ಯುವತಿ ರೇಪ್​-ಕೊಲೆ ಪ್ರಕರಣ: 38​ ಸೆಲೆಬ್ರಿಟಿಗಳ ಬಂಧನಕ್ಕೆ​ ಒತ್ತಾಯ; ಘಟಾನುಘಟಿಗಳ ತಪ್ಪೇನು?

ಐಪಿಸಿ ಸೆಕ್ಷನ್​ 228ಎ ಅಡಿಯಲ್ಲಿ 38 ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಇವರೆಲ್ಲ ಜವಾಬ್ದಾರಿಯುತ ಪ್ರಜೆಗಳಲ್ಲ ಎಂದು ತೀಸ್​ ಹಜಾರಿ ಕೋರ್ಟ್​ನಲ್ಲಿ ದೂರು ನೀಡಲಾಗಿದೆ.

ಯುವತಿ ರೇಪ್​-ಕೊಲೆ ಪ್ರಕರಣ: 38​ ಸೆಲೆಬ್ರಿಟಿಗಳ ಬಂಧನಕ್ಕೆ​ ಒತ್ತಾಯ; ಘಟಾನುಘಟಿಗಳ ತಪ್ಪೇನು?
ಯುವತಿ ರೇಪ್​-ಕೊಲೆ ಪ್ರಕರಣ: 38​ ಸೆಲೆಬ್ರಿಟಿಗಳ ಬಂಧನಕ್ಕೆ​ ಒತ್ತಾಯ; ಘಟಾನುಘಟಿಗಳ ತಪ್ಪೇನು?
Follow us
TV9 Web
| Updated By: ಮದನ್​ ಕುಮಾರ್​

Updated on: Sep 07, 2021 | 11:50 AM

ರೇಪ್​ ಪ್ರಕರಣಗಳು ಇಡೀ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡುತ್ತವೆ. ಅಂಥ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ರೋಷಾವೇಷದಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. ಈ ವೇಳೆ ಎಚ್ಚರ ತಪ್ಪಿದರೆ ಕಾನೂನಿನ ಸಂಕಷ್ಟ ಎದುರಾಗುವುದು ಗ್ಯಾರಂಟಿ. ಸದ್ಯ ಬಾಲಿವುಡ್​ ಮತ್ತು ಟಾಲಿವುಡ್​ನ ಹಲವು ಸೆಲೆಬ್ರಿಟಿಗಳಿಗೆ ಅದೇ ರೀತಿ ಸಮಸ್ಯೆ ಉಂಟಾಗಿದೆ. ರೇಪ್​ ಸಂತ್ರಸ್ತೆಯ ಹೆಸರು ಮತ್ತು ಗುರುತು ಬಹಿರಂಗ ಪಡಿಸಿದ್ದಕ್ಕಾಗಿ ಅಕ್ಷಯ್​ ಕುಮಾರ್​, ಸಲ್ಮಾನ್​ ಖಾನ್​, ಅನುಪಮ್​ ಖೇರ್​, ಅಜಯ್​ ದೇವಗನ್​ ಸೇರಿದಂತೆ ಒಟ್ಟು 38 ಸೆಲೆಬ್ರಿಟಿಗಳ ವಿರುದ್ಧ ಕೇಸ್​ ದಾಖಲಾಗಿದೆ.

2019ರ ನವೆಂಬರ್​ ತಿಂಗಳಲ್ಲಿ ಹೈದರಾಬಾದ್​​ನ ಯುವತಿಯೊಬ್ಬರ ಮೇಲೆ ಗ್ಯಾಂಗ್​ ರೇಪ್​ ಆಗಿತ್ತು. ಅತ್ಯಾಚಾರ ನಡೆಸಿದ ಕಾಮುಕರು ಆಕೆಯ ಶವನನ್ನು ಸುಟ್ಟು ಹಾಕಿದ್ದರು. ಆಗ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಅಂಥ ಹೀನ ಘಟನೆಗೆ ಪ್ರತಿಕ್ರಿಯಿಸಿದ್ದ ಅನೇಕ ಸೆಲೆಬ್ರಿಟಿಗಳು ಆ ಯುವತಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಸೋಶಿಯಲ್​ ಮೀಡಿಯಾದಲ್ಲಿ ಧ್ವನಿ ಎತ್ತಿದ್ದರು. ಅದು ಒಳ್ಳೆಯ ಕೆಲಸವೇ ಆಗಿದ್ದರೂ ಅವರ ವಿರುದ್ಧ ಈಗ ವಕೀಲರೊಬ್ಬರು ಕೇಸ್​ ಹಾಕಿದ್ದಾರೆ.

ದೆಹಲಿ ಮೂಲದ ವಕೀಲರೊಬ್ಬರು ತಕರಾರು ತೆಗೆದಿದ್ದಾರೆ. ಬಾಲಿವುಡ್​ ಮತ್ತು ಟಾಲಿವುಡ್​ನ ಒಟ್ಟು 38 ಸೆಲೆಬ್ರಿಟಿಗಳ ವಿರುದ್ಧ ಅವರು ದೂರು ನೀಡಿದ್ದಾರೆ. ಕಾನೂನಿನ ಪ್ರಕಾರ ಅತ್ಯಾಚಾರ ಸಂತ್ರಸ್ತೆಯ ಹೆಸರು ಮತ್ತು ಇತರೆ ಗುರುತುಗಳನ್ನು ಬಹಿರಂಗ ಪಡಿಸುವಂತಿಲ್ಲ. ಆದರೆ ಯುವತಿ ಸಾವಿಗೆ ನ್ಯಾಯ ಕೊಡಿಸುವ ಹುಮ್ಮಸ್ಸಿನಲ್ಲಿ ಈ ಕಾನೂನನ್ನು ಎಲ್ಲ ಸೆಲೆಬ್ರಿಟಿಗಳೂ ಉಲ್ಲಂಘಿಸಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.

ಅನುಪಮ್​ ಖೇರ್​, ಅಜಯ್​ ದೇವಗನ್​, ಫರ್ಹಾನ್​ ಅಖ್ತರ್​, ಅಕ್ಷಯ್​ ಕುಮಾರ್, ಸಲ್ಮಾನ್​ ಖಾನ್​, ರವಿತೇಜ, ರಾಕುಲ್​ ಪ್ರೀತ್​ ಸಿಂಗ್, ಅಲ್ಲು ಸಿರೀಶ್​, ಚಾರ್ಮಿ ಕೌರ್​ ಸೇರಿದಂತೆ ಹಲವು ಸೆಲೆಬ್ರಿಟಿಗಳು ಟ್ವಿಟರ್​, ಫೇಸ್​ಬುಕ್​, ಇನ್​ಸ್ಟಾಗ್ರಾಮ್​ ಮುಂತಾದ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ರೇಪ್​ ಸಂತ್ರಸ್ತೆಯ ವಿವರ ಬಹಿರಂಗಪಡಿಸಿದ್ದರು.

ಸಜ್ಬಿ ಮಂಡಿ ಪೊಲೀಸ್​ ರಾಣೆಯಲ್ಲಿ ಐಪಿಸಿ ಸೆಕ್ಷನ್​ 228ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಸೆಲೆಬ್ರಿಟಿಗಳು ಜವಾಬ್ದಾರಿಯುತ ಪ್ರಜೆಗಳಲ್ಲ ಎಂದು ತೀಸ್​ ಹಜಾರಿ ಕೋರ್ಟ್​ನಲ್ಲಿ ದೂರು ನೀಡಲಾಗಿದೆ. ಹಾಗಾಗಿ ಈ ಎಲ್ಲ ಖ್ಯಾತ ಕಲಾವಿದರಿಗೆ ಕಾನೂನಿಕ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ:

‘ಮಹಿಳೆ ಧರಿಸುವ ಉಡುಪುಗಳು ರೇಪ್​ಗೆ ಕಾರಣ ಅಲ್ಲ’: ಗ್ಯಾಂಗ್​ ರೇಪ್​ ಪ್ರಕರಣಕ್ಕೆ ಕವಿತಾ ಲಂಕೇಶ್​ ಪ್ರತಿಕ್ರಿಯೆ

‘ಇಷ್ಟಪಟ್ಟು ಆಗುವ ಮಿಲನ ಬೇರೆ, ಆದರೆ ಇದು ರೇಪ್​; ದಯವಿಟ್ಟು ಖಂಡಿಸಿ’: ಗ್ಯಾಂಗ್​ ರೇಪ್​ ಬಗ್ಗೆ ಹರ್ಷಿಕಾ ಮಾತು

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ