ಆಸ್ಪತ್ರೆಗೆ ದಾಖಲಾದ ಅಜಿತ್ ಕುಮಾರ್ಗೆ ಮಿದುಳು ಸರ್ಜರಿ? ಸಿಕ್ಕಿತು ಸ್ಪಷ್ಟನೆ
ಅಜಿತ್ ಕುಮಾರ್ ಅವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ‘ಅಜಿತ್ ಅವರು ಮಿಲನ್ನ ಭೇಟಿ ಮಾಡಬೇಕಿತ್ತು. ಆದರೆ, ಏಕಾಏಕಿ ಅವರು ತೀರಿಹೋದರು. ಆ ಬಳಿಕ ಅಜಿತ್ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿದ್ದಾರೆ’ ಎಂದಿದ್ದಾರೆ ಅಜಿತ್ ವಕ್ತಾರರು.

ತಮಿಳಿನ ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ನರಗಳಲ್ಲಿ ಊತ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಅವರು ಮಿದುಳಿನ ಸರ್ಜರಿಗೆ ಒಳಗಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಜಿತ್ ಕುಮಾರ್ ಅವರ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. ಅಜಿತ್ ಕುಮಾರ್ ಅವರು ಚೇತರಿಕೆ ಕಾಣುತ್ತಿದ್ದು, ಸರ್ಜರಿ ವಿಚಾರ ಸುಳ್ಳು ಎಂದು ಹೇಳಿದ್ದಾರೆ.
ಅಜಿತ್ ಕುಮಾರ್ ಅವರ ಮಿದುಳಿನಲ್ಲಿ ಗುಳ್ಳೆ ಉಂಟಾಗಿದೆ ಎಂದು ಹೇಳಲಾಗಿತ್ತು. ಆದರೆ, ಇದರಲ್ಲಿ ಹುರುಳಿಲ್ಲ ಎಂಬುದು ಅವರ ವಕ್ತಾರರ ಮಾತು. ‘ಅಜಿತ್ ಅವರು ಗುರುವಾರ ಆಸ್ಪತ್ರೆಗೆ ದಾಖಲಾದರು. ಸಾಮಾನ್ಯ ಪರೀಕ್ಷೆಗಾಗಿ ಅವರು ತೆರಳಿದ್ದರು. ಅವರ ಮಿದುಳು ಹಾಗೂ ಕಿವಿಗೆ ಕನೆಕ್ಟ್ ಆಗೋ ನರದಲ್ಲಿ ಊತ ಇತ್ತು. ಸಾಮಾನ್ಯ ವೈದ್ಯಕೀಯ ಪ್ರಕ್ರಿಯೆಯಿಂದ ಅದನ್ನು ಪರಿಹರಿಸಿದ್ದಾರೆ. ಅಜಿತ್ ಅವರು ಆರೋಗ್ಯವಾಗಿದ್ದಾರೆ. ಐಸಿಯುನಿಂದ ಅವರು ವಾರ್ಡ್ಗೆ ನಡೆದೇ ಹೋಗಿದ್ದಾರೆ’ ಎಂದಿದ್ದಾರೆ ಅಜಿತ್ ಕುಮಾರ್ ವಕ್ತಾರರು.
ಅಜಿತ್ ಕುಮಾರ್ ಅವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ‘ಅಜಿತ್ ಅವರು ಮಿಲನ್ನ ಭೇಟಿ ಮಾಡಬೇಕಿತ್ತು. ಆದರೆ, ಏಕಾಏಕಿ ಅವರು ತೀರಿಹೋದರು. ಆ ಬಳಿಕ ಅಜಿತ್ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿದ್ದಾರೆ’ ಎಂದಿದ್ದಾರೆ ಅಜಿತ್ ವಕ್ತಾರರು. ಮಿಲನ್ ಅವರು ತಮಿಳು ನಿರ್ದೇಶಕರು. 2023ರಲ್ಲಿ ಅವರು ಮೃತಪಟ್ಟರು. ಅವರಿಗೆ ಆಗ 54 ವರ್ಷ ವಯಸ್ಸು.
ಅಜಿತ್ ಕುಮಾರ್ ಅವರು ‘ವಿದಾ ಮುಯರಾಚಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ವಿದೇಶದಲ್ಲಿ ನಡೆಯುತ್ತಿತ್ತು. ಕುಟುಂಬದ ಜೊತೆ ಸಮಯ ಕಳೆಯಬೇಕು ಎನ್ನುವ ಕಾರಣಕ್ಕೆ ಅವರು ವಿದೇಶದಿಂದ ಭಾರತಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ಆರೋಗ್ಯ ತಪಾಸಣೆಗೆ ಒಳಗಾಗಿದ್ದರು.
ಇದನ್ನೂ ಓದಿ: ರಜನಿಕಾಂತ್, ಅಜಿತ್ ಕುಮಾರ್ ಜೊತೆ ಕೆಲಸ ಮಾಡಲು ರೆಡಿ ಆದ ವಿಜಯ್ ಫೇವರಿಟ್ ಡೈರೆಕ್ಟರ್ ಅಟ್ಲಿ
ಅಜಿತ್ ಕುಮಾರ್ ಅವರ ‘ವಿದಾ ಮುಯರಾಚಿ’ ಸಖತ್ ಆ್ಯಕ್ಷನ್ ಇದೆ ಎನ್ನಲಾಗಿದೆ. ಈ ಚಿತ್ರವನ್ನು ಮಗಿಳ್ ತಿರುಮೇನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಹಲವು ದೇಶಗಳಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ರೆಜಿನಾ ಕ್ಯಾಸಂಡ್ರಾ, ತ್ರಿಶಾ, ಅರ್ಜುನ್ ಸರ್ಜಾ ಮೊದಲಾದವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




