ಸಣ್ಣ ವಯಸ್ಸಿಗೆ ಖ್ಯಾತ ನಿರ್ಮಾಪಕನ ಮಗಳ ಸಾವು; ಶಾಕಿಂಗ್ ವಿಚಾರ ರಿವೀಲ್ ಮಾಡಿದ ತಾಯಿ
Actress Tanya Singh: ನಟ ಮತ್ತು ನಿರ್ಮಾಪಕ ಕೃಷ್ಣಕುಮಾರ್ ಅವರ ಮಗಳು ತಿಶಾ ಅವರ ನಿಧನದ ನಂತರ, ಅವರ ತಾಯಿ ತನ್ಯಾ ಸಿಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಿಶಾ ಕ್ಯಾನ್ಸರ್ ನಿಂದ ಸಾವನ್ನಪ್ಪಿಲ್ಲ ಎಂದು ತಾನ್ಯಾ ಹೇಳಿದ್ದಾರೆ.
ನಟ ಮತ್ತು ನಿರ್ಮಾಪಕ ಕ್ರಿಶನ್ ಕುಮಾರ್ ಅವರ 21 ವರ್ಷದ ಮಗಳು ಜುಲೈನಲ್ಲಿ ಕ್ಯಾನ್ಸರ್ನಿಂದ ನಿಧನರಾದರು. ಅವರ ಮಗಳ ಹೆಸರು ತಿಶಾ. ಇದೀಗ ತಿಶಾ ಅವರ ಮರಣದ ನಾಲ್ಕು ತಿಂಗಳ ನಂತರ, ಅವರ ತಾಯಿ ತಾನ್ಯಾ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಭಾವನಾತ್ಮಕ ಪೋಸ್ಟ್ ಅನ್ನು ಬರೆದಿದ್ದಾರೆ. ಅಷ್ಟೇ ಅಲ್ಲ, ‘ನನ್ನ ಮಗಳು ಕ್ಯಾನ್ಸರ್ ನಿಂದ ಸತ್ತಿಲ್ಲ’ ಎಂದು ಈ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಅವರು ವೈದ್ಯಕೀಯ ವ್ಯವಸ್ಥೆಯನ್ನೂ ಟಾರ್ಗೆಟ್ ಮಾಡಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ.
‘ಹೇಗೆ, ಏನು ಮತ್ತು ಏಕೆ.. ನಿಖರವಾಗಿ ಏನಾಯಿತು ಎಂದು ಕೇಳಲು ಅನೇಕ ಜನರು ನನಗೆ ಸಂದೇಶ ಕಳುಹಿಸುತ್ತಿದ್ದಾರೆ ಮತ್ತು ಕರೆ ಮಾಡುತ್ತಿದ್ದಾರೆ. ಸತ್ಯವು ವ್ಯಕ್ತಿನಿಷ್ಠ ಮತ್ತು ವೈಯಕ್ತಿಕವಾಗಿದೆ. ಇನ್ನೊಬ್ಬರ ದುಷ್ಕೃತ್ಯಗಳಿಂದ ಒಬ್ಬರು ಬಲಿಯಾದಾದ ಬೇಸರ ಆಗುತ್ತದೆ.. ಯಾರೂ ಕರ್ಮ ಮತ್ತು ದೈವಿಕ ನ್ಯಾಯದ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಹಿಂದಿನ ಪೋಸ್ಟ್‌ಗಳಲ್ಲಿ ಹೇಳಿದಂತೆ, ಕೆಲವೊಮ್ಮೆ ಇಡೀ ಅಸ್ತಿತ್ವವು ನಿಮ್ಮ ಸ್ವಂತದ್ದಲ್ಲ’ ಎಂದಿದ್ದಾರೆ ಅವರು.
ವೈದ್ಯಕೀಯ ವ್ಯವಸ್ಥೆಯ ತಪ್ಪಾದ ರೋಗನಿರ್ಣಯ ನಮಗೆ ತೊಂದರೆ ಮಾಡಿತು. ಬೇರೆಯವರು ಏನು ಯೋಚಿಸುತ್ತಾರೆ ಎಂಬುದು ಸತ್ಯಕ್ಕೆ ಮುಖ್ಯವಲ್ಲ. ಏಕೆಂದರೆ ನಿಮಗೆ ತಿಳಿದಿರುವುದು ಬೇರೆ ಯಾರಿಗೂ ತಿಳಿದಿಲ್ಲ. ಸಮಯ ಬಂದಾಗ ಸತ್ಯ ತಾನಾಗಿಯೇ ಹೊರಬೀಳುತ್ತದೆ ಮತ್ತು ಮುಂದೊಂದು ದಿನ ಖಂಡಿತಾ ಆಗುತ್ತದೆ’ ಎಂದು ಅವರು ಈ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ:ಈ ಹೀರೋ ಜೊತೆ ನಟಿಸೋಕೆ ರಮ್ಯಾ ಕೃಷ್ಣಗೆ ಸಖತ್ ಭಯ
‘ಏನೇ ಸಂಭವಿಸಿದರೂ, ನನ್ನ ಮಗಳು ತಿಶಾ ಎಂದಿಗೂ ಭಯ ಅಥವಾ ಖಿನ್ನತೆಗೆ ಒಳಗಾಗಲಿಲ್ಲ. ಅವಳು ಧೈರ್ಯಶಾಲಿ ಹುಡುಗಿಯಾಗಿದ್ದಳು. ನಿಜ ಹೇಳಬೇಕೆಂದರೆ ನನ್ನ ಮಗಳಿಗೆ ಕ್ಯಾನ್ಸರ್ ಇರಲಿಲ್ಲ. ಆಕೆಗೆ ಹದಿನೈದು ವರ್ಷದವಳಿದ್ದಾಗ ಲಸಿಕೆಯನ್ನು ನೀಡಲಾಯಿತು. ಇದರಿಂದ ತೊಂದರೆ ಆಗಿದೆ. ಆ ಸಮಯದಲ್ಲಿ ನಮಗೆ ಅದರ ಬಗ್ಗೆ ಏನೂ ತಿಳಿದಿರಲಿಲ್ಲ’ ಎಂದಿದ್ದಾರೆ ಅವರು.
‘ಪೋಷಕರೇ, ನಿಮ್ಮ ಮಗ ಅಥವಾ ಮಗಳಿಗೆ ಚಿಕಿತ್ಸೆ ಕೊಡಿಸುವಾಗ ಮೂರನೇ ಅಭಿಪ್ರಾಯವನ್ನು ಪಡೆಯಿರಿ’ ಎಂದು ಅವರು ಕೋರಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Sat, 30 November 24