ವಿದೇಶದ ಆಸೆಗೆ ಚಿತ್ರರಂಗ ಬಿಟ್ಟ ರಂಭಾಗೆ ಸಿನಿಮಾ ಮಾಡೋ ಆಸೆ; ಅವಕಾಶಕ್ಕಾಗಿ ಬೇಡಿಕೆ

Rambha Birthday: ರಂಭಾ ಅವರು ಚಿತ್ರರಂಗದಿಂದ ದೂರ ಉಳಿದು ಕೆನಡಾದಲ್ಲಿ ನೆಲೆಸಿದ್ದಾರೆ. ವಿವಾಹದ ನಂತರ ಅವರು ಚಿತ್ರರಂಗವನ್ನು ತೊರೆದರು. ಇತ್ತೀಚೆಗೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈಗ ಚಿತ್ರರಂಗಕ್ಕೆ ಮರಳುವ ಆಸೆ ಅವರಲ್ಲಿದೆ. ಕೆಲವು ನಿರ್ಮಾಪಕರು ಅವರಿಗೆ ಅವಕಾಶ ನೀಡಲು ಮುಂದೆ ಬರುತ್ತಿಲ್ಲ ಎಂಬ ವರದಿಗಳಿವೆ.

ವಿದೇಶದ ಆಸೆಗೆ ಚಿತ್ರರಂಗ ಬಿಟ್ಟ ರಂಭಾಗೆ ಸಿನಿಮಾ ಮಾಡೋ ಆಸೆ; ಅವಕಾಶಕ್ಕಾಗಿ ಬೇಡಿಕೆ
ರಂಭಾ
Edited By:

Updated on: Jun 05, 2025 | 7:49 AM

ನಟಿ ರಂಭಾ (Rambha) ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಅವರು ವಿವಾಹದ ಬಳಿಕ ಚಿತ್ರರಂಗ ತೊರೆದರು. ರಂಭಾ ಸದ್ಯ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಅವರ ಪತಿ ಕೆನಡಾದಲ್ಲಿ ಉದ್ಯಮಿ ಆಗಿದ್ದಾರೆ. ಅವರು ಇತ್ತೀಚೆಗೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಜೋಡಿ: ಆರ್​ ಯೂ ರೆಡಿ’ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದರು. ಈಗ ಹೊಸ ಸೀಸನ್​ನಲ್ಲಿ ಅವರ ಬದಲು ಮೀನಾ ಬರುತ್ತಾರೆ ಎಂದು ಹೇಳಲಾಗಿದೆ. ಈಗ ನಟಿಗೆ ಚಿತ್ರರಂಗಕ್ಕೆ ಮರಳುವಾಸೆ ಮೂಡಿದೆ. ಇಂದು (ಜೂನ್ 5) ಅವರಿಗೆ ಜನ್ಮದಿನ. ಈ ವೇಳೆ ಅವರ ಬಗ್ಗೆ ನೆನಪಿಸಿಕೊಳ್ಳೋಣ.

ಕೆಲವು ವರದಿಗಳ ಪ್ರಕಾರ ‘ಮ್ಯಾಕ್ಸ್’ ಚಿತ್ರದ ನಿರ್ಮಾಪಕರಾದ ಕಲೈಪುಲಿ ಎಸ್​. ಧನು ಅವರ ಬಳಿ ರಂಭಾ ಪತಿ ಸಿನಿಮಾ ಆಫರ್ ನೀಡುವಂತೆ ಕೇಳಿಕೊಂಡಿದ್ದಾರಂತೆ. ‘ರಂಭಾ ಹಾಗೂ ಅವರ ಪತಿ ಸೇರಿ 2 ಸಾವಿರ ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅವರ ಪತಿ ದೊಡ್ಡ ಉದ್ಯಮಿ. ಅವರಿಗೆ ಸಿನಿಮಾದಲ್ಲಿ ಅವಕಾಶ ನೀಡಿ ಎಂದು ನನ್ನ ಬಳಿ ಕೇಳಿದ್ದರು. ನಾನು ಕೊಡುತ್ತೇನೆ ಎಂದಿದ್ದೆ’ ಎಂದಿದ್ದರು ಕಲೈಪುಲಿ.

ರಂಭಾ ಕನ್ನಡ ಮಂದಿಗೂ ಪರಿಚಿತರು. ಕನ್ನಡದಲ್ಲಿ ಅವರು ಮೊದಲು ಕಾಣಿಸಿಕೊಂಡಿದ್ದು ‘ಸರ್ವರ್ ಸೋಮಣ್ಣ’ ಚಿತ್ರದಲ್ಲಿ. ಆ ಬಳಿಕ ಓ ಪ್ರೇಮವೇ, ‘ಸಾಹುಕಾರ’ ಮೊದಲಾದ ಚಿತ್ರಗಳನ್ನು ಮಾಡಿದರು. ಮೀರಾ ಅವರು 2010ರಲ್ಲಿ ಇಂದ್ರಕುಮಾರ್ ಅವರನ್ನು ವಿವಾಹ ಆದರು. ಆ ಬಳಿಕ ಪತಿ ಜೊತೆ ವಿದೇಶಕ್ಕೆ ತೆರಳಿದರು. ಅಲ್ಲಿ ಸೆಟಲ್ ಆಗಿರೋ ಅವರಿಗೆ ಮೂವರು ಮಕ್ಕಳು.

ಇದನ್ನೂ ಓದಿ
‘ಅಭಿಮಾನ, ಪ್ರೀತಿ ಕುಟುಂಬದ ನೋವಿಗೆ ಕಾರಣವಾಗಬಾರದು’; ಶಿವಣ್ಣ ಭಾವುಕ ಪೋಸ್ಟ್
‘ಥಗ್ ಲೈಫ್’ ಸಿನಿಮಾ ರಿಲೀಸ್ ವೇಳೆ ಬೆಂಗಳೂರಿಗರ ನೆನೆದು ಮರುಗಿದ ಕಮಲ್ ಹಾಸನ್
ದಾಖಲೆ ಭರ್ಜರಿ ದಾಖಲೆ... ಈ ರೀತಿಯಾಗಿ ಟ್ರೋಫಿ ಎತ್ತಿಹಿಡಿದ ಏಕೈಕ ತಂಡ RCB
ತಮಿಳಿಗರಿಗೆ ಕಮಲ್ ಅಭಿಮಾನಿಗಳಿಂದ ಓಪನ್ ಪತ್ರ; ಎಚ್ಚರಿಕೆಯ ಸಂದೇಶ ರವಾನೆ

ಇದನ್ನೂ ಓದಿ: ಜವಾಬ್ದಾರಿ ಮುಗಿಯಿತು.. ನಟನೆಗೆ ಮರಳಲು ರೆಡಿ ಆದ ರಂಭಾ

ರಂಭಾ ಅವರಿಗೆ ಈಗ ಚಿತ್ರರಂಗದಲ್ಲಿ ಮರಳಬೇಕಿದೆ. ಆದರೆ, ಮೊದಲಿನಿಂದ ಸಿನಿಮಾ ರಂಗದಲ್ಲಿ ಅವರು ಆ್ಯಕ್ಟೀವ್ ಆಗಿದ್ದರೆ ಅವರಿಗೆ ಆಫರ್​ಗಳು ಸಿಗುತ್ತಿದ್ದವು. ಆದರೆ, ಈಗ ಆಫರ್​ಗಳು ಸಿಗದೆ ಅವರಿಗೆ ಸಂಕಷ್ಟ ಉಂಟಾಗಿದೆ. ಯಾರೂ ಆಫರ್ ನೀಡೋಕೆ ಮುಂದೆ ಬರುತ್ತಿಲ್ಲ. ಅವರು ಒಂದೊಳ್ಳೆಯ ಚಿತ್ರ ಸಿಕ್ಕರೆ ನಟಿಸಿ ವಿದೇಶಕ್ಕೆ ತೆರಳುವ ನಿರೀಕ್ಷೆಯ್ಲಿದ್ದಾರೆ. ಈ ಮೊದಲು ಅವರಿಗೆ ಅಪಘಾತ ಆಗಿತ್ತು. ಆದರೆ, ಯಾವುದೇ ತೊಂದರೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:47 am, Thu, 5 June 25