AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Career Guide: Pharm.D ಎಂದರೇನು? ಈ ಕೋರ್ಸ್​​​ನ ಪ್ರವೇಶಾತಿ, ಶುಲ್ಕ ಹಾಗೂ ವೃತ್ತಿ ಅವಕಾಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಫಾರ್ಮಸಿ ಕ್ಷೇತ್ರದಲ್ಲಿ ಉನ್ನತ ವೃತ್ತಿಪರ ಪದವಿಯಾದ ಫಾರ್ಮ್ ಡಿ (ಡಾಕ್ಟರ್ ಆಫ್ ಫಾರ್ಮಸಿ) ಪದವಿಯ ಬಗ್ಗೆ ಇಲ್ಲಿ ವಿವರಿಸಲಾಗಿದೆ. 6 ವರ್ಷಗಳ ಈ ಕೋರ್ಸ್‌ನ ಅರ್ಹತೆ, ಶುಲ್ಕ, ಉದ್ಯೋಗಾವಕಾಶಗಳು ಮತ್ತು ಬೆಂಗಳೂರಿನ ಪ್ರಮುಖ ಕಾಲೇಜುಗಳ ಮಾಹಿತಿಯನ್ನು ಇದು ಒಳಗೊಂಡಿದೆ. ಪ್ರವೇಶ ಪರೀಕ್ಷೆಗಳು, ವೇತನದ ವಿವರಗಳು ಮತ್ತು ಉದ್ಯೋಗ ನೀಡುವ ಪ್ರಮುಖ ಕಂಪನಿಗಳ ಪಟ್ಟಿಯನ್ನು ಸಹ ನೀಡಲಾಗಿದೆ.

Career Guide: Pharm.D ಎಂದರೇನು? ಈ ಕೋರ್ಸ್​​​ನ ಪ್ರವೇಶಾತಿ, ಶುಲ್ಕ ಹಾಗೂ ವೃತ್ತಿ ಅವಕಾಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ
Doctor Of Pharmacy
ಅಕ್ಷತಾ ವರ್ಕಾಡಿ
|

Updated on:May 06, 2025 | 2:14 PM

Share

ಫಾರ್ಮಾ ಡಿ(Pharm.D) ಎಂಬುದು ಫಾರ್ಮಸಿಯಲ್ಲಿ ವೃತ್ತಿಪರ ಡಾಕ್ಟರೇಟ್ ಪದವಿಯಾಗಿದ್ದು , ಇದು ಕ್ಲಿನಿಕಲ್ ಸ್ಟಡಿ, ರೋಗಿಗಳ ಆರೈಕೆ ಮತ್ತು ಔಷಧಿ ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತದೆ. ಫಾರ್ಮ್ ಡಿ ಅಂದರೆ ಡಾಕ್ಟರ್ ಆಫ್ ಫಾರ್ಮಸಿ ಆಗಿದೆ. ಫಾರ್ಮ್ ಡಿ ಕೋರ್ಸ್ ಅವಧಿಯು ಒಟ್ಟು 6 ವರ್ಷಗಳಿದ್ದು , ಇದರಲ್ಲಿ ಐದು ವರ್ಷಗಳ ಶೈಕ್ಷಣಿಕ ಅಧ್ಯಯನ ಮತ್ತು ಆಸ್ಪತ್ರೆಯಲ್ಲಿ ಅಥವಾ ಕ್ಲಿನಿಕಲ್ ಸೆಟ್ಟಿಂಗ್‌ನಲ್ಲಿ ಒಂದು ವರ್ಷದ ಇಂಟರ್ನ್‌ಶಿಪ್  ಒಳಗೊಂಡಿರುತ್ತದೆ.

ಫಾರ್ಮ್ ಡಿ ಅರ್ಹತಾ ಮಾನದಂಡಗಳು:

ಫಾರ್ಮ್ ಡಿ ಅರ್ಹತಾ ಮಾನದಂಡಗಳ ಪ್ರಕಾರ ಅಭ್ಯರ್ಥಿಗಳು ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಕನಿಷ್ಠ ಶೇ. 50 ಅಂಕಗಳೊಂದಿಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇನ್ನೂ ಕೆಲವು ವಿಶ್ವವಿದ್ಯಾಲಯಗಳು ಅಥವಾ ಕಾಲೇಜುಗಳು ಈ ಕೋರ್ಸ್‌ಗೆ ಅಭ್ಯರ್ಥಿಗಳು ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತವೆ. ಬಿ ಫಾರ್ಮಸಿ ಪದವೀಧರರು ಲ್ಯಾಟರಲ್ ಎಂಟ್ರಿ ಪ್ರವೇಶದ ಮೂಲಕ ಫಾರ್ಮ್ ಡಿ ಪದವಿಯನ್ನು ಪ್ರವೇಶಿಸಬಹುದು. NEET, MHT CET, GPAT, ಇತ್ಯಾದಿಗಳು ಭಾರತದ ಅತ್ಯುತ್ತಮ ಫಾರ್ಮಸಿ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಕೆಲವು ಅತ್ಯುತ್ತಮ ಪ್ರವೇಶ ಪರೀಕ್ಷೆಗಳಾಗಿವೆ .

ಫಾರ್ಮ್ ಡಿ ಕೋರ್ಸ್ ಶುಲ್ಕ ಎಷ್ಟು?

ಫಾರ್ಮ್ ಡಿ ಕೋರ್ಸ್ ಶುಲ್ಕಗಳು ವಿವಿಧ ಕಾಲೇಜುಗಳಿಗೆ ಅನುಗುಣವಾಗಿ ಭಿನ್ನವಾಗಿರುತ್ತದೆ. ನಿರ್ದಿಷ್ಟ ವಿದ್ಯಾರ್ಥಿವೇತನಗಳು  ಆಧರಿಸಿ ಬದಲಾಗಬಹುದು. ಸಾಮಾನ್ಯವಾಗಿ 2.3 ಲಕ್ಷದಿಂದ ಪ್ರಾರಂಭವಾಗಿ 9.6 ಲಕ್ಷದವರೆಗೆ ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ
Image
ಕೃಷಿ ಎಂಜಿನಿಯರಿಂಗ್‌ನಲ್ಲಿ ಹಲವು ಉದ್ಯೋಗವಕಾಶ; ತಿಂಗಳಿಗೆ ಲಕ್ಷ ಲಕ್ಷ ಸಂಬಳ!
Image
ಪಿಯುಸಿ ಪಾಸ್ ಆದವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗಾವಕಾಶ
Image
ಇಸ್ರೋದಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ನೇಮಕಾತಿ
Image
ನಾಸಾದಲ್ಲಿಯೂ ಇಂಟರ್ನ್‌ಶಿಪ್ ಅವಕಾಶವಿದೆಯೇ?

ಬೆಂಗಳೂರಿನ ಟಾಪ್ ಫಾರ್ಮಸಿ ಕಾಲೇಜುಗಳು:

ಬೆಂಗಳೂರಿನಲ್ಲಿ ಸುಮಾರು 4 ಉನ್ನತ ಫಾರ್ಮಸಿ ಕಾಲೇಜುಗಳಿವೆ ಮತ್ತು ಅವೆಲ್ಲವೂ ಖಾಸಗಿ ಸಂಸ್ಥೆಗಳ ಒಡೆತನದಲ್ಲಿದೆ. ಬೆಂಗಳೂರಿನ ಅತ್ಯುತ್ತಮ ಫಾರ್ಮಸಿ ಕಾಲೇಜುಗಳಿಗೆ ಪ್ರವೇಶ ಪಡೆಯಲು ಕೆಸಿಇಟಿ ಮತ್ತು ರುಸಾಟ್ ಜನಪ್ರಿಯ ಪ್ರವೇಶ ಪರೀಕ್ಷೆ ಬರೆಯಬೇಕು . ಎಂಎಸ್ ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ, ಆಚಾರ್ಯ ಬಿಎಂ ರೆಡ್ಡಿ ಫಾರ್ಮಸಿ ಕಾಲೇಜು, ಕೆಎಲ್ಇ ಫಾರ್ಮಸಿ ಕಾಲೇಜು ಮತ್ತು ಕೃಪಾನಿಧಿ ಫಾರ್ಮಸಿ ಕಾಲೇಜು ಬೆಂಗಳೂರಿನ ಟಾಪ್ ಫಾರ್ಮಸಿ ಕಾಲೇಜುಗಳಾಗಿವೆ.

ಫಾರ್ಮ್ ಡಿ ಉದ್ಯೋಗವಕಾಶಗಳು:

ಫಾರ್ಮ್ ಡಿ ಕೋರ್ಸ್ ಪೂರ್ಣಗೊಳಿಸಿದ ನಂತರ, ಪದವೀಧರರು ಕ್ಲಿನಿಕಲ್ ಫಾರ್ಮಾಸಿಸ್ಟ್‌ಗಳು, ಆಸ್ಪತ್ರೆ ಫಾರ್ಮಸಿ ನಿರ್ದೇಶಕರು, ಆಸ್ಪತ್ರೆ ಸಿಬ್ಬಂದಿ ಫಾರ್ಮಸಿಸ್ಟ್‌ಗಳು, ಚಿಲ್ಲರೆ ಫಾರ್ಮಸಿಸ್ಟ್‌ಗಳು, ಔಷಧ ತಜ್ಞರು ಮತ್ತು ಫಾರ್ಮಸಿಸ್ಟ್‌ಗಳಂತಹ ಉದ್ಯೋಗಗಳನ್ನು ಆಯ್ಕೆ ಮಾಡಬಹುದು . ಔಷಧಿ ತಯಾರಿಕಾ ಕಂಪನಿಯಲ್ಲಿ ಮತ್ತು ಶಿಕ್ಷಣ ವಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಬಹುದು. ಭಾರತದಲ್ಲಿ ಪದವೀಧರರು ಗಳಿಸುವ ಸರಾಸರಿ ಫಾರ್ಮ್ ಡಿ ವೇತನವು 2.30 ಲಕ್ಷದಿಂದ 10ಲಕ್ಷದ ನಡುವೆ ಇರುತ್ತದೆ.

ಫಾರ್ಮಾ ಡಿ ಬಳಿಕ ಉದ್ಯೋಗವಕಾಶ ನೀಡುವ ಪ್ರಮುಖ ಕಂಪನಿಗಳು:

ಲುಪಿನ್, ಸಿಪ್ಲಾ, ಪಿರಾಮಲ್, ಸನ್ ಫಾರ್ಮಾಸ್ಯುಟಿಕಲ್ಸ್, ಅರಬಿಂದೋ ಫಾರ್ಮಾ, ಡಾ. ರೆಡ್ಡೀಸ್ ಲ್ಯಾಬೋರೇಟರೀಸ್, ಮೈಲಾನ್ ಫಾರ್ಮಾಸ್ಯುಟಿಕಲ್ಸ್ ಇಂಕ್., ಜೈಡಸ್ ಕ್ಯಾಡಿಲಾ, ಇತ್ಯಾದಿ ಔಷಧಿ ತಯಾರಿಕಾ ಕಂಪನಿಯಲ್ಲಿ ನೀವು ಉತ್ತಮ ವೇತನದೊಂದಿಗೆ ಕೆಲಸವನ್ನು ಪಡೆಯಬಹುದು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:13 pm, Tue, 6 May 25

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ