ಕಿಸ್, ಭರಾಟೆ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಶ್ರೀಲೀಲಾ (Sree Leela) ಅವರ ತಂದೆಯ ವಿಚಾರ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ತೆಲುಗಿನ ಪೆಳ್ಳಿ ಸಂದಡಿ ಸಿನಿಮಾ ಮೂಲಕ ಟಾಲಿವುಡ್ನಲ್ಲೂ ಸದ್ದು ಮಾಡುತ್ತಿರುವ ಶ್ರೀಲೀಲಾ ಆಂಧ್ರಪ್ರದೇಶದ ಉದ್ಯಮಿ ಸುರಪನೇನಿ ಸುಭಾಕರ ರಾವ್ (Subhakara Rao Suprapaneni) ತನ್ನ ತಂದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸುರಪನೇನಿ ಸುಭಾಕರ ರಾವ್ ‘ಶ್ರೀಲೀಲಾ ನನ್ನ ಮಗಳಲ್ಲ. ನಾನು ಆಕೆಯ ತಾಯಿಗೆ ಡೈವೋರ್ಸ್ ನೀಡಿದ ನಂತರ ಆಕೆ ಹುಟ್ಟಿದ್ದಾಳೆ’ ಎಂದಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಸುರಪನೇನಿ ಸುಭಾಕರ್ ರಾವ್, ಪೆಲ್ಲಿ ಸಂದಡಿ ಸಿನಿಮಾದ ನಾಯಕಿ ಶ್ರೀಲೀಲಾ ನನ್ನ ಮಗಳು ಎಂದು ತೆಲುಗಿನ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಶ್ರೀಲೀಲಾ ನನ್ನ ಮಗಳಲ್ಲ. ನನ್ನ ಪತ್ನಿಯ ಜತೆ ಡೈವೋರ್ಸ್ ಆದ ನಂತರ ಶ್ರೀಲೀಲಾ ಹುಟ್ಟಿದ್ದಾರೆ. ಆ ಡೈವೋರ್ಸ್ ಕೇಸ್ ಕೋರ್ಟ್ನಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ನಾನು ಅವಳಿಗೆ ಜನ್ಮ ನೀಡಿದ ಅಪ್ಪನಲ್ಲ. ವಿನಾಕಾರಣ ಶ್ರೀಲೀಲಾ ನಾನು ಆಕೆಯ ತಂದೆ ಎಂದು ಹೇಳುತ್ತಿದ್ದಾರೆ. ನನ್ನ ಆಸ್ತಿಯಲ್ಲಿ ಪಾಲು ಕೇಳಲೆಂದು ಶ್ರೀಲೀಲಾ ಮತ್ತು ಆಕೆಯ ತಾಯಿ ನನ್ನ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪೆಳ್ಳಿ ಸಂದಡಿ ಸಿನಿಮಾ ಈಗಾಗಲೇ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಶ್ರೀಲೀಲಾ ಅವರ ಸೌಂದರ್ಯ ಮತ್ತು ನೃತ್ಯಕ್ಕೆ ಟಾಲಿವುಡ್ ಪ್ರೇಕ್ಷಕರು ಫಿದಾ ಆಗಿದ್ದಾರೆ. ಒಳ್ಳೆಯ ಆರಂಭ ಪಡೆದುಕೊಂಡಿದ್ದು, ಶ್ರೀಲೀಲಾರ ಬ್ಯೂಟಿ ಮತ್ತು ಡ್ಯಾನ್ಸ್ಗೆ ತೆಲುಗು ಚಿತ್ರರಂಗದ ಅಭಿಮಾನಿಗಳು ಫಿದಾ ಆಗಿದ್ದಾರೆ. ಶ್ರೀಲೀಲಾ ಅವರು ತೆಲುಗಿನ ಖ್ಯಾತ ಉದ್ಯಮಿ ಸುರಪನೇನಿ ಸುಭಾಕರ ರಾವ್ ಅವರ ಮಗಳು ಎಂಬ ವಿಷಯ ಎಲ್ಲೆಡೆ ಹರಿದಾಡುತ್ತಿದೆ. ಆದರೆ, ಇದು ಸುಳ್ಳು ಸುದ್ದಿ ಎಂದು ಸುಭಾಕರ ರಾವ್ ಸ್ಪಷ್ಟನೆ ನೀಡಿದ್ದಾರೆ.
ಈ ವಿಷಯವನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳಲಾಗಿದೆ. ಆದರೆ ಶ್ರೀಲೀಲಾ ಅವರ ತಾಯಿ ಇನ್ನೂ ಕೆಲವು ಕೋರ್ಟ್ಗಳಲ್ಲಿ ಡೈವೋರ್ಸ್ ನಂತರದ ಪರಿಹಾರಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದರು. ಅವುಗಳಲ್ಲಿ ಕೆಲವು ಕೋರ್ಟ್ಗಳಲ್ಲಿ ಕೇಸ್ ಇನ್ನೂ ಇತ್ಯರ್ಥವಾಗಿಲ್ಲ. 20 ವರ್ಷಗಳ ಹಿಂದೆ ನಾವು ವಿಚ್ಛೇದನ ಪಡೆದಾಗಲೇ ನಾನು ಸಾಕಷ್ಟನ್ನು ಕಳೆದುಕೊಂಡಿದ್ದೇನೆ. ಈಗ ಮತ್ತೆ ನನ್ನ ಹೆಸರನ್ನು ದುರ್ಬಳಕೆ ಮಾಡುವುದನ್ನು ನಾವು ಸಹಿಸಿಕೊಳ್ಳುವುದಿಲ್ಲ ಎಂದು ಸುಭಾಕರ ರಾವ್ ಹೇಳಿದ್ದಾರೆ.
ಶ್ರೀಲೀಲಾ ಬೆಂಗಳೂರಿನವರಾಗಿದ್ದು, ಅವರ ತಾಯಿ ಸ್ವರ್ಣಲತಾ ವೈದ್ಯೆಯಾಗಿದ್ದಾರೆ. ಅಮೆರಿಕದಲ್ಲಿ ಹುಟ್ಟಿದ ಶ್ರೀಲೀಲಾ ಮಾಡೆಲಿಂಗ್ತೊಡಗಿಸಿಕೊಂಡಿದ್ದರು. ಬಳಿಕ ಕಿಸ್ ಸಿನಿಮಾದಲ್ಲಿ ನಟಿಸಿದರು. ನಂತರ ಶ್ರೀಮುರಳಿ ನಾಯಕನಾಗಿ ನಟಿಸಿದ ಭರಾಟೆ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಇದೀಗ ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ.
ಇದನ್ನೂ ಓದಿ: ತೆಲುಗಿನಲ್ಲಿ ಮೊದಲ ಚಿತ್ರದ ರಿಲೀಸ್ಗೂ ಮುನ್ನವೇ ಹೆಚ್ಚಿದೆ ಕನ್ನಡತಿ ಶ್ರೀಲೀಲಾ ಹವಾ; ರಶ್ಮಿಕಾ, ಪೂಜಾ, ಕೃತಿ ಕಥೆಯೇನು?
ಅಲ್ಲು ಅರ್ಜುನ್ಗೆ ಸರಿಸಾಟಿಯಾಗಿ ನಿಲ್ಲೋಕೆ ಹೊರಟ ರಶ್ಮಿಕಾ ಮಂದಣ್ಣ; ಇದಕ್ಕೆ ಅವರು ಮಾಡ್ತಿರೋದೇನು?