Fact Check: ಆರಾಧ್ಯ ಬಚ್ಚಿನ್ ಹೆಸರಿನಲ್ಲಿ ನಕಲಿ ಚಿತ್ರ ವೈರಲ್: ನೈಜ್ಯ ಫೋಟೋದಲ್ಲಿ ಇರುವುದು ಯಾರು?

ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಅವರ ಫೋಟೋ ಒಂದು ಹರಿದಾಡುತ್ತಿದೆ. ಈ ಫೋಟೋದಲ್ಲಿ ಆರಾಧ್ಯ ಅವರು ಹಸಿರು ಬಣ್ಣದ ಕ್ರಾಪ್ ಟಾಪ್ ಮತ್ತು ಸ್ಕರ್ಟ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

Fact Check: ಆರಾಧ್ಯ ಬಚ್ಚಿನ್ ಹೆಸರಿನಲ್ಲಿ ನಕಲಿ ಚಿತ್ರ ವೈರಲ್: ನೈಜ್ಯ ಫೋಟೋದಲ್ಲಿ ಇರುವುದು ಯಾರು?
ಆರಾಧ್ಯ ಬಚ್ಚನ್ ಅವರ ಫೋಟೋ ವೈರಲ್​​
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 28, 2024 | 5:32 PM

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಜೊತೆ ಅವರ ಪುತ್ರಿ ಆರಾಧ್ಯ ಬಚ್ಚನ್ ಕೂಡ ಎಲ್ಲರಿಗೂ ಚಿರಪರಿಚಿತ. ಇವರಿಗೆ ಕೂಡ ಸಾಕಷ್ಟು ಫ್ಯಾನ್ ಫಾಲೋವರ್ಸ್ ಇದ್ದಾರೆ. ಆರಾಧ್ಯ ಒಂದು ಫೋಟೋ ಹಂಚಿಕೊಂಡರೆ ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಅದರಂತೆ ಇದೀಗ ಆರಾಧ್ಯ ಎಂದು ಹೇಳಲಾಗುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ಆರಾಧ್ಯ ಅವರು ಹಸಿರು ಬಣ್ಣದ ಕ್ರಾಪ್ ಟಾಪ್ ಮತ್ತು ಸ್ಕರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಎನ್‌ಎಸ್‌ಎಸ್ ನೀರಜ್ ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಫೋಟೋವನ್ನು ಅಪ್ಲೋಡ್ ಮಾಡಿಕೊಂಡಿದ್ದು, ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ, “ಈಗ ಆರಾಧ್ಯ ಕೂಡ ಐಶ್ವರ್ಯಾ ರೈ ಅವರೊಂದಿಗೆ ಸೌಂದರ್ಯದಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದ್ದಾರೆ. ಐಶ್ವರ್ಯಾ ಪ್ರಶಸ್ತಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ, ತಾಯಿ ಮತ್ತು ಮಗಳು ಇಬ್ಬರೂ ಮ್ಯಾಚಿಂಗ್ ಕಪ್ಪು ಡ್ರೆಸ್ಗಳನ್ನು ಧರಿಸಿದ್ದರು. ಆದರೆ ಇಲ್ಲಿ ಜನರು ಐಶ್ವರ್ಯಾಳನ್ನು ಪಕ್ಕಕ್ಕಿಟ್ಟು ಆರಾಧ್ಯರನ್ನೇ ನೋಡಿದರು. ಇವರ ಮುದ್ದು ಮುಗುಳ್ನಗೆ ಮತ್ತು ಮುಖ ನೋಡಿದ ಜನರು ಭವಿಷ್ಯದಲ್ಲಿ ಬಾಲಿವುಡ್‌ನ ದೊಡ್ಡ ನಾಯಕಿಯಾಗುತ್ತಾರೆ ಎಂದು ಈಗಾಗಲೇ ಊಹಿಸಲು ಪ್ರಾರಂಭಿಸಿದ್ದಾರೆ.’’ ಎಂದು ಬರೆದುಕೊಂಡಿದ್ದಾರೆ.

Fact Check:

ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ವೈರಲ್ ಫೋಟೋ ಆರಾಧ್ಯ ಬಚ್ಚನ್ ಅವರದ್ದಲ್ಲ, ಇದನ್ನು ಎಡಿಟ್ ಮಾಡಲಾಗಿದೆ ಎಂದು ಕಂಡುಹಿಡಿದಿದೆ. ನಟಿ ಮತ್ತು ರೂಪದರ್ಶಿ ಮೇಘಾ ಶುಕ್ಲಾ ಅವರ ಫೋಟೋವನ್ನು ಎಡಿಟ್ ಮಾಡಲಾಗಿದ್ದು ಆರಾಧ್ಯ ಬಚ್ಚನ್ ಅವರ ಮುಖವನ್ನು ಅವರ ಮುಖದ ಮೇಲೆ ಹೇರಲಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಫೋಟೋವನ್ನು ಪರಿಶೀಲಿಸಿದ್ದೇವೆ. ರಿವರ್ಸ್ ಇಮೇಜ್ ಸರ್ಚ್ ಮೂಲಕ ಆರಾಧ್ಯ ಬಚ್ಚನ್ ಕ್ರಾಪ್ ಟಾಪ್ ಮತ್ತು ಸ್ಕರ್ಟ್ ನಲ್ಲಿ ಕಾಣಿಸಿಕೊಂಡ ಫೋಟೋದ ಮುಖದ ಕೆಳಗಿನ ಸಂಪೂರ್ಣ ಭಾಗವನ್ನು ಕ್ರಾಪ್ ಮಾಡುವ ಮೂಲಕ ಹುಡುಕಿದೆವು. ಆಗ ಈ ಫೋಟೋ Pinterest ನಲ್ಲಿ ಕಂಡುಬಂದಿದೆ. ಆದರೆ ಮುಖವು ಆರಾಧ್ಯ ಬಚ್ಚನ್ ಅವರದ್ದಲ್ಲ, ಇವರು ನಟಿ ಮೇಘಾ ಶುಕ್ಲಾ ಅವರದ್ದಾಗಿತ್ತು.

ಇದನ್ನೂ ಓದಿ: ಶುಭ್​ಮನ್ ಗಿಲ್ ಕೆಟ್ಟ ಬ್ಯಾಟ್ಸ್​ಮನ್ ಎಂದು ಸರ್ಫರಾಜ್ ಖಾನ್ ಹೇಳಿದ್ದು ನಿಜವೇ?: ವಿಡಿಯೋ ಹಿಂದಿನ ಸತ್ಯ ಇಲ್ಲಿದೆ

ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ನಟಿ ಮೇಘಾ ಶುಕ್ಲಾ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಹುಡುಕಿದ್ದೇವೆ. ಆಗ ಈ ಫೋಟೋವನ್ನು ಕಂಡುಕೊಂಡಿದ್ದು, 26 ಏಪ್ರಿಲ್ 2024 ರಂದು ಅಪ್ಲೋಡ್ ಮಾಡಿದ್ದಾರೆ. ನಾವು ಅನೇಕ ವಾಲ್‌ಪೇಪರ್ ವೆಬ್‌ಸೈಟ್‌ಗಳಲ್ಲಿಯೂ ಈ ಚಿತ್ರವನ್ನು ಕಂಡುಕೊಂಡಿದ್ದೇವೆ. ಎಲ್ಲ ಕಡೆ ಮೇಘಾ ಶುಕ್ಲಾ ಅವರ ಮುಖವೇ ಇದೆ.

ಹೀಗಾಗಿ ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ವೈರಲ್ ಫೋಟೋವು ಆರಾಧ್ಯ ಬಚ್ಚನ್ ಅವರದ್ದಲ್ಲ, ಇದು ಎಡಿಟ್ ಮಾಡಲಾಗಿದೆ ಎಂದು ಕಂಡುಬಂದಿದೆ. ನಟಿ ಮೇಘಾ ಶುಕ್ಲಾ ಅವರ ಚಿತ್ರವನ್ನು ಎಡಿಟ್ ಮಾಡಲಾಗಿದೆ ಮತ್ತು ಆರಾಧ್ಯ ಬಚ್ಚನ್ ಅವರ ಮುಖವನ್ನು ಅವರ ಮುಖದ ಮೇಲೆ ಅಂಟಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ