ಈ ಹೀರೋ ಜೊತೆ ನಟಿಸೋಕೆ ರಮ್ಯಾ ಕೃಷ್ಣಗೆ ಸಖತ್ ಭಯ

‘ಬಾಹುಬಲಿ’ ಚಿತ್ರದಲ್ಲಿ ರಾಜಮಾತೆ ಶಿವಗಾಮಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು ರಮ್ಯಾ ಕೃಷ್ಣ. ಈ ಪಾತ್ರ ಸಖತ್ ಪವರ್​ಫುಲ್ ಆಗಿತ್ತು. ಈಗ ಸಿನಿಮಾಗಳಲ್ಲಿ ಅವರು ಪೋಷಕ ಪಾತ್ರಗಳ ಮೂಲಕ ಮಿಂಚುತ್ತಿದ್ದಾರೆ. ಈ ನಡುವೆ ರಮ್ಯಾ ಕೃಷ್ಣ ಈ ಹಿಂದೆ ಮಾಡಿದ ಕಾಮೆಂಟ್‌ಗಳು ಈಗ ವೈರಲ್ ಆಗುತ್ತಿವೆ.

ಈ ಹೀರೋ ಜೊತೆ ನಟಿಸೋಕೆ ರಮ್ಯಾ ಕೃಷ್ಣಗೆ ಸಖತ್ ಭಯ
ರಮ್ಯಾ ಕೃಷ್ಣ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 30, 2024 | 7:39 AM

ರಮ್ಯಾ ಕೃಷ್ಣ ಒಂದು ಕಾಲದಲ್ಲಿ ತಮ್ಮ ಸೌಂದರ್ಯ ಮತ್ತು ನಟನೆಯಿಂದ ಮೆಚ್ಚುಗೆ ಪಡೆದವರು. ಅವರು ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಮ್ಯಾ ಕೃಷ್ಣ ಅವರು ಕನ್ನಡದಲ್ಲೂ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸ್ಟಾರ್ ಆಗಿ ಮಿಂಚಿದ್ದಾರೆ. ಹಲವು ಸ್ಟಾರ್ ಹೀರೋಗಳ ಎದುರು ನಟಿಸಿರುವ ರಮ್ಯಾ ಕೃಷ್ಣ ಈಗಲೂ ಅಷ್ಟೇ ಸುಂದರವಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ರಮ್ಯಾ ಕೃಷ್ಣ ನೆಗೆಟಿವ್ ಪಾತ್ರಗಳಲ್ಲೂ ರಂಜಿಸಿದ್ದಾರೆ. ವಿಶೇಷವಾಗಿ ರಮ್ಯಾ ಕೃಷ್ಣ ಅವರು ಒಂದು ಅಪರೂಪದ ವಿಚಾರ ಹಂಚಿಕೊಂಡಿದ್ದಾರೆ. ಅವರಿಗೆ ಓರ್ವ ಹೀರೋ ಜೊತೆ ನಟಿಸಲು ಭಯವಾಗಿತ್ತಂತೆ.

‘ಬಾಹುಬಲಿ’ ಚಿತ್ರದಲ್ಲಿ ರಾಜಮಾತೆ ಶಿವಗಾಮಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು ರಮ್ಯಾ ಕೃಷ್ಣ. ಈ ಪಾತ್ರ ಸಖತ್ ಪವರ್​ಫುಲ್ ಆಗಿತ್ತು. ಈಗ ಸಿನಿಮಾಗಳಲ್ಲಿ ಅವರು ಪೋಷಕ ಪಾತ್ರಗಳ ಮೂಲಕ ಮಿಂಚುತ್ತಿದ್ದಾರೆ. ಈ ನಡುವೆ ರಮ್ಯಾ ಕೃಷ್ಣ ಈ ಹಿಂದೆ ಮಾಡಿದ ಕಾಮೆಂಟ್‌ಗಳು ಈಗ ವೈರಲ್ ಆಗುತ್ತಿವೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿರುವ ರಮ್ಯಾ ಕೃಷ್ಣ, ಕಮಲ್ ಹಾಸನ್ ಬಗ್ಗೆ ಮಾತನಾಡಿದ್ದ ಮಾತು ಎಲ್ಲರ ಗಮನ ಸೆಳೆದಿದೆ.

‘ಕಮಲ್ ಸರ್ ಜೊತೆ ನಟಿಸಲು ನನಗೆ ಭಯವಾಗಿತ್ತು. ಯಾವುದೇ ಕಲಾವಿದರಿಗೆ ಅವರೊಂದಿಗೆ ನೇರ ಸಂಭಾಷಣೆ ನಡೆಸಲು ಭಯವಾಗುತ್ತದೆ’ ಎಂದು ರಮ್ಯಾ ಕೃಷ್ಣ ಅವರು ಹೇಳಿದ್ದರು. ‘ಕಮಲ್ ಹಾಸನ್ ಅವರೇ ನನ್ನ ಗುರು. ನಾನು ಅವರನ್ನೇ ಹಿಂಬಾಲಿಸುತ್ತೇನೆ’ ಎಂದು ಕೂಡ ಕಮಲ್ ಹಾಸನ್ ಅವರು ಹೇಳಿದ್ದರು.

ಈ ಮೊದಲು ಕಮಲ್ ಹಾಸನ್ ಅವರಿಗೆ ಕೊವಿಡ್ ಆಗಿತ್ತು. ಆ ಸಂದರ್ಭದಲ್ಲಿ ರಮ್ಯಾ ಕೃಷ್ಣ ಅವರು ಬಿಗ್ ಬಾಸ್ ನಡೆಸಿಕೊಟ್ಟಿದ್ದರು. ಆಗ ಅವರು ಖಡಕ್ ಆಗಿ ಬಿಗ್ ಬಾಸ್ ನಡೆಸಿಕೊಟ್ಟು ಗಮನ ಸೆಳೆದಿದ್ದರು.

ಇದನ್ನೂ ಓದಿ: ರಮ್ಯಾ ಕೃಷ್ಣಗೆ ವಯಸ್ಸೇ ಆಗುತ್ತಿಲ್ಲವೇ? ಅಂದಹಾಗೆ ಈ ನಟಿಯ ವಯಸ್ಸೆಷ್ಟು?

ರಮ್ಯಾ ಕೃಷ್ಣ ಅವರು ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾ 1988ರ ‘ಶಕ್ತಿ’. ಆ ಬಳಿಕ ಅವರು ‘ನೀಲಾಂಬರಿ’ ಚಿತ್ರದಲ್ಲಿ ನೀಲಾಂಬರಿ ಪಾತ್ರ ಮಾಡಿ ಗಮನ ಸೆಳೆದರು. 2016ರ ‘ಜಾಗ್ವಾರ್’ ಸಿನಿಮಾದಲ್ಲಿ ಅವರು ನಟಿಸಿದ್ದರು. ಪುನೀತ್ ನಟನೆಯ ‘ಅಂಜನಿ ಪುತ್ರ’ದಲ್ಲಿ ನಟಿಸಿದ್ದರು. ಇದಾದ ಬಳಿಕ ಅವರು ಕನ್ನಡಕ್ಕೆ ಬಂದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಒಂದಿಬ್ಬರ ನಡುವಿನ ಜಗಳ ಪಕ್ಷದ ಕಲಹ ಆಗಲಾರದು: ರಾಧಾ ಮೋಹನ್ ದಾಸ್ ಅಗರವಾಲ್
ಒಂದಿಬ್ಬರ ನಡುವಿನ ಜಗಳ ಪಕ್ಷದ ಕಲಹ ಆಗಲಾರದು: ರಾಧಾ ಮೋಹನ್ ದಾಸ್ ಅಗರವಾಲ್
Video: ಅಪಘಾತದ ಬಳಿಕ ಹೊತ್ತಿ ಉರಿದ ಕಾರುಗಳು, ಓರ್ವ ಸಾವು
Video: ಅಪಘಾತದ ಬಳಿಕ ಹೊತ್ತಿ ಉರಿದ ಕಾರುಗಳು, ಓರ್ವ ಸಾವು
ತೆಲಂಗಾಣದಲ್ಲಿ ಪ್ರಬಲ ಭೂಕಂಪ, ವಿಡಿಯೋ ಇಲ್ಲಿದೆ
ತೆಲಂಗಾಣದಲ್ಲಿ ಪ್ರಬಲ ಭೂಕಂಪ, ವಿಡಿಯೋ ಇಲ್ಲಿದೆ
ಸಚಿನ್ ತೆಂಡೂಲ್ಕರ್ ಮುಂದೆ ಅಸಹಾಯಕತೆ ತೋಡಿಕೊಂಡ ವಿನೋದ್ ಕಾಂಬ್ಳಿ
ಸಚಿನ್ ತೆಂಡೂಲ್ಕರ್ ಮುಂದೆ ಅಸಹಾಯಕತೆ ತೋಡಿಕೊಂಡ ವಿನೋದ್ ಕಾಂಬ್ಳಿ
ವೀಳ್ಯದೆಲೆ ಗಿಡ ಮನೆಯಲ್ಲಿ ಇದ್ದರೆ ಏನೆಲ್ಲಾ ಲಾಭವಾಗುತ್ತದೆ? ವಿಡಿಯೋ ನೋಡಿ
ವೀಳ್ಯದೆಲೆ ಗಿಡ ಮನೆಯಲ್ಲಿ ಇದ್ದರೆ ಏನೆಲ್ಲಾ ಲಾಭವಾಗುತ್ತದೆ? ವಿಡಿಯೋ ನೋಡಿ
ಸಣ್ಣ ವಿವಾದ, ಬೈಕ್ ಸವಾರನನ್ನು ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಚಾಲಕ
ಸಣ್ಣ ವಿವಾದ, ಬೈಕ್ ಸವಾರನನ್ನು ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಚಾಲಕ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಇಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಇಡೇರಲಿವೆ
ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು