ಅ.4 ರಂದು ರಾಷ್ಟ್ರೀಯ ಅಭ್ಯಾಸಾವಧಿ ಮೇಳ; 1 ಲಕ್ಷ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‍ಶಿಪ್ ತರಬೇತಿ ನೀಡುವ ಗುರಿ

ಸುಮಾರು ಒಂದು ಲಕ್ಷ ಅಭ್ಯಾಸಾವಧಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಮತ್ತು ಉದ್ಯೋಗದಾತರು ಸರಿಯಾದ ಪ್ರತಿಭೆಗಳನ್ನು ಶೋಧಿಸುವುದಕ್ಕೆ ನೆರವಾಗಿ, ತರಬೇತಿ ಹಾಗು ವಾಸ್ತವ ಕೌಶಲಗಳ ಮೂಲಕ ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದಕ್ಕೆ ಬೆಂಬಲ ಒದಗಿಸುವುದು ಈ ಉಪಕ್ರಮದ ಗುರಿಯಾಗಿದೆ.

ಅ.4 ರಂದು ರಾಷ್ಟ್ರೀಯ ಅಭ್ಯಾಸಾವಧಿ ಮೇಳ; 1 ಲಕ್ಷ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‍ಶಿಪ್ ತರಬೇತಿ ನೀಡುವ ಗುರಿ
ಅಪ್ರೆಂಟಿಸ್‍ಶಿಪ್ ತರಬೇತಿ
Follow us
TV9 Web
| Updated By: ganapathi bhat

Updated on:Oct 03, 2021 | 5:51 PM

ಬೆಂಗಳೂರು: ತರಬೇತಿಯ ಮಹಾನಿರ್ದೇಶನಾಲಯ (ಡಿಜಿಟಿ) ಮತ್ತು ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ (ಎನ್‍ಎಸ್‍ಡಿಸಿ)ದ ಬೆಂಬಲದೊಂದಿಗೆ ಸ್ಕಿಲ್ ಇಂಡಿಯಾ ಅಕ್ಟೋಬರ್ 4, 2021 ರಂದು ದೇಶಾದ್ಯಂತ 400 ಕ್ಕಿಂತ ಹೆಚ್ಚಿನ ಪ್ರದೇಶಗಳಲ್ಲಿ ಒಂದು ದಿನದ ರಾಷ್ಟ್ರೀಯ ಅಭ್ಯಾಸಾವಧಿ (ಅಪ್ರೆಂಟಿಸ್‍ಶಿಪ್) ಮೇಳ ಆಯೋಜಿಸುತ್ತಿದೆ. ಸುಮಾರು ಒಂದು ಲಕ್ಷ ಅಭ್ಯಾಸಾವಧಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಮತ್ತು ಉದ್ಯೋಗದಾತರು ಸರಿಯಾದ ಪ್ರತಿಭೆಗಳನ್ನು ಶೋಧಿಸುವುದಕ್ಕೆ ನೆರವಾಗಿ, ತರಬೇತಿ ಹಾಗು ವಾಸ್ತವ ಕೌಶಲಗಳ ಮೂಲಕ ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದಕ್ಕೆ ಬೆಂಬಲ ಒದಗಿಸುವುದು ಈ ಉಪಕ್ರಮದ ಗುರಿಯಾಗಿದೆ.

ವಿದ್ಯುತ್, ರೀಟೇಲ್, ಟೆಲಿಕಾಮ್, ಐಟಿ/ ಐಟಿಇಎಸ್, ಎಲೆಕ್ಟ್ರಾನಿಕ್ಸ್, ಆಟೋಮೋಟಿವ್ ಮತ್ತು ಇನ್ನೂ ಮುಂತಾದ 30 ಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ 2000 ಕ್ಕಿಂತ ಹೆಚ್ಚಿನ ಸಂಸ್ಥೆಗಳಿಂದ ಭಾಗವಹಿಸುವಿಕೆಯನ್ನು ನಿರೀಕ್ಷಿಸಲಾಗಿದೆ. ಇದರ ಜೊತೆಗೆ, ಮಹತ್ವಾಕಾಂಕ್ಷೆಯುಳ್ಳ ಯುವಕರು, ವೆಲ್ಡರ್, ಎಲೆಕ್ಟ್ರಿಶಿಯನ್, ಹೌಸ್‍ಕೀಪರ್, ಬ್ಯೂಟೀಶಿಯನ್, ಮೆಕ್ಯಾನಿಕ್ ಒಳಗೊಂಡಂತೆ 500+ ವ್ಯಾಪಾರಗಳಲ್ಲಿ ತೊಡಗಿಕೊಳ್ಳುವ ಮತ್ತು ಆಯ್ದುಕೊಳ್ಳುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

ಈ ಅಭ್ಯಾಸಾವಧಿ ಮೇಳಕ್ಕೆ 5 ರಿಂದ 12ನೆ ತರಗತಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು, ಕುಶಲ ತರಬೇತಿ ಪ್ರಮಾಣಪತ್ರಗಳನ್ನು ಪಡೆದವರು, ಐಟಿಐ ವಿದ್ಯಾರ್ಥಿಗಳು, ಡಿಪ್ಲೋಮ ಹೊಂದಿದವರು, ಮತ್ತು ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ಆಯಾ ಸ್ಥಳಗಳಿಗೆ, ಅವರ ರೆಸ್ಯುಮೆಯ ಮೂರು ಪ್ರತಿಗಳು, ಎಲ್ಲಾ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳ (5ರಿಂದ 12ನೆ ತರಗತಿವರೆಗೆ ತೇರ್ಗಡೆ, ಕೌಶಲ ತರಬೇತಿ ಪ್ರಮಾಣಪತ್ರ, ಪದವಿಪೂರ್ವ ಹಾಗೂ ಪದವಿ (ಬಿ.ಎ., ಬಿ.ಕಾಮ್, ಬಿ.ಎಸ್‍ಸಿ ಇತ್ಯಾದಿ)ಯ ಮೂರು ಪ್ರತಿಗಳು, ಭಾವಚಿತ್ರ ಐಡಿ (ಆಧಾರ್ ಕಾರ್ಡ್/ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ) ಮತ್ತು ಮೂರು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳನ್ನು ತೆಗೆದುಕೊಂಡು ಹೋಗಬೇಕು ಎಂದು ತಿಳಿಸಲಾಗಿದೆ.

ಮೇಳ ನಡೆಯುವ ಸ್ಥಳ ಕುರಿತಾದ ಹೆಚ್ಚಿನ ವಿವರಗಳು ಹಾಗೂ ಇತರ ವಿವರಗಳಿಗಾಗಿ ಅಭ್ಯರ್ಥಿಗಳು ಇಲ್ಲಿ ಕ್ಲಿಕ್ ಮಾಡಬಹುದು.

‘ಪ್ರಧಾನ ಮಂತ್ರಿಗಳು ಜುಲೈ 15, 2015ರಂದು ಪ್ರಾರಂಭಿಸಿದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಷ್ಟ್ರೀಯ ನೀತಿ 2015(National Policy of Skill Development and Entrepreneurship), ಅಭ್ಯಾಸಾವಧಿ ತರಬೇತಿಯನ್ನು(ಅಪ್ರೆಂಟಿಸ್‍ಶಿಪ್), ಸೂಕ್ತವಾದ ಪರಿಹಾರಗಳೊಂದಿಗೆ ಕುಶಲ ಕಾರ್ಯಪಡೆಗೆ ಲಾಭದಾಯಕ ಉದ್ಯೋಗವನ್ನು ಒದಗಿಸುವ ಮಾರ್ಗವಾಗಿ ಗುರುತಿಸಿದೆ.

ದೇಶದಲ್ಲಿ ಉದ್ಯಮಗಳು ಅಪ್ರೆಂಟಿಸ್‍ಗಳನ್ನು ನೇಮಕ ಮಾಡಿಕೊಳ್ಳುವ ಸಂಖ್ಯೆಯನ್ನು ಹೆಚ್ಚಿಸಲು ಕೂಡ ಎಮ್‍ಎಸ್‍ಡಿಇ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಕುಶಲ ಕಾರ್ಯಪಡೆಗೆ ಇರುವ ಸರಬರಾಜು ಹಾಗೂ ಬೇಡಿಕೆಯ ನಡುವಣ ಅಂತರವನ್ನು ಭರ್ತಿ ಮಾಡಿ, ಉದ್ಯೋಗದ ಮೇಲಿನ ತರಬೇತಿಯನ್ನು ಪಡೆದುಕೊಂಡು ಉತ್ತಮ ಉದ್ಯೋಗಾವಕಾಶಗಳನ್ನು ಗಿಟ್ಟಿಸಿಕೊಳ್ಳುವಂತೆ ಮಾಡುವ ಮೂಲಕ ಭಾರತೀಯ ಯುವಜನತೆಯ ಮಹತ್ವಾಕಾಂಕ್ಷೆಗಳನ್ನು ಪೂರೈಸುವುದು ಇದರ ಗುರಿಯಾಗಿದೆ.

ಈ ಅಭ್ಯಾಸಾವಧಿ ತರಬೇತಿ ಮೇಳಕ್ಕೆ ಬರುವುದರಿಂದ ಸಂಭಾವ್ಯ ಅರ್ಜಿದಾರರು ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ. ಸ್ಥಳದಲ್ಲೇ ಅಪ್ರೆಂಟಿಸ್‍ಶಿಪ್ ದೊರಕುವ ಮತ್ತು ನೇರ ಉದ್ಯಮ ತೆರೆದುಕೊಳ್ಳುವಿಕೆಯನ್ನು ಪಡೆದುಕೊಳ್ಳುವ ಬೃಹತ್ ಅವಕಾಶ ಅವರಿಗೆ ಇರುತ್ತದೆ. ತದನಂತರ, ಹೊಸ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಂಡುದ್ದಕ್ಕಾಗಿ ಸಾಮಾನ್ಯ ಸರ್ಕಾರೀ ಮಾನದಂಡಗಳ ಪ್ರಕಾರ ಅವರಿಗೆ ಮಾಸಿಕ ಸ್ಟೈಪೆಂಡ್ ಜೊತೆಗೆ, ಕಲಿಯುವಾಗಲೇ ದುಡಿಯುವ ಅವಕಾಶವೂ ಸಿಗುತ್ತದೆ. ಅಭ್ಯರ್ಥಿಗಳು ವೃತ್ತಿಪರ ಶಿಕ್ಷಣ ಮತ್ತು ತರಬೇತಿಯ ರಾಷ್ಟ್ರೀಯ ಪರಿಷತ್ತಿನ (NCVET) ಮಾನ್ಯತೆ ಪಡೆದ ಪ್ರಮಾಣಪತ್ರಗಳನ್ನೂ ಪಡೆದುಕೊಳ್ಳುವುದರಿಂದ ತರಬೇತಿಯ ನಂತರ ಅವರ ಉದ್ಯೋಗಾವಕಾಶಗಳು ಇನ್ನೂ ಹೆಚ್ಚಾಗುತ್ತವೆ.

ಅಪ್ರೆಂಟಿಸ್‍ಶಿಪ್ ಮೇಳಗಳಲ್ಲಿ ಭಾಗವಹಿಸುವ ಸಂಸ್ಥೆಗಳು ಸಾಮಾನ್ಯ ವೇದಿಕೆಯಲ್ಲಿ ಸಂಭಾವ್ಯ ಅಪ್ರೆಂಟಿಸ್‍ಗಳನ್ನು ಭೇಟಿಯಾಗಿ ಸ್ಥಳದಲ್ಲೇ ಅವರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಇದರ ಜೊತೆಗೆ, ಕನಿಷ್ಟ ನಾಲ್ಕು ಕಾರ್ಮಿಕ ಸದಸ್ಯರಿರುವ ಸಣ್ಣ ಪ್ರಮಾಣದ ಉದ್ದಿಮೆಗಳೂ ಕೂಡ ಈ ಕಾರ್ಯಕ್ರಮದಲ್ಲಿ ಅಪ್ರೆಂಟಿಸ್‍ಗಳನ್ನು ನೇಮಕ ಮಾಡಿಕೊಳ್ಳಬಹುದು.

ದೇಶದಲ್ಲಿ ಅಪ್ರೆಂಟಿಸ್‍ಶಿಪ್ ತರಬೇತಿಯಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಎಮ್‍ಎಸ್‍ಡಿಇ ಅಪ್ರೆಂಟಿಸ್‍ಶಿಪ್ ನಿಯಮಗಳಿಗೆ ಮಹತ್ತರವಾದ ಸುಧಾರಣೆಗಳನ್ನು ತಂದಿದೆ.

ಈ ಸುಧಾರಣೆಗಳು ಇವುಗಳನ್ನು ಒಳಗೊಂಡಿವೆ: • ಅಪ್ರೆಂಟಿಸ್‍ಗಳನ್ನು ತೊಡಗಿಸಿಕೊಳ್ಳುವ ಗರಿಷ್ಟ ಮಿತಿಯನ್ನು 10%ನಿಂದ 15%ಗೆ ಹೆಚ್ಚಿಸಲಾಗಿದೆ • ಅಪ್ರೆಂಟಿಸ್‍ಗಳನ್ನು ತೊಡಗಿಸಿಕೊಳ್ಳುವ ಕಡ್ಡಾಯ ಒಪ್ಪಂದವಿರುವ ಸಂಸ್ಥೆಯ ಗಾತ್ರ ಮಿತಿಯನ್ನು 40ರಿಂದ 30ಕ್ಕೆ ಇಳಿಸಲಾಗಿದೆ • 1ನೆ ವರ್ಷದ ಸ್ಟೈಪೆಂಡ್ ಪಾವತಿಯನ್ನು ಕನಿಷ್ಟ ವೇತನಕ್ಕೆ ಸಂಪರ್ಕಗೊಳಿಸುವ ಬದಲು ನಿಶ್ಚಿತಗೊಳಿಸಲಾಗಿದೆ. 2ನೆ ಮತ್ತು 3ನೆ ವರ್ಷದ ಅಭ್ಯರ್ಥಿಗಳ ಸ್ಟೈಪೆಂಡ್‍ನಲ್ಲಿ 10%ನಿಂದ 15% ಏರಿಕೆ ಮಾಡಲಾಗಿದೆ • ಐಚ್ಛಿಕ ವ್ಯಾಪಾರದ ಅಪ್ರೆಂಟಿಸ್‍ಶಿಪ್ ತರಬೇತಿಯ ಅವಧಿ 6 ತಿಂಗಳಿಂದ 36 ತಿಂಗಳುಗಳಿರಬಹುದು • ತಮ್ಮದೇ ಸ್ವಂತ ಅಪ್ರೆಂಟಿಸ್‍ಶಿಪ್ ತರಬೇತಿಯನ್ನು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸುವ ಆಯ್ಕೆ ಉದ್ಯಮಗಳಿಗಿರುತ್ತದೆ • ರಾಷ್ಟ್ರೀಯ ಅಪ್ರೆಂಟಿಸ್‍ಶಿಪ್ ಪ್ರೋತ್ಸಾಹನ ಯೋಜನೆ(NAPS)ಅಡಿ, ಸಂಸ್ಥೆಗಳು/ಉದ್ಯಮ, ಅಪ್ರೆಂಟಿಸ್‍ಗಳಿಗೆ ನೀಡಲಾಗುವ ಸ್ಟೈಪೆಂಡ್‍ನಲ್ಲಿ 25%ವರೆಗೆ ಮರುಪಾವತಿ(ರೀಇಂಬರ್ಸ್‍ಮೆಂಟ್) ಪಡೆದುಕೊಳ್ಳಬಹುದು

ಇದನ್ನೂ ಓದಿ: Work From Office: ಕಚೇರಿಗೆ ಉದ್ಯೋಗಿಗಳನ್ನು ಕರೆಸಿಕೊಳ್ಳಲು ನಡೆದಿದೆ ಸಿದ್ಧತೆ; ಇಲ್ಲಿದೆ ಕಂಪೆನಿಗಳ ಪಟ್ಟಿ

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ಟೋಬರ್ 11-12ಕ್ಕೆ ಉದ್ಯಮಿಯಾಗು-ಉದ್ಯೋಗ ಕೊಡು, ಕೈಗಾರಿಕಾ ಅದಾಲತ್‍ಗೆ ಚಾಲನೆ

Published On - 5:50 pm, Sun, 3 October 21

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ