ಅಲ್ಲು ಅರ್ಜುನ್​ ವಿವಾಹ ವಾರ್ಷಿಕೋತ್ಸವ; ಸ್ನೇಹಾ ರೆಡ್ಡಿ ಜತೆಗಿನ ದಾಂಪತ್ಯಕ್ಕೆ ಈಗ 13 ವರ್ಷ

‘ಪುಷ್ಪ 2’ ಸಿನಿಮಾದ ಶೂಟಿಂಗ್​ನಲ್ಲಿ ಅಲ್ಲು​ ಅರ್ಜುನ್​ ಬ್ಯುಸಿ ಆಗಿದ್ದಾರೆ. ಸಿನಿಮಾದ ಕೆಲಸಗಳ ಒತ್ತಡ ಎಷ್ಟೇ ಇದ್ದರೂ ಕೂಡ ಅವರು ಕುಟುಂಬಕ್ಕೆ ಸಮಯ ಮೀಸಲಿಡುವುದನ್ನು ತಪ್ಪಿಸುವುದಿಲ್ಲ. ಇಂದು (ಮಾರ್ಚ್​ 6) ಅಲ್ಲು ಅರ್ಜುನ್​ ಮತ್ತು ಸ್ನೇಹಾ ರೆಡ್ಡಿ ಅವರು 13ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಟ್​ ಮಾಡಿದ್ದಾರೆ.

ಅಲ್ಲು ಅರ್ಜುನ್​ ವಿವಾಹ ವಾರ್ಷಿಕೋತ್ಸವ; ಸ್ನೇಹಾ ರೆಡ್ಡಿ ಜತೆಗಿನ ದಾಂಪತ್ಯಕ್ಕೆ ಈಗ 13 ವರ್ಷ
ಅಲ್ಲು ಅರ್ಜುನ್​, ಸ್ನೇಹಾ ರೆಡ್ಡಿ

Updated on: Mar 06, 2024 | 4:23 PM

ಟಾಲಿವುಡ್​ ಸ್ಟಾರ್​ ನಟ ಅಲ್ಲು ಅರ್ಜುನ್ (Allu Arjun)​ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 13 ವರ್ಷ ಕಳೆದಿದೆ. ಸ್ನೇಹಾ ರೆಡ್ಡಿ (Sneha Reddy) ಜೊತೆ ಅಲ್ಲು ಅರ್ಜುನ್ ಅವರ ವಿವಾಹ 2011ರ ಮಾರ್ಚ್​ 6ರಂದು ನಡೆದಿತ್ತು. ಇಂದು (ಮಾ.6) 13ನೇ ವರ್ಷದ ವಿವಾಹ ವಾರ್ಷಿಕೋತ್ಸವ (Wedding Anniversary) ಆಚರಿಸಿಕೊಂಡಿರುವ ಈ ದಂಪತಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಪ್ರೀತಿಯ ಪತ್ನಿ ಸ್ನೇಹಾ ರೆಡ್ಡಿಗೆ ಅಲ್ಲು ಅರ್ಜುನ್​ ಅವರು ವಿಶೇಷವಾಗಿ ವಿಶ್​ ಮಾಡಿದ್ದಾರೆ. ಮದುವೆಯ ಒಂದು ಸ್ಪೆಷಲ್​ ಫೋಟೋವನ್ನು ಕೂಡ ಅವರು ಶೇರ್​ ಮಾಡಿಕೊಂಡಿದ್ದಾರೆ. ಹೆಂಡತಿಯನ್ನು ಪ್ರೀತಿಯಿಂದ ಕ್ಯೂಟಿ ಎಂದು ಅಲ್ಲು ಅರ್ಜುನ್ ಕರೆದಿದ್ದಾರೆ.

ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಅಲ್ಲು ಅರ್ಜುನ್​ ಅವರು ಪತ್ನಿ ಜೊತೆಗಿನ ಎರಡು ಫೋಟೋ ಹಂಚಿಕೊಂಡಿದ್ದಾರೆ. ‘ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಕ್ಯೂಟಿ. ಇಂದಿಗೆ 13 ವರ್ಷ ಆಯ್ತು. ನಿನ್ನ ಸಾಂಗತ್ಯದಿಂದ ನಾನು ಬೆಳೆದಿದ್ದೇನೆ. ನಿನ್ನಿಂದ ನಾನು ಶಕ್ತಿ ಪಡೆಯುತ್ತೇನೆ’ ಎಂದು ಪತ್ನಿಗೆ ಅಲ್ಲು ಅರ್ಜುನ್​ ಅವರು ಶುಭ ಕೋರಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿವೆ.

ಇದನ್ನೂ ಓದಿ: ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ ಅಲ್ಲು ಅರ್ಜುನ್ ಪುತ್ರ

ಅಲ್ಲು ಅರ್ಜುನ್​ ಮತ್ತು ಸ್ನೇಹಾ ರೆಡ್ಡಿ ಅವರದ್ದು ಲವ್ ಮ್ಯಾರೇಜ್​. ಅವರ ಲವ್​ ಸ್ಟೋರಿ ಕೂಡ ಸಿನಿಮಾದ ರೀತಿಯೇ ಇದೆ. ಆಪ್ತರೊಬ್ಬರ ಮದುವೆಯೊಂದರಲ್ಲಿ ಅಲ್ಲು ಅರ್ಜುನ್​ ಮತ್ತು ಸ್ನೇಹಾ ರೆಡ್ಡಿ ಅವರು ಮೊದಲ ಬಾರಿಗೆ ಭೇಟಿಯಾದರು. ಮೊದಲ ನೋಟದಲ್ಲೇ ಅಲ್ಲು ಅರ್ಜುನ್​ ಅವರಿಗೆ ಪ್ರೀತಿ ಚಿಗುರಿತು. ಸ್ನೇಹಿತರ ಸಹಾಯದಿಂದ ಸ್ನೇಹಾಗೆ ಅಲ್ಲು ಅರ್ಜುನ್​ ಮೆಸೇಜ್​ ಕಳಿಸಿದರು. ಬಳಿಕ ಇಬ್ಬರೂ ಡೇಟಿಂಗ್​ ಮಾಡಲು ಆರಂಭಿಸಿದರು. ಮೊದಲಿಗೆ ಇಬ್ಬರ ಪ್ರೀತಿಯನ್ನು ಕುಟುಂಬದವರು ಒಪ್ಪಿರಲಿಲ್ಲ. ನಂತರ ತಂದೆ-ತಾಯಿಯನ್ನು ಒಪ್ಪಿಸಿ ಸ್ನೇಹಾ ರೆಡ್ಡಿ ಮತ್ತು ಅಲ್ಲು ಅರ್ಜುನ್​ ಅವರು ಮದುವೆಯಾದರು.

ಇದನ್ನೂ ಓದಿ: ಅಲ್ಲು ಅರ್ಜುನ್​ಗೆ ಟಿವಿ9 ನಕ್ಷತ್ರ ಅವಾರ್ಡ್: ‘ಪುಷ್ಪ’ ಹೇಳಿದ್ದೇನು?

ಈ ಸ್ಟಾರ್​ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಅಲ್ಲು ಅರ್ಜುನ್​ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್​. ಸಿನಿಮಾ ಕೆಲಸಗಳ ನಡುವೆ ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಾರೆ. ಪತ್ನಿ ಮತ್ತು ಮಕ್ಕಳ ಜೊತೆ ಕಾಲ ಕಳೆದ ಫೋಟೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾರೆ. ಸದ್ಯಕ್ಕೆ ಅಲ್ಲು ಅರ್ಜುನ್​ ಅವರು ‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಮೇಲೆ ಬಹಳ ನಿರೀಕ್ಷೆ ಇದೆ. ಆಗಸ್ಟ್​ 15ರಂದು ರಿಲೀಸ್​ ಆಗಲಿರುವ ಈ ಸಿನಿಮಾಗೆ ಈಗಲೇ ಪ್ರಚಾರ ನೀಡಲಾಗುತ್ತಿದೆ. ಅಲ್ಲು ಅರ್ಜುನ್​ ಅವರು ಬರ್ಲಿನ್​ಗೆ ಹಾಗೂ ರಶ್ಮಿಕಾ ಮಂದಣ್ಣ ಅವರು ಜಪಾನ್​ಗೆ ತೆರಳಿ ಈ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us