ಗ್ಲಾಮರಸ್ ಬೆಡಗಿ ತಮನ್ನಾ ಭಾಟಿಯಾ ಆಸ್ತಿ ಬಗ್ಗೆ ಕೇಳಿದ್ರೆ ನೀವು ಅಚ್ಚರಿ ಪಡ್ತೀರಾ
ತಮನ್ನಾ ಭಾಟಿಯಾ ಅವರು 20 ವರ್ಷಗಳ ಸಿನಿಮಾ ಜೀವನದಲ್ಲಿ ಭರ್ಜರಿ ಆಸ್ತಿ ಮಾಡಿದ್ದಾರೆ. ಅವರ ಆದಾಯದ ಮುಖ್ಯ ಮೂಲಗಳು ಸಿನಿಮಾಗಳು ಮತ್ತು ಬ್ರಾಂಡ್ ಪ್ರಚಾರ. ಮುಂಬೈನಲ್ಲಿ 16 ಕೋಟಿ ರೂಪಾಯಿಯ ಫ್ಲ್ಯಾಟ್, ದುಬಾರಿ ಕಾರುಗಳು ಹಾಗೂ ಹಲವು ಹೂಡಿಕೆಗಳಿಂದ ಅವರ ಆಸ್ತಿ ಹೆಚ್ಚಾಗಿದೆ. ಅವರು ಬಹುತೇಕ ಎಲ್ಲಾ ದಕ್ಷಿಣ ಭಾರತದ ಮತ್ತು ಹಿಂದಿ ಚಿತ್ರರಂಗಗಳಲ್ಲಿ ಪ್ರಸಿದ್ಧರಾಗಿದ್ದಾರೆ.
ನಟಿ ತಮನ್ನಾ ಭಾಟಿಯಾ ಅವರು ಬಾಲಿವುಡ್ ಹಾಗೂ ದಕ್ಷಿಣ ಭಾರತದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಮಿಲ್ಕಿ ಬ್ಯೂಟಿ ಎಂದೇ ಫೇಮಸ್ ಆದರು. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ‘ಚಾಂದ್ ಸ ರೋಶನ್ ಚೆಹ್ರಾ’ ಸಿನಿಮಾ ಮೂಲಕ. ಈ ಚಿತ್ರ 2005ರಲ್ಲಿ ರಿಲೀಸ್ ಆಯಿತು. ಅವರು ಬಣ್ಣದ ಲೋಕಕ್ಕೆ ಬಂದು 20 ದಶಕ ಕಳೆದಿದೆ. ಅವರು ಈವರೆಗೂ ಮೊದಲಿನಷ್ಟೇ ಬೇಡಿಕೆ ಉಳಿಸಿಕೊಂಡಿದ್ದಾರೆ. ಡ್ಯಾನ್ಸ್ ಮೂಲಕವೂ ಗಮನ ಸೆಳೆದಿದ್ದಾರೆ. ಅವರ ಆಸ್ತಿ ಭರ್ಜರಿ ಇದೆ.
ತಮನ್ನಾ ಭಾಟಿಯಾ 20 ವರ್ಷಗಳಲ್ಲಿ ಭರ್ಜರಿ ಆಸ್ತಿ ಮಾಡಿದ್ದಾರೆ. 2 ದಶಕಗಳಲ್ಲಿ ಅವರು ಬರೋಬ್ಬರಿ 120 ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೆ. ಅವರ ಬಳಿ ದುಬಾರಿ ಕಾರು, ದೊಡ್ಡ ದೊಡ್ಡ ಮನೆ ಇದೆ. ಅನೇಕ ಕಡೆಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಈ ಕಾರಣಕ್ಕೆ ಅವರ ಆಸ್ತಿ ಹೆಚ್ಚುತ್ತಿದೆ.
ತಮನ್ನಾ ಭಾಟಿಯಾ ಅವರ ಸಂಭಾವನೆ ಹೆಚ್ಚು ಬರೋದು ಸಿನಿಮಾಗಳ ಮೂಲಕ. ‘ಬಬ್ಲಿ ಬೌನ್ಸರ್’, ‘ಕಲ್ಲೂರಿ’, ಹ್ಯಾಪಿ ಡೇಸ್’, ‘ಬಾಹುಬಲಿ’ ರೀತಿಯ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರು ಡ್ಯಾನ್ಸ್ ಮೂಲಕವೂ ಗಮನ ಸೆಳೆದಿದ್ದಾರೆ. ‘ಸ್ತ್ರೀ 2’ ಚಿತ್ರದಲ್ಲಿ ಅವರು ‘ಆಜ್ ಕಿ ರಾತ್..’ ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದರು. ಅದೇ ರೀತಿ ಅವರು ‘ಕೆಜಿಎಫ್’ ಚಿತ್ರದಲ್ಲಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.
ತಮನ್ನಾ ಭಾಟಿಯಾ ಅವರಿಗೆ ಬ್ರ್ಯಾಂಡ್ಗಳ ಪ್ರಚಾರದ ಮೂಲಕ ದೊಡ್ಡ ಮಟ್ಟದ ಹಣ ಬರುತ್ತದೆ. ಜ್ಯುವೆಲರಿ, ಸೋಪ್ ಬ್ರ್ಯಾಂಡ್, ಹಲವು ಸೌಂದರ್ಯ ವರ್ಧಕ ಬ್ರ್ಯಾಂಡ್ಗಳಿಗೆ ತಮನ್ನಾ ಭಾಟಿಯಾ ಪ್ರಚಾರ ರಾಯಭಾರಿ ಆಗಿದ್ದಾರೆ. ಇವುಗಳಿಗೆ ಅವರು ದೊಡ್ಡ ಮಟ್ಟದ ಹಣ ಚಾರ್ಜ್ ಮಾಡುತ್ತಾರೆ.
ಇದನ್ನೂ ಓದಿ: ತಮನ್ನಾ ಭಾಟಿಯಾರಿಂದ ಹಿಟ್ ಆಯ್ತು ‘ಸ್ತ್ರೀ 2’ ಸಿನಿಮಾ? ಪ್ರತಿಕ್ರಿಯಿಸಿದ ನಟಿ
ತಮನ್ನಾ ಭಾಟಿಯಾ ಅವರು ಮುಂಬೈನಲ್ಲಿ 16 ಕೋಟಿ ರೂಪಾಯಿಯ ಫ್ಲ್ಯಾಟ್ ಹೊಂದಿದ್ದಾರೆ. ಅವರ ಮನೆ 14ನೇ ಫ್ಲೋರ್ನಲ್ಲಿ ಇದ್ದು, ಸಮುದ್ರಕ್ಕೆ ಮನೆ ಮಾಡಿದೆ. ಇನ್ನು ಅನೇಕ ಕಡೆಗಳಲ್ಲಿ ಅವರು ಕಟ್ಟಡವೊಂದನ್ನು ಬಾಡಿಗೆ ನೀಡಿದ್ದು, ಇದಕ್ಕಾಗಿ ಅವರು ತಿಂಗಳಿಗೆ 18 ಲಕ್ಷ ರೂಪಾಯಿ ಪಡೆಯುತ್ತಾರೆ. ತಮನ್ನಾ ಭಾಟಿಯಾ ಬಳಿ ಬಿಎಂಡಬ್ಲ್ಯೂ 320ಐ, ಮರ್ಸೀಡಿಸ್ ಬೆಂಜ್ ಜಿಎಲ್ಇ ಮೊದಲಾದ ಸುದ್ದಿಗಳು ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.