ಸ್ಕ್ರಿಪ್ಟ್​ನಲ್ಲಿರುವುದಕ್ಕಿಂತಲೂ ಉತ್ತಮವಾಗಿ ಮೂಡಿಬಂದಿದೆ ‘ಪುಷ್ಪ 2’?

‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಅವರು ನಾಯಕಿ. ಈ ಸಿನಿಮಾದಲ್ಲಿ ಫಹಾದ್ ಫಾಸಿಲ್, ಧನಂಜಯ್ ಮೊದಲಾದವರು ನಟಿಸುತ್ತಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡುತ್ತಿದೆ.

ಸ್ಕ್ರಿಪ್ಟ್​ನಲ್ಲಿರುವುದಕ್ಕಿಂತಲೂ ಉತ್ತಮವಾಗಿ ಮೂಡಿಬಂದಿದೆ ‘ಪುಷ್ಪ 2’?
ಅಲ್ಲು ಅರ್ಜುನ್
Follow us
ರಾಜೇಶ್ ದುಗ್ಗುಮನೆ
| Updated By: ಮಂಜುನಾಥ ಸಿ.

Updated on:Oct 15, 2024 | 5:09 PM

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರದ ರಿಲೀಸ್​ಗೆ ಇನ್ನು ಉಳಿದಿರೋದು ಒಂದೂವರೆ ತಿಂಗಳು ಮಾತ್ರ. ಇದು ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈ ಚಿತ್ರದ ಬಗ್ಗೆ ಈಗಾಗಲೇ ಹೈಪ್ ಕೊಡೋ ಕೆಲಸ ಆಗುತ್ತಿದೆ. ಈ ಸಿನಿಮಾ ಡಿಸೆಂಬರ್ 5ಕ್ಕೆ ರಿಲೀಸ್ ಆಗಲಿದೆ. ಈ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ದೇವಿಶ್ರೀ ಪ್ರಸಾದ್ ನೀಡಿರುವ ಹೈಪ್​ಗೆ ಎಲ್ಲರೂ ಅಚ್ಚರಿ ಹೊರಹಾಕಿದ್ದಾರೆ.

ಇತ್ತೀಚೆಗೆ ದೇವಿಶ್ರೀ ಪ್ರಸಾದ್ ಅವರು ಕಾರ್ಯಕ್ರಮ ಒಂದರಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರು ‘ಪುಷ್ಪ 2’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅವರು ಸಿನಿಮಾದ ಮೊದಲಾರ್ಧ ನೋಡಿ ಥ್ರಿಲ್ ಆಗಿದ್ದಾರೆ. ‘ನಾನು ಪುಷ್ಪ ಸೀಕ್ವೆಲ್​ನ ಮೊದಲಾರ್ಧ ನೋಡಿದ್ದೇನೆ. ನಾನು ಮ್ಯೂಸಿಕ್ ಬಗ್ಗೆ ಮಾತನಾಡುತ್ತಿಲ್ಲ. ಸಿನಿಮಾ ಬಗ್ಗೆ ಮಾತನಾಡುತ್ತಿದ್ದೇನೆ’ ಎಂದಿದ್ದಾರೆ ಶ್ರೀದೇವಿ ಪ್ರಸಾದ್.

‘ಸುಕುಮಾರ್ ಅವರು ಸ್ಕ್ರಿಪ್ಟ್ ಹೇಳುವಾಗಲೇ ಥ್ರಿಲ್ ಆಗಿದ್ದೆವು. ಪ್ರತಿ ದೃಶ್ಯಕ್ಕೂ ಇದು ಇಂಟರ್​ವಲ್ಲಾ ಇದು ಇಂಟರ್​ವಲ್ಲಾ ಎಂದು ಕೇಳುತ್ತಿದ್ದೆವು. ಸುಕುಮಾರ್ ಅವರು ಮಾಡಿದ ಸ್ಕ್ರಿಪ್ಟ್​, ಅವರು ಸಿನಿಮಾ ಮಾಡಿದ ರೀತಿ, ಅಲ್ಲು ಅರ್ಜುನ್ ಅವರ ನಟನೆ ಅದ್ಭುತವಾಗಿದೆ. ಮೊದಲಾರ್ಧದಲ್ಲೇ ಮೈಂಡ್​ಬ್ಲೋಯಿಂಗ್ ಆಗಿದೆ’ ಎಂದಿದ್ದಾರೆ ಅವರು.

‘ಪುಷ್ಪ’ ಚಿತ್ರ 300 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ‘ಪುಷ್ಪ 2’ ಸಿನಿಮಾ ಬಗ್ಗೆ ದೇವಿಶ್ರೀ ಪ್ರಸಾದ್ ಹೇಳುವುದು ನಿಜವೇ ಆದಲ್ಲಿ ಅನಾಯಾಸವಾಗಿ ಈ ಸಿನಿಮಾ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಲಿದೆ. ಇತ್ತೀಚಿನ ವರ್ಷಗಳಲ್ಲಿ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡುವುದು ದೊಡ್ಡ ಚಾಲೆಂಜ್ ಆಗಿ ಉಳಿದಿಲ್ಲ. ‘ಪುಷ್ಪ’ ಚಿತ್ರವನ್ನು ಜನರು ಈಗಾಗಲೇ ನೋಡಿರುವುದರಿಂದ ‘ಪುಷ್ಪ 2’ ಬಗ್ಗೆ ಮತ್ತಷ್ಟು ನಿರೀಕ್ಷೆ ಇದೆ.

ಇದನ್ನೂ ಓದಿ: ‘ಪುಷ್ಪ ನಾನು ಮಾಡಬೇಕಿತ್ತು, ಅಲ್ಲು ಅರ್ಜುನ್ ಸರ್ ಗ್ರೇಟ್ ಬಿಡಿ’: ಶಾರುಖ್ ಖಾನ್

‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಅವರು ನಾಯಕಿ. ಈ ಸಿನಿಮಾದಲ್ಲಿ ಫಹಾದ್ ಫಾಸಿಲ್, ಧನಂಜಯ್ ಮೊದಲಾದವರು ನಟಿಸುತ್ತಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:04 am, Tue, 15 October 24