‘ಆಡುಜೀವಿತಂ’ ಸಿನಿಮಾ ಟ್ರೇಲರ್​ನಲ್ಲಿ ಹೊಸ ಅವತಾರದಲ್ಲಿ ಮಿಂಚಿದ ಪೃಥ್ವಿರಾಜ್​ ಸುಕುಮಾರನ್

‘ಆಡುಜೀವಿತಂ’ ಓರ್ವ ಮಲಯಾಳಿ ವಲಸಿಗ ನಜೀಬ್ ಎಂಬುವವರ ಕಥೆ. ಸೌದಿ ಅರೇಬಿಯಾದ ಮರಳುಗಾಡಲ್ಲಿ ಸಿಕ್ಕಿ ನಂತರ ಬದುಕಿ ಬಂದ ನಜೀಬ್ ಜೀವನದ ಕಥೆಯನ್ನು ಈ ಸಿನಿಮಾ ಹೊಂದಿದೆ. ಅಷ್ಟಕ್ಕೂ ಈ ಚಿತ್ರದ ಕಥೆ ಏನು? ನಜೀಬ್ ಹೇಗೆ ಈ ಟ್ರ್ಯಾಪ್​ನಲ್ಲಿ ಸಿಕ್ಕರು ಎನ್ನುವ ಬಗ್ಗೆ ಈ ಸಿನಿಮಾದಲ್ಲಿ ಉತ್ತರ ಇದೆ.

‘ಆಡುಜೀವಿತಂ’ ಸಿನಿಮಾ ಟ್ರೇಲರ್​ನಲ್ಲಿ ಹೊಸ ಅವತಾರದಲ್ಲಿ ಮಿಂಚಿದ ಪೃಥ್ವಿರಾಜ್​ ಸುಕುಮಾರನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 11, 2024 | 2:39 PM

ನಟ ಪೃಥ್ವಿರಾಜ್​ ಸುಕುಮಾರನ್ (Prithviraj Sukumaran) ಅವರು ಓರ್ವ ಅದ್ಭುತ ಹೀರೋ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಅವರು ಈಗ ‘ಆಡುಜೀವಿತಂ’ ಅಥವಾ ‘ದಿ ಗೋಟ್​ ಲೈಫ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಈ ಚಿತ್ರವನ್ನು ಬ್ಲೆಸ್ಸಿ ನಿರ್ದೇಶನ ಮಾಡಿದ್ದಾರೆ. 2008ರಲ್ಲಿ ಬರೆಯಲಾದ ‘ಆಡುಜೀವಿತಂ’ ಕಾದಂಬರಿ ಆಧರಿಸಿದೆ. ಈ ಪುಸ್ತಕ 12 ಭಾಷೆಗಳಲ್ಲಿ ಭಾಷಾಂತರಗೊಂಡಿದೆ.

‘ಆಡುಜೀವಿತಂ’ ಓರ್ವ ಮಲಯಾಳಿ ವಲಸಿಗ ನಜೀಬ್ ಎಂಬುವವರ ಕಥೆ. ಸೌದಿ ಅರೇಬಿಯಾದ ಮರಳುಗಾಡಲ್ಲಿ ಸಿಕ್ಕಿ ನಂತರ ಬದುಕಿ ಬಂದ ನಜೀಬ್ ಜೀವನದ ಕಥೆಯನ್ನು ಈ ಸಿನಿಮಾ ಹೊಂದಿದೆ. ಅಷ್ಟಕ್ಕೂ ಈ ಚಿತ್ರದ ಕಥೆ ಏನು? ನಜೀಬ್ ಹೇಗೆ ಈ ಟ್ರ್ಯಾಪ್​ನಲ್ಲಿ ಸಿಕ್ಕರು ಎನ್ನುವ ಬಗ್ಗೆ ಈ ಸಿನಿಮಾದಲ್ಲಿ ಉತ್ತರ ಇದೆ.

ನಜೀಬ್ ಕೇರಳದವರು. 1993ರಲ್ಲಿ ಅವರಿಗೆ ಕೆಲಸ ಕೊಡಿಸುವ ಭರವಸೆಯನ್ನು ಏಜೆಂಟ್ ನೀಡಿದರು. ಸೌದಿ ಅರೇಬಿಯಾದ ಸೂಪರ್ ಮಾರ್ಕೆಟ್​ನಲ್ಲಿ ಕೆಲಸ ನೀಡುವ ಭರವಸೆಯನ್ನು ಅವರು ನೀಡಿದ್ದರು. ಆದರೆ ಅಲ್ಲಿ ಹೋದಾಗ ಅಸಲಿ ವಿಚಾರ ಗೊತ್ತಾಗಿತ್ತು. ಮರಳುಗಾಡಿನಲ್ಲಿ 700 ಕುರಿಗಳನ್ನು ನೋಡಿಕೊಳ್ಳುವ ಕೆಲಸ ನಜೀಬ್ ಅವರದ್ದಾಗಿತ್ತು.

‘ನಾನು ವೀಸಕ್ಕಾಗಿ 55,000 ರೂಪಾಯಿ ಹೊಂದಿಸಿದ್ದೆ. ಇದಕ್ಕಾಗಿ ಜಮೀನು ಮಾರಾಟ ಮಾಡಬೇಕಾಯಿತು. ಜಮೀನು ಇದ್ದಿದ್ದರೆ ಲಕ್ಷಗಟ್ಟಲೆ ರೂಪಾಯಿಗೆ ಮಾರಾಟ ಮಾಡಬಹುದಿತ್ತು. ಮುಂಬೈ ಮೂಲಕ ಸೌದಿಗೆ ತೆರಳಿದೆ. ಮರುಭೂಮಿಯನ್ನು ತಲುಪಿದ ನಂತರ ನನ್ನ ಅರಬ್ ಬಾಸ್ ಮತ್ತು ಅವನ ಸಹೋದರನನ್ನು ಹೊರತುಪಡಿಸಿ ಒಬ್ಬ ಮನುಷ್ಯನನ್ನು ನಾನು ನೋಡಲಿಲ್ಲ. ನನಗೆ ಒಂದೇ ಒಂದು ರೂಪಾಯಿಯನ್ನು ಸಂಬಳವಾಗಿ ನೀಡಿಲ್ಲ’ ಎಂದು ನಜೀಬ್ 2018ರ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ: 2 ವಾರ ಮೊದಲೇ ಬಿಡುಗಡೆ ಆಗಲಿದೆ ‘ಆಡುಜೀವಿತಂ’; ಸಿಹಿ ಸುದ್ದಿ ನೀಡಿದ ಪೃಥ್ವಿರಾಜ್​

ಈ ಜರ್ನಿ ಯಾವ ರೀತಿಯಲ್ಲಿ ಇತ್ತು, ಸೌದಿ ಅರೇಬಿಯಾದಿಂದ ಅವರು ಹೇಗೆ ತಪ್ಪಿಸಿಕೊಂಡು ಬಂದರು ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕೆ ಪೃಥ್ವಿರಾಜ್​ ಸುಕುಮಾರನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಮಾರ್ಚ್ 28ರಂದು ರಿಲೀಸ್ ಆಗಲಿದೆ. ಈ ಚಿತ್ರ 3ಡಿಯಲ್ಲೂ ವೀಕ್ಷಣೆಗೆ ಲಭ್ಯವಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ