AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adipurush: ಅಯೋಧ್ಯೆಗೆ ತೆರಳಿ ವಿಶೇಷವಾಗಿ ಸಿನಿಮಾ ಪ್ರಚಾರ ಮಾಡಲಿರುವ ಪ್ರಭಾಸ್​?

Prabhas: ‘ಆದಿಪುರುಷ್​’ ಚಿತ್ರ ಅದ್ದೂರಿ ಬಜೆಟ್​ನಲ್ಲಿ ಮೂಡಿಬರುತ್ತಿದೆ. ರಾಮನ ಪಾತ್ರ ಮಾಡುತ್ತಿರುವ ನಟ ಪ್ರಭಾಸ್​ ಪಾಲಿಗೆ ಈ ಸಿನಿಮಾ ವಿಶೇಷವಾಗಿರಲಿದೆ.

Adipurush: ಅಯೋಧ್ಯೆಗೆ ತೆರಳಿ ವಿಶೇಷವಾಗಿ ಸಿನಿಮಾ ಪ್ರಚಾರ ಮಾಡಲಿರುವ ಪ್ರಭಾಸ್​?
ಪ್ರಭಾಸ್
TV9 Web
| Edited By: |

Updated on:Sep 14, 2022 | 8:40 AM

Share

ಪ್ಯಾನ್​ ಇಂಡಿಯಾ ಹೀರೋ ಪ್ರಭಾಸ್ (Prabhas)​ ಅವರಿಗೆ ತುರ್ತಾಗಿ ಒಂದು ಗೆಲುವು ಬೇಕಿದೆ. ‘ಬಾಹುಬಲಿ’ ನಂತರ ಅವರು ನಟಿಸಿದ ಬೇರೆ ಯಾವ ಚಿತ್ರವೂ ಅವರಿಗೆ ನಿರೀಕ್ಷಿತ ಮಟ್ಟದ ಯಶಸ್ಸು ತಂದುಕೊಡಲಿಲ್ಲ. ‘ಸಾಹೋ’, ‘ರಾಧೆ ಶ್ಯಾಮ್​’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತವು. ಮುಂಬರುವ ಸಿನಿಮಾಗಳನ್ನು ಹೇಗಾದರೂ ಮಾಡಿ ಗೆಲ್ಲಿಸಲೇಬೇಕು ಎಂದು ಪ್ರಭಾಸ್​ ಹಠ ತೊಟ್ಟಂತಿದೆ. ಸದ್ಯ ಅವರು ‘ಆದಿಪುರುಷ್​’ (Adipurush Movi) ಮತ್ತು ‘ಸಲಾರ್​’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಪೈಕಿ ‘ಆದಿಪುರುಷ್​’ ಚಿತ್ರ ಮೊದಲು ರಿಲೀಸ್​ ಆಗಲಿದೆ. ಅದರ ಟೀಸರ್​ ಬಿಡುಗಡೆಗಾಗಿ ಚಿತ್ರತಂಡ ವಿಶೇಷ ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಅಯೋಧ್ಯೆಯಲ್ಲಿ (Ayodhya) ರಾವಣನ ಪ್ರತಿಕೃತಿ ದಹಿಸುವ ಮೂಲಕ ಪ್ರಭಾಸ್​ ಈ ಚಿತ್ರದ ಟೀಸರ್​ ರಿಲೀಸ್​ ಮಾಡಲಿದ್ದಾರೆ ಎಂಬ ಗುಸಗುಸು ಕೇಳಿಬಂದಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಪ್ರಭಾಸ್​ ಅಭಿಮಾನಿಗಳು ‘ಆದಿಪುರುಷ್​’ ಚಿತ್ರದ ಮೇಲೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾಮಾಯಣದ ಕಥೆಯನ್ನು ಆಧರಿಸಿ ಈ ಚಿತ್ರ ಮೂಡಿಬರುತ್ತಿದೆ. ಕೃತಿ ಸನನ್​, ಸೈಫ್​ ಅಲಿ ಖಾನ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ತಾನಾಜಿ’ ಸಿನಿಮಾ ಖ್ಯಾತಿಯ ಓಂ ರಾವುತ್​ ಅವರು ‘ಆದಿಪುರುಷ್​’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಟೀಸರ್​ ಹೇಗೆ ಮೂಡಿಬಂದಿರಬಹುದು ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳ ಮನದಲ್ಲಿ ಸೃಷ್ಟಿ ಆಗಿದೆ.

‘ಆದಿಪುರುಷ್​’ ಚಿತ್ರ ಅದ್ದೂರಿ ಬಜೆಟ್​ನಲ್ಲಿ ಮೂಡಿಬರುತ್ತಿದೆ. ಪ್ರಭಾಸ್​ ಅವರ ಪಾಲಿಗೆ ಈ ಚಿತ್ರ ವಿಶೇಷವಾಗಿರಲಿದೆ. ಯಾಕೆಂದರೆ ಅವರು ಈ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ರಾವಣನಾಗಿ ಸೈಫ್​ ಅಲಿ ಖಾನ್​ ಅಬ್ಬರಿಸಲಿದ್ದಾರೆ. 2023ರ ಜನವರಿ 12ರಂದು ಈ ಚಿತ್ರ ರಿಲೀಸ್​ ಆಗಲಿದೆ.

ಇದನ್ನೂ ಓದಿ
Image
Krisham Raju: ಪ್ರಭಾಸ್ ದೊಡ್ಡಪ್ಪ, ಟಾಲಿವುಡ್​ನ​ ರೆಬೆಲ್​ಸ್ಟಾರ್ ಕೃಷ್ಣಂರಾಜು ನಿಧನ
Image
Prabhas: ಭಾರತದಲ್ಲಿ ನೂರಾರು ಕೋಟಿ ರೂ. ಸಂಬಳ ಪಡೆದು ದುಬೈನಲ್ಲಿ ಬಿಸ್ನೆಸ್​ ಮಾಡುತ್ತಿರುವ ಪ್ರಭಾಸ್?
Image
Prashanth Neel Birthday: ಬೆಂಗಳೂರಿಗೆ ಬಂದು ಪ್ರಶಾಂತ್​ ನೀಲ್​ ಬರ್ತ್​ಡೇ ಪಾರ್ಟಿಯಲ್ಲಿ ಭಾಗಿಯಾದ ಪ್ರಭಾಸ್​
Image
‘ರಾಧೆ ಶ್ಯಾಮ್​’ ಸೋಲಿಗೆ 2 ಮುಖ್ಯ ಕಾರಣ ತಿಳಿಸಿದ ಪ್ರಭಾಸ್​; ಪ್ರೇಕ್ಷಕರು ಈ ನೆಪವನ್ನೆಲ್ಲ ಒಪ್ಪುತ್ತಾರಾ?

ಅಕ್ಟೋಬರ್​ ಮೊದಲ ವಾರದಲ್ಲಿ ದಸರಾ ಸಂಭ್ರಮ ಮನೆ ಮಾಡಿರುತ್ತದೆ. ಅನೇಕ ಕಡೆಗಳಲ್ಲಿ ‘ರಾವಣ ದಹನ’ ಮಾಡಲಾಗುತ್ತದೆ. ಅಯೋಧ್ಯೆ ಮಾತ್ರವಲ್ಲದೇ ದೆಹಲಿಯಲ್ಲೂ ಪ್ರಭಾಸ್​ ಅವರು ರಾವಣ ದಹನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ ಅಕ್ಷಯ್​ ಕುಮಾರ್​, ಜಾನ್​ ಅಬ್ರಾಹಂ, ಅಜಯ್​ ದೇವಗನ್​ ಮುಂತಾದ ನಟರು ದೆಹಲಿಯ ‘ಲವ ಕುಶ ರಾಮ್​​ಲೀಲಾ’ದಲ್ಲಿ ನಡೆಯುವ ರಾವಣ ದಹನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಪ್ರಭಾಸ್​ಗೆ ಆಹ್ವಾನ ನೀಡಿರುವ ಬಗ್ಗೆ ಆಯೋಜಕರು ಮಾಹಿತಿ ನೀಡಿದ್ದಾರೆ.

ಪ್ರಭಾಸ್​ ನಟಿಸುತ್ತಿರುವ ‘ಸಲಾರ್​’ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾ ಮೇಲೆ ಕೂಡ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:32 am, Wed, 14 September 22

Follow Us
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್