ಅಮೆರಿಕದಲ್ಲಿ ಅಟ್ಲಿ-ಅಲ್ಲು ಅರ್ಜುನ್ ಅಲೆದಾಟ, ಇದು ಸಾಮಾನ್ಯ ಸಿನಿಮಾ ಅಲ್ಲ
Allu Arjun-Atlee: ‘ಪುಷ್ಪ’ ಸಿನಿಮಾ ಮೂಲಕ ಅಭೂತಪೂರ್ವ ಯಶಸ್ಸು ಪಡೆದಿರುವ ನಟ ಅಲ್ಲು ಅರ್ಜುನ್ ಇದೀಗ ಅಟ್ಲಿ ಜೊತೆ ಕೈ ಜೋಡಿಸಿದ್ದಾರೆ. ಈ ಇಬ್ಬರೂ ಸೇರಿ ಭಾರಿ ಬಜೆಟ್ನ ಸಿನಿಮಾ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ಅಟ್ಲಿ, ಸೂಪರ್ ಹೀರೋ vs ಏಲಿಯನ್ ರೀತಿಯ ಚಿತ್ರಕತೆ ಮಾಡಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ವಿಡಿಯೋ ಈಗಾಗಲೇ ಬಿಡುಗಡೆ ಆಗಿದೆ. ವಿಡಿಯೋ ನೋಡಿದರೆ ಇದು ಸಾಮಾನ್ಯ ಸಿನಿಮಾ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ.

‘ಪುಷ್ಪ’ (Pushpa) ಸಿನಿಮಾ ಮೂಲಕ ಸ್ಮಗ್ಲರ್ ಒಬ್ಬನ ಕತೆ ಹೇಳಿದ್ದ ಅಲ್ಲು ಅರ್ಜುನ್ (Allu Arjun), ತಮ್ಮ ಮುಂದಿನ ಸಿನಿಮಾಕ್ಕೆ ಪ್ಯಾನ್ ಇಂಡಿಯಾ ನಿರ್ದೇಶಕ ಅಟ್ಲಿ (Atlee) ಜೊತೆ ಕೈ ಜೋಡಿಸಿದ್ದು, ಈ ಸಿನಿಮಾದಲ್ಲಿ ಅವರು ಭವಿಷ್ಯದ ಕತೆ ಹೇಳಲು ಹೊರಟಿದ್ದಾರೆ. ಭಾರತದ ಮೊಟ್ಟ ಮೊದಲ ಸೂಪರ್ ಹೀರೋ-ಏಲಿಯನ್ ಮಾದರಿಯ ಸಿನಿಮಾಕ್ಕೆ ಅಲ್ಲು ಅರ್ಜುನ್ ಮತ್ತು ಅಟ್ಲಿ ಕೈ ಹಾಕಿದ್ದಾರೆ. ಇದು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ನ ಸಿನಿಮಾ ಎನಿಸಿಕೊಳ್ಳಲಿದ್ದು, ಸಿನಿಮಾಕ್ಕೆ ಬಂಡವಾಳ ಹೂಡುತ್ತಿರುವುದು ಖ್ಯಾತ ನಿರ್ಮಾಪಕ ಕಲಾನಿಧಿ ಮಾರನ್. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ನ ವಿಡಿಯೋ ಒಂದು ಈಗಾಗಲೇ ಬಿಡುಗಡೆ ಆಗಿದ್ದು, ವಿಡಿಯೋ ನೋಡಿದರೆ ಇದು ಸಾಮಾನ್ಯ ಸಿನಿಮಾ ಖಂಡಿತ ಅಲ್ಲ ಎಂಬುದು ತಿಳಿದು ಬರುತ್ತದೆ.
ಅಟ್ಲಿ ಮತ್ತು ಅರ್ಜುನ್ ಅವರುಗಳು ಅಮೆರಿಕಕ್ಕೆ ತೆರಳಿ ಅಲ್ಲಿನ ಟಾಪ್ ವಿಎಫ್ಎಕ್ಸ್, ಪ್ರಾಪ್, ಮೋಷನ್ ಕ್ಯಾಪ್ಚರ್ ಸ್ಟುಡಿಯೋಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ‘ಅವತಾರ್’, ‘ಟರ್ನಿಮೇಟರ್’ ಇನ್ನೂ ಹಲವು ಹಾಲಿವುಡ್ನ ಐಕಾನಿಕ್ ಫ್ಯೂಚರಿಸ್ಟಿಕ್ ಸಿನಿಮಾಗಳಿಗೆ ಕೆಲಸ ಮಾಡಿರುವ ಸ್ಟುಡಿಯೋಗಳಿಗೆ ಭೇಟಿ ನೀಡಿರುವ ಅಲ್ಲು ಅರ್ಜುನ್ ಮತ್ತು ಅಟ್ಲಿ ಅತ್ಯುತ್ತಮ ಸಂಸ್ಥೆಗಳೊಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದು, ಈಗಾಗಲೇ ಕೆಲಸ ಆರಂಭಿಸಿದ್ದಾರೆ.
ಅಟ್ಲಿ-ಅಲ್ಲು ಅರ್ಜುನ್ ಅವರ ಸಿನಿಮಾ ಸೂಪರ್ ಹೀರೋ vs ಏಲಿಯನ್ ರೀತಿಯ ಸಿನಿಮಾ ಆಗಿದ್ದು, ಚಿತ್ರ-ವಿಚಿತ್ರ ಪ್ರಾಪ್ಗಳು ಸಿನಿಮಾದಲ್ಲಿ ಇರಲಿವೆ. ಹಾಲಿವುಡ್ನ ಏಲಿಯನ್ ಸಿನಿಮಾ ಮಾದರಿಯ ಜೀವಿಗಳು, ಚಿತ್ರ-ವಿಚಿತ್ರ ಪ್ರಾಣಿಗಳ ಪಾತ್ರಗಳು ಈ ಸಿನಿಮಾದಲ್ಲಿ ಇರಲಿದ್ದು, ಇವಕ್ಕಾಗಿ ಡಿಸೈನ್ಗಳನ್ನು ಅಟ್ಲಿ ಹಾಗೂ ಅಲ್ಲು ಅರ್ಜುನ್ ಫೈನಲ್ ಮಾಡಿದ್ದಾರೆ. ಹಾಲಿವುಡ್ನ ಸ್ಟುಡಿಯೋಗಳಿಗೆ ಅಟ್ಲಿ, ಸಿನಿಮಾದ ಚಿತ್ರಕತೆ ಹೇಳಿದ್ದು, ಸ್ಟುಡಿಯೋ ತಂತ್ರಜ್ಞರು, ಇದೊಂದು ಅದ್ಭುತವಾದ ಚಿತ್ರಕತೆ, ಒಂದರ ಹಿಂದೊಂದರಂತೆ ಅದ್ಭುತ ದೃಶ್ಯಗಳು, ಆಕ್ಷನ್ ಈ ಚಿತ್ರಕತೆಯಲ್ಲಿ ಇದೆ ಎಂದು ಕೊಂಡಾಡಿದ್ದಾರೆ. ಈ ಸಿನಿಮಾಕ್ಕೆ ಕೆಲಸ ಮಾಡಲು ಉತ್ಸುಕರಾಗಿರುವುದಾಗಿಯೂ ಹೇಳಿದ್ದಾರೆ.
ಇದನ್ನೂ ಓದಿ:ಅಲ್ಲು ಅರ್ಜುನ್ಗೆ ಪ್ರಿಯಾಂಕಾ ಚೋಪ್ರಾ ನಾಯಕಿ? ನಿರ್ದೇಶಕ ಅಟ್ಲಿ ಮಾಸ್ಟರ್ ಪ್ಲ್ಯಾನ್
ಅಲ್ಲು ಅರ್ಜುನ್ ಅವರ ಮೋಷನ್ ಕ್ಯಾಪ್ಚರ್ ಮತ್ತು ಮೋಷನ್ ಅನಿಮೇಷನ್ ಚಿತ್ರೀಕರಣವನ್ನು ಸಹ ಸ್ಟುಡಿಯೋನಲ್ಲಿ ಈಗಾಗಲೇ ಮಾಡಲಾಗಿದೆ. ಅಲ್ಲು ಅರ್ಜುನ್ ಅವರ ಫೇಷಿಯಲ್ ಎಮೋಷನ್ ಕ್ಯಾಪ್ಚರ್ ಅನ್ನು ಮಾಡಲಾಗಿದೆ. ಅಲ್ಲು ಅರ್ಜುನ್, ಮೋಷನ್ ಕ್ಯಾಪ್ಚರ್ ಡಿವೈಸ್ ಹಾಕಿಕೊಂಡು ಭಿನ್ನ ಭಿನ್ನ ಎಮೋಷನ್ಗಳನ್ನು ದಾಖಲಿಸಿದ್ದಾರೆ.
View this post on Instagram
ಇದು, ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ನ ಸಿನಿಮಾಗಳಲ್ಲಿ ಒಂದು ಎನ್ನಲಾಗುತ್ತಿದೆ. ರಾಜಮೌಳಿ-ಮಹೇಶ್ ಬಾಬು ಸಿನಿಮಾ ಹಾಗೂ ರಣ್ಬೀರ್ ಕಪೂರ್-ಯಶ್ ಅವರ ರಾಮಾಯಣ ಹೊರತುಪಡಿಸಿದರೆ ಇದು ಮೂರನೇ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಇನ್ನು ಹೆಸರಿಟ್ಟಿಲ್ಲ, ಸುಮಾರು ಒಂದು ವರ್ಷಗಳ ಕಾಲ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ ಎನ್ನಲಾಗುತ್ತಿದೆ. ಈ ಹಿಂದೆ ‘ರೋಬೋ’ ಸಿನಿಮಾ ನಿರ್ಮಿಸಿ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದ ಸನ್ ನೆಟ್ವರ್ಕ್ನ ಕಲಾನಿಧಿ ಮಾರನ್ ಅವರು ಈ ಸಿನಿಮಾಕ್ಕೆ ಬಂಡವಾಳ ತೊಡಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ