ಈ ವಾರ ಒಟಿಟಿಗೆ ಬರುತ್ತಿವೆ ಕೆಲ ಸೂಪರ್ ಹಿಟ್ ಸಿನಿಮಾಗಳು
OTT Movies: ಈ ವಾರ ಚಿತ್ರಮಂದಿರದಲ್ಲಿ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗಿಲ್ಲ. ಆದರೆ ಒಟಿಟಿಯಲ್ಲಿ ಕೆಲವು ಒಳ್ಳೆಯ ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆ ಆಗಿವೆ.
ಈ ವಾರ ಚಿತ್ರಮಂದಿರದಲ್ಲಿ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗಿಲ್ಲ. ‘ಪುಷ್ಪ 2’ ಸಿನಿಮಾ ಮುಂದಿನ ವಾರ ಬಿಡುಗಡೆ ಆಗಲಿರುವ ಕಾರಣ ಯಾವ ದೊಡ್ಡ ಸಿನಿಮಾಗಳು ಸಹ ಈ ವಾರ ತೆರೆಗೆ ಬರುತ್ತಿಲ್ಲ. ಆದರೆ ಒಟಿಟಿಯಲ್ಲಿ ಹಾಗಲ್ಲ. ಚಿತ್ರಮಂದಿರಗಳಲ್ಲಿ ಎಷ್ಟೇ ದೊಡ್ಡ ಸ್ಟಾರ್ ಸಿನಿಮಾ ಬಿಡುಗಡೆ ಆದರೂ ಸಹ ಒಟಿಟಿಗಳಿಗೆ ಅದೆಲ್ಲ ಲೆಕ್ಕಕ್ಕೆ ಬರುವುದಿಲ್ಲ. ಚಿತ್ರಮಂದಿರಗಳು ಸ್ಟಾರ್ ನಟರ ಸಿನಿಮಾಗಳಿಲ್ಲದೆ ಬರಗುಡುತ್ತಿರುವಾಗ ಒಟಿಟಿಯಲ್ಲಿ ಕೆಲ ಒಳ್ಳೆಯ ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಲಕ್ಕಿ ಭಾಸ್ಕರ್
ಒಂದು ತಿಂಗಳ ಹಿಂದೆ ಅಂದರೆ ಅಕ್ಟೋಬರ್ 30 ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ದುಲ್ಕರ್ ಸಲ್ಮಾನ್ ನಟನೆಯ ‘ಲಕ್ಕಿ ಭಾಸ್ಕರ್’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ‘ಲಕ್ಕಿ ಭಾಸ್ಕರ್’ ಸಿನಿಮಾ ಈ ವಾರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ನವೆಂಬರ್ 28ರಂದೇ ಈ ಸಿನಿಮಾ ಒಟಿಟಿಗೆ ಬಂದಿದ್ದು ಅಲ್ಲಿಯೂ ಸಹ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಅಂದಗಾನ್
ತಮಿಳಿನ ಸಿನಿಮಾ ‘ಅಂದಗಾನ್’ ಇದೇ ವಾರ ಅಮೆಜಾನ್ ಪ್ರೈಂನಲ್ಲಿ ತೆರೆಗೆ ಬಂದಿದೆ. ಈ ಸಿನಿಮಾ ಹಿಂದಿಯ ‘ಅಂದಾಧುನ್’ ಸಿನಿಮಾದ ರೀಮೇಕ್ ಆಗಿದೆ. ಪ್ರಶಾಂತ್, ಸಿಮ್ರನ್, ಪ್ರಿಯಾ ಆನಂದ್ ಇನ್ನೂ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ವಾರ ಅಂದರೆ ನವೆಂಬರ್ 28 ರಂದು ಅಮೆಜಾನ್ನಲ್ಲಿ ಬಿಡುಗಡೆ ಆಗಿದೆ.
ಬ್ಲಡಿ ಬೆಗ್ಗರ್
‘ಜೈಲರ್’ ಸಿನಿಮಾದ ನಿರ್ದೇಶಕ ನೆಲ್ಸನ್ ನಿರ್ಮಾಣ ಮಾಡಿರುವ ‘ಬ್ಲಡಿ ಬೆಗ್ಗರ್’ ಸಿನಿಮಾ ಅಕ್ಟೋಬರ್ 31 ರಂದು ತೆರೆಗೆ ಬಂದಿತ್ತು. ಸಿನಿಮಾ ಈ ವಾರ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ನವೆಂಬರ್ 29 ರಂದು ಈ ಸಿನಿಮಾ ಒಟಿಟಿಗೆ ಬಂದಿದೆ. ಬ್ಲಡಿ ಬೆಗ್ಗರ್, ಭಿಕ್ಷುಕನೊಬ್ಬನ ಕತೆಯನ್ನು ಒಳಗೊಂಡಿದೆ.
ಇದನ್ನೂ ಓದಿ:ಭಾರಿ ಬೆಲೆಗೆ ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನಿಮಾ ಸ್ಯಾಟಲೈಟ್ ಮತ್ತು ಒಟಿಟಿ ಹಕ್ಕು ಮಾರಾಟ
‘ಬ್ರದರ್’
ತಮಿಳಿನ ಸ್ಟಾರ್ ನಟ ಜಯಂ ರವಿ ನಟಿಸಿರುವ ‘ಬ್ರದರ್’ ಸಿನಿಮಾ ಅಕ್ಟೋಬರ್ 31 ರಂದು ತೆರೆಗೆ ಬಂದಿತ್ತು. ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಂಡಿರಲಿಲ್ಲ. ಇದೀಗ ಇದೇ ಸಿನಿಮಾ ಅಮೆಜಾನ್ ಪ್ರೈಂಗೆ ಬಂದಿದೆ. ಈ ವಾರವಷ್ಟೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗುತ್ತಿದೆ.
‘ವಿಕಟಕವಿ’
ಥ್ರಿಲ್ಲರ್ ಕತೆಯುಳ್ಳ ‘ವಿಕಟಕವಿ’ ತೆಲುಗಿನ ಹೊಸ ವೆಬ್ ಸರಣಿ ಆಗಿದ್ದು, ಕೃಷ್ಣದೇವರಾಯ ಆಸ್ತಾನದಲ್ಲಿದ್ದ ಕವಿ ರಾಮಕೃಷ್ಣ ಅವರ ಪಾತ್ರವನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ. ನವೆಂಬರ್ 28 ರಂದು ಇದು ಬಿಡುಗಡೆ ಆಗಿದೆ ಜೀ 5 ನಲ್ಲಿ.
‘ಕ’
ತೆಲುಗಿನಲ್ಲಿ ಇತ್ತೀಚೆಗೆ ಬಿಡುಗಡೆ ಆಗಿ ಟ್ರೆಂಡ್ ಹುಟ್ಟಿಸಿದ ಸಿನಿಮಾ ‘ಕ’. ಕರ್ನಾಟಕದ ಆಗುಂಬೆ ಸೇರಿದಂತೆ ಮಲನಾಡ ಪ್ರದೇಶದಲ್ಲಿ ಚಿತ್ರೀಕರಣಗೊಂಡಿರುವ ತೆಲುಗು ಸಿನಿಮಾ ‘ಕ’ ಕೆಲ ವಾರಗಳ ಹಿಂದೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಇದೀಗ ಈ ಸಿನಿಮಾ ಇಟಿವಿ ವಿನ್ನಲ್ಲಿ ತೆರೆಗೆ ಬಂದಿದೆ.
‘ಅಪ್ಪುಡೊ ಇಪ್ಪುಡೊ ಎಪ್ಪುಡೊ’
ಕನ್ನಡತಿ ರುಕ್ಮಿಣಿ ವಸಂತ್ ನಟಿಸಿರುವ ಮೊದಲ ತೆಲುಗು ಸಿನಿಮಾ ‘ಅಪ್ಪುಡೊ ಇಪ್ಪುಡೊ ಎಪ್ಪುಡೊ’ ಕೆಲ ವಾರಗಳ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಸಾಧಾರಣ ಪ್ರದರ್ಶನವನ್ನಷ್ಟೆ ಕಂಡಿತು. ಇದೀಗ ಈ ಸಿನಿಮಾ ಕೆಲವೇ ವಾರಗಳಲ್ಲಿ ಸಿನಿಮಾ ಒಟಿಟಿಗೆ ಬಂದಿದೆ. ಅಮೆಜಾನ್ ಪ್ರೈಂನಲ್ಲಿ ಈ ಸಿನಿಮಾ ಇದೇ ವಾರ ಬಿಡುಗಡೆ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:26 pm, Sat, 30 November 24