IAF AFCAT Recruitment 2024: ಭಾರತೀಯ ವಾಯುಪಡೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿದ್ದವರಿಗೆ ಇಲ್ಲೊಂದು ಸುವರ್ಣವಕಾಶವಿದೆ. ಭಾರತೀಯ ವಾಯುಪಡೆ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಒಟ್ಟು 336 ಹುದ್ದೆಗಳು ಖಾಲಿಯಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಹುದ್ದೆಗಳ ವಿವರ, ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಹಾಗೂ ಅರ್ಜಿ ಶುಲ್ಕ ಸೇರಿದಂತೆ ಪ್ರಮುಖ ಮಾಹಿತಿಯನ್ನು ತಿಳಿದುಕೊಳ್ಳುವುದು ಅಗತ್ಯ. ಆ ಕುರಿತಾದ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

IAF AFCAT Recruitment 2024: ಭಾರತೀಯ ವಾಯುಪಡೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 20, 2024 | 6:18 PM

ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಫ್ಲೈಯಿಂಗ್ ಬ್ರಾಂಚ್ , ಗ್ರೌಂಡ್ ಡ್ಯೂಟಿ ಟೆಕ್ನಿಕಲ್ / ನಾನ್ ಟೆಕ್ನಿಕಲ್ ಹುದ್ದೆಗಳು ಸೇರಿದಂತೆ ಒಟ್ಟು 336 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ afcat.cdac.in ಗೆ ಭೇಟಿ ನೀಡಿ ಮಾಹಿತಿ ಪಡೆದು ಡಿಸೆಂಬರ್ 31 ರೊಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ

* ಸಂಸ್ಥೆಯ ಹೆಸರು : ಭಾರತೀಯ ವಾಯುಪಡೆ

* ಹುದ್ದೆಯ ಹೆಸರು : ಫ್ಲೈಯಿಂಗ್ ಬ್ರಾಂಚ್, ಗ್ರೌಂಡ್ ಡ್ಯೂಟಿ (ತಾಂತ್ರಿಕ), ಗ್ರೌಂಡ್ ಡ್ಯೂಟಿ (ತಾಂತ್ರಿಕೇತರ)

* ಒಟ್ಟು ಹುದ್ದೆಗಳ ಸಂಖ್ಯೆ : 336 ಹುದ್ದೆಗಳು

ಶೈಕ್ಷಣಿಕ ಅರ್ಹತೆ

* ಫ್ಲೈಯಿಂಗ್ ಬ್ರಾಂಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯವನ್ನು ಅಧ್ಯಯನ ಮಾಡಿದ್ದು, ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇದರೊಂದಿಗೆ ಕನಿಷ್ಠ 60% ಅಂಕಗಳೊಂದಿಗೆ ಬ್ಯಾಚುಲರ್ ಪದವಿ ಅಥವಾ ಬಿಇ/ಬಿ ಟೆಕ್ ಪದವಿಯನ್ನು ಪಡೆದಿರಬೇಕು.

* ಗ್ರೌಂಡ್ ಡ್ಯೂಟಿ (ತಾಂತ್ರಿಕ ಹಾಗೂ ತಾಂತ್ರಿಕೇತರ ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯವನ್ನು ಅಧ್ಯಯನ ಮಾಡಿದ್ದು, ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಲ್ಲದೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ/ಬಿಟೆಕ್ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ

* ಫ್ಲೈಯಿಂಗ್ ಶಾಖೆ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ರಿಂದ ಗರಿಷ್ಠ ವಯಸ್ಸು 24 ವರ್ಷ ದಾಟಿರಬಾರದು. ಡಿಜಿಸಿಎ (ಭಾರತ) ನೀಡಿದ ಮಾನ್ಯ ಮತ್ತು ಪ್ರಸ್ತುತ ವಾಣಿಜ್ಯ ಪೈಲಟ್ ಪರವಾನಗಿ ಹೊಂದಿರುವ ಅಭ್ಯರ್ಥಿಗಳಿಗೆ 2 ವರ್ಷಗಳವರೆಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

* ಗ್ರೌಂಡ್ ಡ್ಯೂಟಿ (ತಾಂತ್ರಿಕ ಮತ್ತು ತಾಂತ್ರಿಕೇತರ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸಿನ ಮಿತಿ 20 ವರ್ಷ ಹಾಗೂ ಗರಿಷ್ಠ ವಯಸ್ಸು 26 ವರ್ಷ ದಾಟಿರಬಾರದು.

ಅರ್ಜಿ ಶುಲ್ಕ

* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 550 ರೂಪಾಯಿ ಅರ್ಜಿ ಶುಲ್ಕವಿರುತ್ತದೆ. ಆದರೆ ಎನ್ ಸಿ ಸಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ

* ಈ ಮೇಲ್ಕಂಡ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಎಎಫ್ ಎಸ್ ಬಿ ಪರೀಕ್ಷೆ ನಡೆಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು

* ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 02-12-2024

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-12-2024

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಟಿ ರವಿ ಪ್ರಕರಣ ವಿಚಾರಣೆ ಆರಂಭ
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಟಿ ರವಿ ಪ್ರಕರಣ ವಿಚಾರಣೆ ಆರಂಭ
ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ
ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ
ರವಿ ಮನೆಯಲ್ಲಿ ಪ್ರಾಣೇಶ್ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು
ರವಿ ಮನೆಯಲ್ಲಿ ಪ್ರಾಣೇಶ್ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು
ಸ್ಪರ್ಧಿಗಳಿಗೆ ಇನ್ನಷ್ಟು ಕಷ್ಟ ಕೊಟ್ಟ ಬಿಗ್ ಬಾಸ್; ಭವ್ಯಾ, ಐಶ್ವರ್ಯಾ ಪರದಾಟ
ಸ್ಪರ್ಧಿಗಳಿಗೆ ಇನ್ನಷ್ಟು ಕಷ್ಟ ಕೊಟ್ಟ ಬಿಗ್ ಬಾಸ್; ಭವ್ಯಾ, ಐಶ್ವರ್ಯಾ ಪರದಾಟ
ಮಾಜಿ ಗೃಹ ಸಚಿವನಾದ ತನ್ನನ್ನು ಠಾಣೆಯೊಳಗೆ ಬರಗೊಡಲಿಲ್ಲ: ಅಶೋಕ
ಮಾಜಿ ಗೃಹ ಸಚಿವನಾದ ತನ್ನನ್ನು ಠಾಣೆಯೊಳಗೆ ಬರಗೊಡಲಿಲ್ಲ: ಅಶೋಕ
ನೀರಾಹಾರವಿಲ್ಲದೆ ರವಿ ದೈಹಿಕ ಮತ್ತು ಮಾನಸಿಕವಾಗಿ ವಿಪರೀತ ಬಳಲಿದ್ದಾರೆ: ವಕೀಲ
ನೀರಾಹಾರವಿಲ್ಲದೆ ರವಿ ದೈಹಿಕ ಮತ್ತು ಮಾನಸಿಕವಾಗಿ ವಿಪರೀತ ಬಳಲಿದ್ದಾರೆ: ವಕೀಲ
ನಾವು ಠಾಣೆಗೆ ಹೋಗಿದ್ದನ್ನು ಪ್ರಶ್ನಿಸಲು ಶಿವಕುಮಾರ್ ಯಾರು? ಅಶೋಕ
ನಾವು ಠಾಣೆಗೆ ಹೋಗಿದ್ದನ್ನು ಪ್ರಶ್ನಿಸಲು ಶಿವಕುಮಾರ್ ಯಾರು? ಅಶೋಕ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು