AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prabhudeva: ಪತ್ನಿ, ಒಂದು ತಿಂಗಳ ಮಗು ಜೊತೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಭುದೇವ

ದರ್ಶನದ ವೇಳೆ ಮಗುವನ್ನು ಹಿಮಾನಿ ಎತ್ತಿಕೊಂಡು ಹೋಗಿದ್ದಾರೆ. ದರ್ಶನ ಮುಗಿಸಿ ಹೊರಬಂದ ಪ್ರಭುದೇವ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

Prabhudeva: ಪತ್ನಿ, ಒಂದು ತಿಂಗಳ ಮಗು ಜೊತೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಭುದೇವ
ಪ್ರಭುದೇವ-ಹಿಮಾನಿ
ರಾಜೇಶ್ ದುಗ್ಗುಮನೆ
|

Updated on: Jul 22, 2023 | 7:12 AM

Share

ಜನಪ್ರಿಯ ನೃತ್ಯ ನಿರ್ದೇಶಕ, ನಟ ಮತ್ತು ನಿರ್ದೇಶಕ ಪ್ರಭುದೇವ (Prabhudeva) ಅವರು ಕನ್ನಡ ಪ್ರೇಕ್ಷಕರಿಗೆ ಚಿರಪರಿಚಿತರು. ಅವರು ಇತ್ತೀಚೆಗೆ ‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರ ಅತಿಥಿಯಾಗಿ ಆಗಮಿಸಿದ್ದರು. ಪ್ರಭುದೇವ ಅವರು ಶುಕ್ರವಾರ (ಜುಲೈ 22) ಕುಟುಂಬ ಸಮೇತ ತಿರುಮಲದ ವೆಂಕಟೇಶ್ವರನ ದರ್ಶನ ಪಡೆದರು. ಅವರ ಪತ್ನಿ ಹಿಮಾನಿ (Himani) ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಕಾರಣಕ್ಕೆ ಅವರು ದೇವರ ದರ್ಶನ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮಗುವಿನ ಮುಖವನ್ನು ದಂಪತಿ ತೋರಿಸಿಲ್ಲ.

ಸರತಿ ಸಾಲಿನಲ್ಲಿ ಪ್ರಭುದೇವ-ಹಿಮಾನಿ ದೇವರ ದರ್ಶನ ಪಡೆದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ದರ್ಶನದ ವೇಳೆ ಮಗುವನ್ನು ಹಿಮಾನಿ ಎತ್ತಿಕೊಂಡು ಹೋಗಿದ್ದಾರೆ. ದರ್ಶನ ಮುಗಿಸಿ ಹೊರಬಂದ ಪ್ರಭುದೇವ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ದೇವಸ್ಥಾನದಿಂದ ಹೊರ ಹೋಗಲು ಪ್ರಭುದೇವ ಕಷ್ಟಪಡುವಂತೆ ಆಯಿತು. ತಕ್ಷಣ ಅವರ ಆಪ್ತ ಸಿಬ್ಬಂದಿ ಎಚ್ಚೆತ್ತು ಗುಂಪನ್ನು ಚದುರಿಸಿದರು. ಆ ಬಳಿಕ ಪ್ರಭುದೇವ ಅವರು ಕುಟುಂಬದ ಜೊತೆ ಹೊರಟರು.

ಪ್ರಭುದೇವ ಅವರು ಈ ಮೊದಲು ರಾಮಲತಾ ಎಂಬುವವರ ಜೊತೆ ಮದುವೆ ಆಗಿದ್ದರು. ರಾಮಲತಾ ಎಂದಿದ್ದ ತಮ್ಮ ಹೆಸರನ್ನು ಅವರು ಲತಾ ಎಂದು ಬದಲಾಯಿಸಿಕೊಂಡರು. ಈ ದಂಪತಿಗೆ ಮೂರು ಮಕ್ಕಳಿದ್ದರು. ಓರ್ವ ಕ್ಯಾನ್ಸರ್​ನಿಂದ 13ನೇ ವಯಸ್ಸಿಗೆ ನಿಧನ ಹೊಂದಿದ. ನಯನತಾರಾ ಜೊತೆ ಪ್ರಭುದೇವ ಸುತ್ತಾಡಿದರು. ಈ ಕಾರಣದಿಂದ ಪ್ರಭುದೇವ-ಲತಾ ವಿಚ್ಛೇದನ ಪಡೆದರು. ಬಳಿಕ ಪ್ರಭುದೇವ-ನಯನತಾರಾ ಕೂಡ ಬೇರೆ ಆದರು. 2020ರ ಮೇ ತಿಂಗಳಲ್ಲಿ ಹಿಮಾನಿ ಅವರನ್ನು ಮದುವೆ ಆಗಿರುವುದಾಗಿ ಪ್ರಭುದೇವ ಒಪ್ಪಿಕೊಂಡರು. ಜೂನ್ 13ರಂದು ಹಿಮಾನಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಇದನ್ನೂ ಓದಿ: ಅಪ್ಪ ಮಾಡಿದ ಒಂದು ಸಣ್ಣ ಕಾರ್ಯ ಪ್ರಭುದೇವ ಜೀವನವನ್ನೇ ಬದಲಿಸಿಬಿಟ್ಟಿತು

ಯೋಗರಾಜ್ ಭಟ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಹಾಗೂ ಪ್ರಭುದೇವ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಕರಟಕ ಧಮನಕ’ ಎಂದು ಹೆಸರು ಇಡಲಾಗಿದೆ. ಈ ಸಿನಿಮಾದ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಗಿದೆ. ರೆಟ್ರೋ ಮಾದರಿಯಲ್ಲಿರುವ ಪೋಸ್ಟರ್ ಗಮನ ಸೆಳೆದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ