AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಗೆದ್ದು ಬಂದು ಆಕ್ಸಿ ಮೀಟರ್ ಬಗ್ಗೆ ತುಂಬ ಉಪಯುಕ್ತ ಮಾಹಿತಿ ಹಂಚಿಕೊಂಡ ನಟಿ ಪೂಜಾ ಹೆಗ್ಡೆ

Pooja Hegde: ಆಕ್ಸಿ ಮೀಟರ್​ ಬಳಸಲು ಸರಿಯಾದ ಕ್ರಮ ಇದೆ ಎಂದು ವೈದ್ಯರು ಹೇಳುವವರೆಗೂ ನನಗೆ ತಿಳಿದಿರಲಿಲ್ಲ. ಈ ಮಾಹಿತಿಯಿಂದ ಸಹಾಯ ಆಗಲಿದೆ ಎಂದು ಭಾವಿಸುತ್ತೇನೆ. ಈ ರೋಗವನ್ನು ಮಣಿಸುವಲ್ಲಿ ಯಾವ ಮಾಹಿತಿ ಕೂಡ ಸಣ್ಣದಲ್ಲ.

ಕೊವಿಡ್ ಗೆದ್ದು ಬಂದು ಆಕ್ಸಿ ಮೀಟರ್ ಬಗ್ಗೆ ತುಂಬ ಉಪಯುಕ್ತ ಮಾಹಿತಿ ಹಂಚಿಕೊಂಡ ನಟಿ ಪೂಜಾ ಹೆಗ್ಡೆ
ಪೂಜಾ ಹೆಗ್ಡೆ
ಮದನ್​ ಕುಮಾರ್​
| Edited By: |

Updated on: May 14, 2021 | 3:27 PM

Share

ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರಿಗೆ ಕೊವಿಡ್​ ಪಾಸಿಟಿವ್​ ಆಗಿತ್ತು. ಕೆಲವೇ ದಿನಗಳ ಹಿಂದೆ ಅವರು ಗುಣಮುಖರಾಗಿದ್ದಾರೆ. ಮಹಾಮಾರಿಯನ್ನು ಗೆದ್ದು ಬಂದಿರುವ ಅವರಿಗೆ ಅಭಿಮಾನಿಗಳು ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ. ಅಂಥ ಎಲ್ಲ ಅಭಿಮಾನಿಗಳಿಗಾಗಿ ಪೂಜಾ ಒಂದು ಉಪಯುಕ್ತವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಕ್ಸಿ ಮೀಟರ್​ ಉಪಯೋಗಿಸುವ ಸರಿಯಾದ ಕ್ರಮ ಯಾವುದು ಎಂಬುದನ್ನು ಅವರು ತಿಳಿಸಿಕೊಟ್ಟಿದ್ದಾರೆ.

ಏ.25ರಂದು ಪೂಜಾಗೆ ಕೊವಿಡ್​ ಸೋಂಕು ತಗುಲಿರುವುದು ದೃಡವಾಗಿತ್ತು. 10 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇದ್ದು ಚಿಕಿತ್ಸೆ ಪಡೆದ ಬಳಿಕ ಅವರು ಗುಣಮುಖರಾದರು. ಮೇ 5ರಂದು ತಮಗೆ ನೆಗೆಟಿವ್​ ವರದಿ ಬಂದಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದರು. ತಮ್ಮ ಈ ಅನುಭವದ ಆಧಾರದ ಮೇಲೆ ಅವರು ಈ ಆಕ್ಸಿ ಮೀಟರ್​ ಮೂಲಕ ಪಲ್ಸ್​ ರೇಟ್​ ಮತ್ತು ಆಕ್ಸಿಜನ್​ ಲೆವೆಲ್​ ನೋಡಿಕೊಳ್ಳುವ ಸರಿಯಾದ ಕ್ರಮ ಹೇಗೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

ಪೂಜಾ ಅವರು ಅಭಿಮಾನಿಗಳ ಮೇಲಿನ ಕಾಳಜಿಯಿಂದ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ‘ನಾನು ಕೊವಿಡ್​ನಿಂದಾಗಿ ಹೋಮ್​ ಕ್ವಾರಂಟೈನ್​ ಆಗಿದ್ದಾಗ ನನ್ನ ಆಕ್ಸಿಜನ್​ ಲೆವೆಲ್​ ಅನ್ನು ನೋಡಿಕೊಳ್ಳಬೇಕಿತ್ತು. ಅದನ್ನು ನೋಡಲು ಸರಿಯಾದ ಕ್ರಮ ಇದೆ ಎಂದು ವೈದ್ಯರು ಹೇಳುವವರೆಗೂ ನನಗೆ ತಿಳಿದಿರಲಿಲ್ಲ. ಈ ಮಾಹಿತಿಯಿಂದ ಸಹಾಯ ಆಗಲಿದೆ ಎಂದು ಭಾವಿಸುತ್ತೇನೆ. ಈ ರೋಗವನ್ನು ಮಣಿಸುವಲ್ಲಿ ಯಾವ ಮಾಹಿತಿ ಕೂಡ ಸಣ್ಣದಲ್ಲ. ಎಲ್ಲರೂ ಮನೆಯಲ್ಲಿ ಸುರಕ್ಷಿತರಾಗಿರಿ’ ಎಂದು ಆ ವಿಡಿಯೋಗೆ ಪೂಜಾ ಕ್ಯಾಪ್ಷನ್​ ನೀಡಿದ್ದಾರೆ.

ಆಕ್ಸಿ ಮೀಟರ್​ ಬಳಸುವಾಗ ಉಗುರಿಗೆ ನೇಲ್​ ಪಾಲಿಶ್​ ಹಚ್ಚಿರಬಾರದು. ಕೈ ಸರಿಯಾಗಿ ತೊಳೆದುಕೊಂಡಿರಬೇಕು. ತೋರು ಬೆರಳು ಅಥವಾ ಉಂಗುರು ಬೆರಳುಗಳ ಮೂಲಕ ಮಾತ್ರ ನೋಡಿಕೊಳ್ಳಬೇಕು. ಚೆಕ್​ ಮಾಡಿಕೊಳ್ಳುವುದಕ್ಕಿಂತ 5 ನಿಮಿಷ ಮುಂದೆ ವಿಶ್ರಾಂತ ಸ್ಥಿತಿಯಲ್ಲಿ ಇರಬೇಕು ಎಂಬುದನ್ನು ವಿಡಿಯೋದಲ್ಲಿ ಪೂಜಾ ವಿವರಿಸಿದ್ದಾರೆ. ರಾಧೆ ಶ್ಯಾಮ್​, ಆಚಾರ್ಯಾ, ಮೋಸ್ಟ್​ ಎಲಿಜೆಬಲ್​ ಬ್ಯಾಚುಲರ್​, ಸರ್ಕಸ್​ ಮುಂತಾದ ಸಿನಿಮಾಗಳು ಅವರ ಕೈಯಲ್ಲಿವೆ.

ಇದನ್ನೂ ಓದಿ:

ದಳಪತಿ 65 ಸಿನಿಮಾಗೆ ನಟಿ ಪೂಜಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಬೆಂಗಳೂರಿಗರ ಸಹಾಯಕ್ಕೆ ನಿಂತ ಸೋನು ಸೂದ್​; ಈ ಸಂಖ್ಯೆಗೆ ಸಂಪರ್ಕಿಸಿದರೆ ಮನೆಬಾಗಿಲಿಗೆ ಬರುತ್ತೆ ಆಕ್ಸಿಜನ್​ ಸಿಲಿಂಡರ್

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ