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ ನೊ ರೆಕಾರ್ಡ್ಸ್​ ಫೌಂಡ್ ಎಂಬ ಸಂದೇಶ ಬರುತ್ತದೆ.

ಇದನ್ನೂ ಓದಿ: UP Election Voting 2022 Live Streaming ಮೊದಲ ಹಂತದ ಚುನಾವಣೆ ನಾಳೆ, ಮತದಾನಕ್ಕೆ ಸಜ್ಜಾದ ಉತ್ತರ ಪ್ರದೇಶ

ಇದನ್ನೂ ಓದಿ: PM Modi Interview: ಉತ್ತರ ಪ್ರದೇಶದಲ್ಲಿ ಬಿಜೆಪಿ ಪರ ಅಲೆ ಇದೆ: ಪ್ರಧಾನಿ ನರೇಂದ್ರ ಮೋದಿ

‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ