26ನೇ ವಯಸ್ಸಿಗೆ ಕೊನೆ ಆಯ್ತು ಅಡಲ್ಟ್ ಫಿಲ್ಮ್ ನಟಿಯ ಜೀವನ; ಅನುಮಾನ ಮೂಡಿಸಿದ ಸಾವು
ಸೋಫಿಯಾ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರ ಮಾನಸಿಕ ಆರೋಗ್ಯ ಇತ್ತೀಚೆಗೆ ಸರಿ ಇರಲಿಲ್ಲ ಎಂದು ಕೆಲವು ಕಡೆಗಳಲ್ಲಿ ವರದಿ ಆಗಿದೆ. ಅವರು ಕೇವಲ 26ನೇ ವಯಸ್ಸಿಗೆ ಮೃತಪಟ್ಟಿರುವುದು ಕುಟುಂಬದವರಿಗೆ ಬೇಸರ ತಂದಿದೆ.

ಅಡಲ್ಟ್ ಫಿಲ್ಮ್ ಸ್ಟಾರ್ ಸೋಫಿಯಾ ಲಿಯೋನಿ (Sophia Leone) ತಮ್ಮ 26ನೇ ವಯಸ್ಸಿಗೆ ಮೃತಪಟ್ಟಿದ್ದಾರೆ. ವಾಸವಾಗಿದ್ದ ಅಪಾರ್ಟ್ಮೆಂಟ್ನಲ್ಲಿ ಅವರ ಶವ ಪತ್ತೆ ಆಗಿದೆ. ಇತ್ತೀಚೆಗೆ ಅವರು ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬದವರಿಗೆ ಅನುಮಾನ ಬಂದಿದೆ. ಆ ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆಯ ಬಾಗಿಲು ತೆಗೆದು ನೋಡಿದಾಗ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಆಗಿದ್ದಾರೆ. ಇದು ಕೊಲೆಯೋ, ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಸಾವೋ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.
ಸೋಫಿಯಾ ಅವರ ಮಲತಂದೆ ಮೈಕ್ ರೋಮೆರೋ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ‘ಅವರ ತಾಯಿ ಹಾಗೂ ಕುಟುಂಬದ ಪರವಾಗಿ ಈ ವಿಚಾರವನ್ನು ತಿಳಿಸುತ್ತಿದ್ದೇನೆ. ಸೋಫಿಯಾ ಇನ್ನಿಲ್ಲ ಎನ್ನುವ ವಿಚಾರವನ್ನು ನಾನು ಹೇಳುತ್ತಿದ್ದೇನೆ. ಈ ಘಟನೆ ನಮ್ಮ ಕುಟುಂಬ ಹಾಗೂ ಗೆಳೆಯರಿಗೆ ಶಾಕ್ ತಂದಿದೆ’ ಎಂದು ಅವರು ಹೇಳಿದ್ದಾರೆ. ಸೋಫಿಯಾ ಅವರ ಅಂತ್ಯ ಸಂಸ್ಕಾರಕ್ಕೆ ಹಣ ಕಳುಹಿಸುವಂತೆ ಹಾಗೂ ಈ ಸಂಬಂಧ ತನಿಖೆ ನಡೆಸುವಂತೆ ಮೈಕ್ ಕೋರಿಕೊಂಡಿದ್ದಾರೆ. ಅವರಿಗೆ ಈ ಸಾವಿನ ಬಗ್ಗೆ ಅನುಮಾನ ಮೂಡಿದೆ.
‘ಸೋಫಿಯಾ ಅವರು ಸದಾ ಪ್ರಯಾಣ ಮಾಡಲು ಇಷ್ಟಪಡುತ್ತಿದ್ದರು. ಅವರು ಎಲ್ಲರ ಮುಖದಲ್ಲೂ ನಗು ತರಿಸುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮೈಕ್ ಅವರು ಹೇಳಿದ್ದಾರೆ. ಕಳೆದ ಫೆಬ್ರವರಿ ತಿಂಗಳಲ್ಲಿ ಅಡಲ್ಟ್ ಫಿಲ್ಮ್ ಸ್ಟಾರ್ ಕ್ಯಾಗ್ನಿ ಲಿನ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಸೋಫಿಯಾ ಕೂಡ ಮೃತಪಟ್ಟಿರುವುದು ಶಾಕಿಂಗ್ ಎನಿಸಿದೆ.
ಇದನ್ನೂ ಓದಿ: ಆಸ್ಕರ್ ವೇದಿಕೆಗೆ ಸಂಪೂರ್ಣ ಬೆತ್ತಲಾಗಿ ಬಂದ ಜಾನ್ ಸೀನಾ; ಫೋಟೋ ವೈರಲ್
ಸೋಫಿಯಾ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರ ಮಾನಸಿಕ ಆರೋಗ್ಯ ಇತ್ತೀಚೆಗೆ ಸರಿ ಇರಲಿಲ್ಲ ಎಂದು ಕೆಲವು ಕಡೆಗಳಲ್ಲಿ ವರದಿ ಆಗಿದೆ. ಅವರು ಕೇವಲ 26ನೇ ವಯಸ್ಸಿಗೆ ಮೃತಪಟ್ಟಿರುವುದು ಕುಟುಂಬದವರಿಗೆ ಬೇಸರ ತಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




