AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prabhas: ಭಾರತದಲ್ಲಿ ನೂರಾರು ಕೋಟಿ ರೂ. ಸಂಬಳ ಪಡೆದು ದುಬೈನಲ್ಲಿ ಬಿಸ್ನೆಸ್​ ಮಾಡುತ್ತಿರುವ ಪ್ರಭಾಸ್?

Prabhas | Dubai: ‘ಸಲಾರ್​’ ನಟ ಪ್ರಭಾಸ್​ ಅವರು ದುಬೈ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲಿ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಲು ಸಜ್ಜಾಗಿದ್ದಾರೆ ಎಂಬ ಗಾಸಿಪ್​ ಹರಿದಾಡುತ್ತಿದೆ.

Prabhas: ಭಾರತದಲ್ಲಿ ನೂರಾರು ಕೋಟಿ ರೂ. ಸಂಬಳ ಪಡೆದು ದುಬೈನಲ್ಲಿ ಬಿಸ್ನೆಸ್​ ಮಾಡುತ್ತಿರುವ ಪ್ರಭಾಸ್?
ಪ್ರಭಾಸ್
TV9 Web
| Edited By: |

Updated on:Jul 06, 2022 | 1:23 PM

Share

ನಟ ಪ್ರಭಾಸ್ (Prabhas)​ ಅವರು ಟಾಲಿವುಡ್​ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಸಖತ್​ ಬೇಡಿಕೆ ಹೊಂದಿದ್ದಾರೆ. ಪ್ರತಿ ಸಿನಿಮಾಗೆ ಅವರು ನೂರಾರು ಕೋಟಿ ರೂಪಾಯಿ ಸಂಭಾವನೆ (Prabhas Remuneration) ಪಡೆಯುತ್ತಾರೆ. ಇಷ್ಟೆಲ್ಲ ದುಡ್ಡು ಇಟ್ಟುಕೊಂಡು ಅವರು ಏನು ಮಾಡ್ತಾರೆ? ಯಾವ ವ್ಯಾಪಾರದ ಮೇಲೆ ಹೂಡಿಕೆ ಮಾಡ್ತಾರೆ? ಇಂಥ ಹಲವು ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಕೊರೆಯುತ್ತ ಇರುತ್ತದೆ. ಈ ಬಗ್ಗೆ ಗಾಸಿಪ್​ ಮಂದಿ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ಪ್ರಭಾಸ್​ ಬಗ್ಗೆ ಹೊಸದೊಂದು ಅಂತೆ-ಕಂತೆ ಕೇಳಿಬಂದಿದೆ. ಮೂಲಗಳ ಪ್ರಕಾರ ಅವರು ದುಬೈನಲ್ಲಿ (Dubai) ಹಣ ಹೂಡಿಕೆ ಮಾಡುತ್ತಿದ್ದಾರೆ. ಅಲ್ಲಿ ಹೋಟೆಲ್​ ಬಿಸ್ನೆಸ್​​ ಮೇಲೆ ಬಂಡವಾಳ ಹಾಕಿ ಲಾಭ ಪಡೆಯಲು ಅವರು ಪ್ಲ್ಯಾನ್​ ಮಾಡಿದ್ದಾರೆ ಎನ್ನಲಾಗುತ್ತಿದೆ.

ದುಬೈನಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಅಲ್ಲಿನ ಸರ್ಕಾರವು ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಈ ಸಂದರ್ಭಕ್ಕೆ ಸರಿಯಾಗಿ ಪ್ರಭಾಸ್​ ಕೂಡ ದುಬೈ ಮೇಲೆ ಕಣ್ಣಿಟ್ಟಿದ್ದಾರೆ. ಭಾರತದಲ್ಲಿ ಪ್ರತಿ ಸಿನಿಮಾಗೆ ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುವ ಅವರು ದುಬೈನಲ್ಲಿ ಹೋಟೆಲ್​ ಉದ್ಯಮ ಆರಂಭಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಬಗ್ಗೆ ಪ್ರಭಾಸ್​ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ.

ಈಗಾಗಲೇ ‘ಮೆಗಾ ಸ್ಟಾರ್​’ ಚಿರಂಜೀವಿ, ಅಕ್ಕಿನೇನಿ ನಾಗಾರ್ಜುನ್​ ಅವರಂತಹ ಸ್ಟಾರ್​ ಕಲಾವಿದರು ದುಬೈನಲ್ಲಿ ಹಣ ಹೂಡಿಕೆ ಮಾಡಿ ಲಾಭ ಪಡೆದಿದ್ದಾರೆ. ಅವರ ಹಾದಿಯಲ್ಲಿ ಪ್ರಭಾಸ್​ ಕೂಡ ಸಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಪ್ರಭಾಸ್​ ಕೈಯಲ್ಲಿ ಅನೇಕ ಆಫರ್​ಗಳಿವೆ. ಪ್ರಶಾಂತ್​ ನೀಲ್ ನಿರ್ದೇಶನದ ‘ಸಲಾರ್​’ ಚಿತ್ರ ಹೆಚ್ಚು ನಿರೀಕ್ಷೆ ಮೂಡಿಸಿದೆ. ಬಾಲಿವುಡ್​ನಲ್ಲಿ ಅವರು ‘ಆದಿಪುರುಷ್​’ ಚಿತ್ರದ ಮೂಲಕ ಧೂಳೆಬ್ಬಿಸಲು ಸಜ್ಜಾಗುತ್ತಿದ್ದಾರೆ.

ಇದನ್ನೂ ಓದಿ
Image
Prashanth Neel Birthday: ಬೆಂಗಳೂರಿಗೆ ಬಂದು ಪ್ರಶಾಂತ್​ ನೀಲ್​ ಬರ್ತ್​ಡೇ ಪಾರ್ಟಿಯಲ್ಲಿ ಭಾಗಿಯಾದ ಪ್ರಭಾಸ್​
Image
‘ರಾಧೆ ಶ್ಯಾಮ್​’ ಸೋಲಿಗೆ 2 ಮುಖ್ಯ ಕಾರಣ ತಿಳಿಸಿದ ಪ್ರಭಾಸ್​; ಪ್ರೇಕ್ಷಕರು ಈ ನೆಪವನ್ನೆಲ್ಲ ಒಪ್ಪುತ್ತಾರಾ?
Image
‘ಬಾಹುಬಲಿ’ ಚಿತ್ರದಿಂದ ಪ್ರಭಾಸ್​ಗೆ ಆದ ದೊಡ್ಡ ನಷ್ಟ ಏನು? ಅಂತೂ ಬಾಯ್ಬಿಟ್ಟ ಪ್ಯಾನ್​ ಇಂಡಿಯಾ ಸ್ಟಾರ್​
Image
ಕಿಸ್​ ಮತ್ತು ಶರ್ಟ್​ ಲೆಸ್​ ದೃಶ್ಯದಲ್ಲಿ ಪ್ರಭಾಸ್​ಗೆ ಕಿರಿಕಿರಿ; ಈ ವಿಚಾರದಲ್ಲಿ ಅವರದ್ದು ಒಂದೇ ಒಂದು ಕಂಡೀಷನ್​

‘ಬಾಹುಬಲಿ’ ಸಿನಿಮಾದ ಯಶಸ್ಸಿನ ಬಳಿಕ ಪ್ರಭಾಸ್​ ಅವರು ಪ್ಯಾನ್​ ಇಂಡಿಯಾ ಹೀರೋ ಆಗಿ ಮಿಂಚಿದರು. ಆದರೆ ಆ ಬಳಿಕ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಶ್ರದ್ಧಾ ಕಪೂರ್​ ಜೊತೆ ನಟಿಸಿದ ‘ಸಾಹೋ’ ಹಾಗೂ ಪೂಜಾ ಹೆಗ್ಡೆ ಜೊತೆ ತೆರೆ ಹಂಚಿಕೊಂಡ ‘ರಾಧೆ ಶ್ಯಾಮ್​’ ಚಿತ್ರಗಳು ಪ್ರೇಕ್ಷಕರಿಗೆ ಇಷ್ಟ ಆಗಲಿಲ್ಲ. ಹಾಗಿದ್ದರೂ ಕೂಡ ಪ್ರಭಾಸ್​ ಅವರ ಚಾರ್ಮ್​ ಕಡಿಮೆ ಆಗಿಲ್ಲ. ಅವರ ಕಾಲ್​ಶೀಟ್​ ಪಡೆಯಲು ನಿರ್ಮಾಪಕರು ಮುಗಿಬೀಳುತ್ತಲೇ ಇದ್ದಾರೆ.

ಇದನ್ನೂ ಓದಿ: ಪ್ರಭಾಸ್​ ವರ್ಸಸ್​ ಪ್ರಭಾಸ್​: ‘ಸಲಾರ್​’ ಚಿತ್ರದಲ್ಲಿ ಡಬಲ್​ ರೋಲ್​ ಮಾಡಿಸುತ್ತಾರಾ ಪ್ರಶಾಂತ್​ ನೀಲ್​?

‘ರಾಧೆ ಶ್ಯಾಮ್​’ ಸೋಲಿಗೆ 2 ಮುಖ್ಯ ಕಾರಣ ತಿಳಿಸಿದ ಪ್ರಭಾಸ್​; ಪ್ರೇಕ್ಷಕರು ಈ ನೆಪವನ್ನೆಲ್ಲ ಒಪ್ಪುತ್ತಾರಾ?

Published On - 1:23 pm, Wed, 6 July 22

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?