2009ರ ಜ.16ರಂದು ‘ಅರುಂಧತಿ’ ತೆರೆಕಂಡಿತ್ತು. ಆಂಧ್ರಪ್ರದೇಶ ಮಾತ್ರವಲ್ಲದೇ ಕರ್ನಾಟಕ ಮತ್ತು ತಮಿಳುನಾಡಿನಲ್ಲೂ ಈ ಸಿನಿಮಾ ಧೂಳೆಬ್ಬಿಸಿತ್ತು. ಚಿತ್ರರಂಗದಲ್ಲಿ ಅನುಷ್ಕಾ ಶೆಟ್ಟಿ ಅವರಿಗೆ ಹೊಸ ಇಮೇಜ್ ನೀಡುವಲ್ಲಿ ‘ಅರುಂಧತಿ’ ಚಿತ್ರದ ಕೊಡುಗೆ ದೊಡ್ಡದು. ಆ ಕಾರಣಕ್ಕಾಗಿ ಅವರಿಗೆ ಈ ಸಿನಿಮಾ ಯಾವಾಗಲೂ ಸ್ಪೆಷಲ್ ಆಗಿರಲಿದೆ.
‘ಯಾವುದೇ ನಟಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗಬಹುದಾದ ಪಾತ್ರ ಜೇಜಮ್ಮ. ಅಂಥ ಅವಕಾಶ ಪಡೆದಿದ್ದಕ್ಕೆ ನಾನು ಧನ್ಯಳು. ಕೋಡಿ ರಾಮಕೃಷ್ಣ ಮತ್ತು ನಿರ್ಮಾಪಕ ಶ್ಯಾಮ್ ಪ್ರಸಾದ್ ಹಾಗೂ ಇಡೀ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಪ್ರೇಕ್ಷಕರ ಬೆಂಬಲಕ್ಕೆ ದೊಡ್ಡ ಧನ್ಯವಾದ. ಈ ಸಿನಿಮಾ ಯಾವಾಗಲೂ ನನ್ನ ಮನಸ್ಸಿಗೆ ಹತ್ತಿರವಾಗಿರಲಿದೆ’ ಎಂದು ಅನುಷ್ಕಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಸೋನು ಸೂದ್ ಮುಖ್ಯ ವಿಲನ್ ಆಗಿ ನಟಿಸಿದ್ದರು. ಸಯ್ಯಾಜಿ ಶಿಂದೆ, ಮನೋರಮಾ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದರು. ‘ಅರುಂಧತಿ’ ಚಿತ್ರದ ಬಳಿಕ ಅನುಷ್ಕಾ ಶೆಟ್ಟಿ ಅವರ ಡಿಮ್ಯಾಂಡ್ ಹೆಚ್ಚಿತು.
ಇದನ್ನೂ ಓದಿ:
ಅನುಷ್ಕಾ ಶೆಟ್ಟಿ-ವಿಜಯ್ ಸೇತುಪತಿ ಕಾಂಬಿನೇಷನ್ನಲ್ಲಿ ಬರುತ್ತಿದೆ ಹೊಸ ಸಿನಿಮಾ; ನಿರ್ದೇಶನ ಯಾರದ್ದು?
ಅನುಷ್ಕಾ ಶೆಟ್ಟಿ ಪಾಲಿಗೆ ಮತ್ತೆ ನಾಗವಲ್ಲಿ ಪಾತ್ರ? ಫ್ಯಾನ್ಸ್ ಕಿವಿ ಚುರುಕಾಗಿಸಿದೆ ಈ ಸುದ್ದಿ