AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿಯಿಂದ  ಅವಾರ್ಡ್ ಗೆದ್ದ ಕೀರ್ತಿ; ಇವರ ಜೀವನ ಅದೆಷ್ಟು ಕಷ್ಟದ್ದಾಗಿತ್ತು ಗೊತ್ತಾ?

ಕೀರ್ತಿ ಗೋವಿಂದಸ್ವಾಮಿ ಇತಿಹಾಸಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಯೂಟ್ಯೂಬ್​ನಲ್ಲಿ ಮಾಡಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ಈ ಕಾರಣಕ್ಕೆ ಅವರಿಗೆ ‘ಕೀರ್ತಿ ಹಿಸ್ಟರಿ’ ಎಂದು ಚಾನೆಲ್​ಗೆ ಶೀರ್ಷಿಕೆ ನೀಡಿದ್ದಾರೆ. ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಘಟನೆಗಳನ್ನು ಅವರು ತಮ್ಮ ಚಂದಾದಾರರಿಗೆ ವಿವರಿಸಿದ್ದಾರೆ.

ಪ್ರಧಾನಿ ಮೋದಿಯಿಂದ  ಅವಾರ್ಡ್ ಗೆದ್ದ ಕೀರ್ತಿ; ಇವರ ಜೀವನ ಅದೆಷ್ಟು ಕಷ್ಟದ್ದಾಗಿತ್ತು ಗೊತ್ತಾ?
ಪ್ರಧಾನಿ ಮೋದಿ ಜೊತೆ ಕೀರ್ತಿ
ರಾಜೇಶ್ ದುಗ್ಗುಮನೆ
|

Updated on: Mar 11, 2024 | 12:35 PM

Share

ಆನ್​ಲೈನ್​ನಲ್ಲಿ ಕಂಟೆಂಟ್ ಮಾಡುವ ವ್ಯಕ್ತಿಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇತ್ತೀಚೆಗೆ ನ್ಯಾನಲ್ ಕ್ರಿಯೇಟರ್ಸ್ ಅವಾರ್ಡ್​ ನೀಡಿ ಗೌರವಿಸಿದ್ದಾರೆ. ಈ ಸಾಲಿನಲ್ಲಿ ಕನ್ನಡದ ಅಯ್ಯೋ ಶ್ರದ್ಧಾ ಮೊದಲಾದವರು ಇದ್ದಾರೆ. ಅದೇ ರೀತಿ ಯೂಟ್ಯೂಬ್​ನಲ್ಲಿ ಐವತ್ತು ಲಕ್ಷ ಸಬ್​ಸ್ಕ್ರೈಬರ್ ಹೊಂದಿರುವ ಕೀರ್ತಿಕಾ ಗೋವಿಂದಸ್ವಾಮಿ (ಇನ್​ಸ್ಟಾಗ್ರಾಮ್​ನಲ್ಲಿ ಕೀರ್ತಿ ಹಿಸ್ಟರಿ) ಅವರಿಗೂ ಅವಾರ್ಡ್ ಸಿಕ್ಕಿದೆ. ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕೀರ್ತಿ ಗೋವಿಂದಸ್ವಾಮಿ ಅವರು ಇತಿಹಾಸಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಯೂಟ್ಯೂಬ್​ನಲ್ಲಿ ಮಾಡಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ಈ ಕಾರಣಕ್ಕೆ ಅವರಿಗೆ ‘ಕೀರ್ತಿ ಹಿಸ್ಟರಿ’ ಎಂದು ಚಾನೆಲ್​ಗೆ ಶೀರ್ಷಿಕೆ ನೀಡಿದ್ದಾರೆ. ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಘಟನೆಗಳನ್ನು ಅವರು ತಮ್ಮ ಚಂದಾದಾರರಿಗೆ ವಿವರಿಸಿದ್ದಾರೆ. ಪ್ರಶಸ್ತಿ ಗೆದ್ದ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

‘ನಾನು ಕನಸಿನಲ್ಲೂ ಊಹಿಸಿರಲಿಲ್ಲ’ ಎಂದು ಪತ್ರ ಆರಂಭಿಸಿದ್ದಾರೆ. ‘ಆಗ ನನಗೆ 15 ವರ್ಷ. ಹಳ್ಳಿಯ ಜನರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು. ಆಗ ನನ್ನ ತಂದೆ ಅಳುತ್ತಿರುವುದು ಕಾಣಿಸಿತು. ನನ್ನ ಜೀವನದುದ್ದಕ್ಕೂ ಅವರು ನನ್ನ ಬಗ್ಗೆ ನಾಚಿಕೆಪಡುತ್ತಿದ್ದರು. ನನಗೆ ಬಾಯ್​ಫ್ರೆಂಡ್ ಕೂಡ ಇರಲಿಲ್ಲ. ನಾನು ಓದುವುದರಲ್ಲಿ ಮುಂದಿದ್ದೆ. ಹೀಗಿರುವಾಗ ನನ್ನ ತಪ್ಪೇನು? ನಾನು ಎಂದಿಗೂ ನನ್ನ ಕುಟುಂಬದವರ ಮೇಲೆ ಅವಲಂಬಿತರಾಗಲು ನಾನು ಬಯಸಲಿಲ್ಲ’ ಎಂದು ಬರೆದುಕೊಂಡಿದ್ದಾರೆ ಕೀರ್ತಿ.

‘ಹುಡುಗಿಯರಿಗೆ ಹತ್ತಿರದ ಅಂಗಡಿಗೆ ಹೋಗಲು ಅನುಮತಿ ನೀಡುತ್ತಿರಲಿಲ್ಲ. ನನಗೆ ಏನಾದರೂ ಅಗತ್ಯವಿದ್ದರೆ ನಾನು ನನ್ನ ಸಹೋದರರನ್ನು ಕೇಳಿಕೊಳ್ಳಬೇಕಿತ್ತು. ಒಮ್ಮೆ ನಾನು ಅಂಗಡಿಗೆ ಹೋಗಿದ್ದಕ್ಕೆ ನನಗೆ ಕಪಾಳಮೋಕ್ಷವಾಯಿತು. ಮೂಲಭೂತ ವಿಷಯಗಳಿಗೆ ನಾನು ನನ್ನ ಜೀವನದುದ್ದಕ್ಕೂ ಹೋರಾಡಬೇಕಾಯಿತು. ನಾನು ಪುರಾತತ್ವಶಾಸ್ತ್ರಜ್ಞನಾಗಬೇಕು ಎಂದು ಬಯಸಿದಿದೆ. ಅದಕ್ಕಾಗಿಯೇ ನಾನು ನನ್ನ ಪದವಿಯಲ್ಲಿ ಇತಿಹಾಸವನ್ನು ಆರಿಸಿಕೊಂಡೆ. ಇದರಿಂದ ನಾನು ಪುರಾತತ್ತ್ವ ಶಾಸ್ತ್ರದಲ್ಲಿ ನನ್ನ ಸ್ನಾತಕೋತ್ತರ ಪದವಿಯನ್ನು ಮಾಡಿದೆ. ಆದರೆ ನಾನು ಪದವಿ ಪಡೆದ ನಂತರ ಮನೆಯಲ್ಲಿ ಮದುವೆ ಆಗುವಂತೆ ಹೇಳಿದರು. ಆ ದಿನ ನಾನು ಅಸಹಾಯಕಳಾಗಿ ಅತ್ತಿದ್ದು ಇನ್ನೂ ನೆನಪಿದೆ’ ಎಂದು ಹಳೆಯ ಘಟನೆ ಬಗ್ಗೆ ಹೇಳಿದ್ದಾರೆ ಅವರು.

‘ಆಮೇಲೆ ನನಗೆ ಬಂದ ಎಲ್ಲಾ ಕೆಲಸವನ್ನೂ ಮಾಡತೊಡಗಿದೆ. ನಾನು ಟ್ಯೂಷನ್ ತೆಗೆದುಕೊಂಡೆ. ಮನೆಯಲ್ಲೇ ಇದ್ದು ಮಕ್ಕಳಿಗೆ ಪಾಠ ಮಾಡಿದೆ. ಎಲೆಕ್ಟ್ರಿಷಿಯನ್ ಆಗಿಯೂ ಕೆಲಸ ಮಾಡಿದ್ದಿದೆ. ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್ ಖರೀದಿಸಲು ನನಗೆ ಸುಮಾರು ಒಂದೂವರೆ ವರ್ಷಗಳು ಬೇಕಾಯಿತು. ನಾನು ಮತ್ತು ತಂದೆ ಆರು ವರ್ಷಗಳ ಕಾಲ ಪರಸ್ಪರ ಮಾತನಾಡುತ್ತಿರಲಿಲ್ಲ. ಅವರು ನನ್ನ ಬಗ್ಗೆ ಎಷ್ಟು ನಿರಾಶೆಗೊಂಡಿದ್ದರು’ ಎಂದು ಬೇಸರ ಹೊರಹಾಕಿದ್ದಾರೆ ಕೀರ್ತಿ.

ಇದನ್ನೂ ಓದಿ: ಅಯ್ಯೋ ಶ್ರದ್ಧಾಗೆ ಮೋದಿಯಿಂದ ಸಿಕ್ತು ಉತ್ತಮ ಸಲಹೆ; ಪ್ರಧಾನಿ ಭೇಟಿಯ ಪೂರ್ತಿ ವಿವರ ಇಲ್ಲಿದೆ..

‘ನನ್ನ ಪಾಲಕರನ್ನು ಜಡ್ಜ್​ ಮಾಡಬೇಡಿ. ಅವರು ತಮ್ಮ ಕೈಲಾದಷ್ಟು ಮಾಡಿದ್ದಾರೆ. ಹಳ್ಳಿಯಲ್ಲಿ ಪಾಲಕರು ನಿಮಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಅಲ್ಲಿ ಸಂಬಂಧಿಕರು ಕೂಡ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಅವರು ನನ್ನ ಬೆಂಬಲಕ್ಕೆ ನಿಲ್ಲಲು ಪ್ರಯತ್ನಿಸಿದರು. ಈಗ 2024ರಲ್ಲಿ ನಾನು ಅವರನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದಿದ್ದೇನೆ. ನಮ್ಮ ದೇಶದ ಪ್ರಧಾನ ಮಂತ್ರಿಯಿಂದ ನಾನು ಪ್ರಶಸ್ತಿಯನ್ನು ಪಡೆಯುವುದಕ್ಕೆ ಅವರು ಸಾಕ್ಷಿಯಾದರು. ಈ ಭಾವನೆಯನ್ನು ವಿವರಿಸಲು ಸಾಧ್ಯವಿಲ್ಲ. ನಾನು ಜೀವನದಲ್ಲಿ ಗೆದ್ದೆ. ವಿದ್ಯಾರ್ಥಿಯರು ಓದುವಂತಾಗಲಿ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್