‘ಬೆಂಗಳೂರಿನ ಹಲ್ಲೆ ಘಟನೆಯನ್ನು ಅನವಶ್ಯಕ ದೊಡ್ಡದು ಮಾಡಲಾಯ್ತು’: ನಟ ವಿಜಯ್​ ಸೇತುಪತಿ

Vijay Sethupathi: ವಿಜಯ್​ ಸೇತುಪತಿ ಸ್ಟಾರ್​ ಕಲಾವಿದನಾಗಿದ್ದರೂ ಪ್ರಯಾಣ ಮಾಡುವಾಗ ಅಂಗರಕ್ಷಕರನ್ನು ಜೊತೆಗೆ ಇಟ್ಟುಕೊಳ್ಳುವುದಿಲ್ಲ. ಬೆಂಗಳೂರಿನಲ್ಲಿ ನಡೆದ ಹಲ್ಲೆ ಯತ್ನದ ಬಗ್ಗೆ ಈಗ ಅವರು ಪ್ರತಿಕ್ರಿಯಿಸಿದ್ದಾರೆ.

‘ಬೆಂಗಳೂರಿನ ಹಲ್ಲೆ ಘಟನೆಯನ್ನು ಅನವಶ್ಯಕ ದೊಡ್ಡದು ಮಾಡಲಾಯ್ತು’: ನಟ ವಿಜಯ್​ ಸೇತುಪತಿ
ವಿಜಯ್​ ಸೇತುಪತಿ
Follow us
TV9 Web
| Updated By: ಮದನ್​ ಕುಮಾರ್​

Updated on: Nov 07, 2021 | 3:23 PM

ನಟ ವಿಜಯ್​ ಸೇತುಪತಿ ಅವರಿಗೆ ದೇಶದೆಲ್ಲೆಡೆ ಅಭಿಮಾನಿಗಳಿದ್ದಾರೆ. ಅವರು ಎಲ್ಲೇ ಕಾಣಿಸಿದರೂ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಾರೆ. ಆದರೆ ಇತ್ತೀಚೆಗೆ ವ್ಯಕ್ತಿಯೊಬ್ಬ ವಿಜಯ್​ ಸೇತುಪತಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಆ ಸುದ್ದಿ ಕೇಳಿ ವಿಜಯ್​ ಸೇತುಪತಿ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹಲ್ಲೆಯ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಆ ಒಟ್ಟಾರೆ ಘಟನೆಯ ಬಗ್ಗೆ ವಿಜಯ್​ ಸೇತುಪತಿ ಈಗ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯ್​ ಸೇತುಪತಿ ಪ್ರಕಾರ ಇದೊಂದು ಸಾಮಾನ್ಯ ಘಟನೆ. ಆದರೆ ಅನಗತ್ಯವಾಗಿ ದೊಡ್ಡದು ಮಾಡಲಾಗಿದೆ. ‘ನಡೆದಿದ್ದು ತುಂಬಾ ಸಣ್ಣ ವಿಚಾರ. ಆದರೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಆ ಘಟನೆಯನ್ನು ತನ್ನ ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದರಿಂದ ಅದು ದೊಡ್ಡದಾಯ್ತು. ಮೊಬೈಲ್​ ಫೋನ್​ ಇರುವ ಎಲ್ಲರೂ ಈಗ ಫಿಲ್ಮ್​ ಮೇಕರ್​ ಆಗಿಬಿಟ್ಟಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿ ಕುಡಿದಿದ್ದ. ಪ್ರಜ್ಞೆ ಇಲ್ಲದ ಇಂಥ ವ್ಯಕ್ತಿಗಳು ಇದೇ ರೀತಿ ವರ್ತಿಸುತ್ತಾರೆ. ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಲಾಯಿತು. ಅಲ್ಲಿಗೆ ಎಲ್ಲವೂ ಮುಕ್ತಾಯವಾಯಿತು’ ಎಂದು ವಿಜಯ್​ ಸೇತುಪತಿ ಹೇಳಿದ್ದಾರೆ.

‘ನಮ್ಮ ಮೇಲೆ ಹಲ್ಲೆಗೆ ಪ್ರಯತ್ನಿಸಿದ ವ್ಯಕ್ತಿ ನನ್ನ ಅಭಿಮಾನಿ ಅಲ್ಲ. ವಿಮಾನದಲ್ಲಿ ಆತ ಸಹ-ಪ್ರಯಾಣಿಕ ಆಗಿದ್ದ. ಪ್ರಯಾಣದ ವೇಳೆ ನಮ್ಮೊಂದಿಗೆ ವಾಗ್ವಾದ ಮಾಡುತ್ತಲೇ ಇದ್ದ. ವಿಮಾನ ಲ್ಯಾಂಡ್​ ಆದ ಬಳಿಕವೂ ವಾಗ್ವಾದ ಮುಂದುವರಿಸಿದ್ದ. ಇಂದು ಎಲ್ಲರೂ ಮಾಸ್ಕ್​ ಧರಿಸುವುದರಿಂದ ಯಾರು ಮದ್ಯಪಾನ ಮಾಡಿದ್ದಾರೆ ಎಂಬುದು ಕೂಡ ಗೊತ್ತಾಗುವುದಿಲ್ಲ’ ಎಂದಿದ್ದಾರೆ ವಿಜಯ್​ ಸೇತುಪತಿ.

ಬಹುಭಾಷೆಯಲ್ಲಿ ಮಿಂಚುತ್ತಿರುವ ವಿಜಯ್​ ಸೇತುಪತಿ ಸ್ಟಾರ್​ ಕಲಾವಿದ. ಆದರೆ ಅವರು ಪ್ರಯಾಣ ಮಾಡುವಾಗ ಅಂಗರಕ್ಷಕರನ್ನು ಜೊತೆಗೆ ಇಟ್ಟುಕೊಳ್ಳುವುದಿಲ್ಲವಂತೆ. ಬೆಂಗಳೂರಿನಲ್ಲಿ ಹಲ್ಲೆ ಯತ್ನ ನಡೆದಾಗ ವಿಜಯ್​ ಸೇತುಪತಿ ಜೊತೆ ಅವರ ಸ್ನೇಹಿತ ಕಮ್​ ಮ್ಯಾನೇಜರ್​ ಇದ್ದರು. ಈ ಒಂದು ಘಟನೆಯಿಂದ ಸೇತುಪತಿ ನಿಲುವು ಬದಲಾಗಿಲ್ಲ. ಈಗಲೂ ಅವರು ಯಾವುದೇ ಬಾಡಿಗಾರ್ಡ್​ ಇಟ್ಟುಕೊಂಡು ಪ್ರಯಾಣ ಮಾಡಲು ಇಷ್ಟಪಡುವುದಿಲ್ಲ. ಜನರ ಜೊತೆ ಬೆರೆಯಬೇಕು, ಮಾತನಾಡಬೇಕು ಎಂಬ ಮುಕ್ತ ಮನಸ್ಥಿತಿಯನ್ನು ಅವರು ಹೊಂದಿದ್ದಾರೆ.

ಹತ್ತಾರು ಸಿನಿಮಾ ಆಫರ್​ಗಳನ್ನು ಕೈಯಲ್ಲಿ ಇಟ್ಟುಕೊಂಡು ವಿಜಯ್​ ಸೇತುಪತಿ ಬ್ಯುಸಿ ಆಗಿದ್ದಾರೆ. ವೆಬ್​ ಸಿರೀಸ್​ ಲೋಕದಲ್ಲೂ ಅವರಿಗೆ ಭರ್ಜರಿ ಬೇಡಿಕೆ ಇದೆ. ಹೀರೋ, ವಿಲನ್​, ಪೋಷಕ ಪಾತ್ರ ಎಂಬ ಯಾವ ಭೇದವೂ ಇಲ್ಲದೇ ಅವರು ಒಳ್ಳೆಯ ಆಫರ್​ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Puneeth Rajkumar: ಪುನೀತ್​ ಸಮಾಧಿಗೆ ನಟ ಸೂರ್ಯ ಭೇಟಿ; ಅಪ್ಪು ನೆನೆದು ಕಂಬನಿ ಮಿಡಿದ ಕಾಲಿವುಡ್​ ಸ್ಟಾರ್​ ಹೀರೋ

ಪುನೀತ್​ ರಾಜ್​ಕುಮಾರ್​ಗೆ ನಮನ ಸಲ್ಲಿಸಿದ ರಾಮ್​ ಚರಣ್, ವಿಜಯ್​ ಸೇತುಪತಿ​

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್