AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pushpa Pushpa: ‘ಪುಷ್ಪ 2’ ಅಸಲಿ ಅಬ್ಬರ ಈಗ ಶುರು; ಧೂಳೆಬ್ಬಿಸುತ್ತಿದೆ ಟೈಟಲ್​ ಸಾಂಗ್​

‘ಪುಷ್ಪ 2’ ಸಿನಿಮಾದ ಮೊದಲ ಹಾಡು ರಿಲೀಸ್​ ಆಗಿದೆ. ‘ಪುಷ್ಪ ಪುಷ್ಪ..’ ಎಂಬ ಈ ಹಾಡಿನಲ್ಲಿ ಕಥಾನಾಯಕನ ಗುಣಗಾನ ಮಾಡಲಾಗಿದ್ದು, ಸಖತ್​ ಅದ್ದೂರಿತನ ಕಾಣಿಸುತ್ತಿದೆ. ದೇವಿ ಶ್ರೀ ಪ್ರಸಾದ್​ ಸಂಗೀತ ನೀಡಿದ ಈ ಹಾಡು ‘ಟಿ ಸಿರೀಸ್​’ ಮೂಲಕ ಬಿಡುಗಡೆ ಆಗಿದೆ. ಟೈಟಲ್​ ಸಾಂಗ್​ನಿಂದಾಗಿ ಸಿನಿಮಾ ಮೇಲಿನ ಹೈಪ್​ ಹೆಜ್ಜಾಗಿದೆ. ಅಲ್ಲು ಅರ್ಜುನ್​ ಅಭಿಮಾನಿಗಳು ಈ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದಾರೆ.

Pushpa Pushpa: ‘ಪುಷ್ಪ 2’ ಅಸಲಿ ಅಬ್ಬರ ಈಗ ಶುರು; ಧೂಳೆಬ್ಬಿಸುತ್ತಿದೆ ಟೈಟಲ್​ ಸಾಂಗ್​
ಅಲ್ಲು ಅರ್ಜುನ್​
ಮದನ್​ ಕುಮಾರ್​
|

Updated on: May 01, 2024 | 9:27 PM

Share

ಈ ವರ್ಷದ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ 2’ (Pushpa 2) ಆಗಸ್ಟ್​ 15ರಂದು ಬಿಡುಗಡೆ ಆಗಲಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಹೊಸ ಹೊಸ ದಾಖಲೆಗಳನ್ನು ಬರೆಯುವ ಎಲ್ಲ ಲಕ್ಷಣಗಳು ಈಗಲೇ ಕಾಣಿಸುತ್ತಿವೆ. ನಿರ್ದೇಶಕ ಸುಕುಮಾರ್​ ಅವರು ಭಾರಿ ಅದ್ದೂರಿಯಾಗಿ ಈ ಸಿನಿಮಾವನ್ನು ಕಟ್ಟಿಕೊಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈಗ ಈ ಚಿತ್ರದ ಟೈಟಲ್​ ಸಾಂಗ್​ ಬಿಡುಗಡೆ ಆಗಿದೆ. ಇಂದು (ಮೇ 1) ‘ಕಾರ್ಮಿಕದ ದಿನ’ದ ಪ್ರಯುಕ್ತ ‘ಪುಷ್ಪ ಪುಷ್ಪ..’ (Pushpa Pushpa Song) ಲಿರಿಕಲ್​ ವಿಡಿಯೋ ಬಿಡುಗಡೆ ಆಗಿ ಧೂಳೆಬ್ಬಿಸುತ್ತಿದೆ. ಅಲ್ಲು ಅರ್ಜುನ್​ (Allu Arjun) ಅವರು ಸಂಪೂರ್ಣ ಮಾಸ್​ ಅವತಾದಲ್ಲಿ ಅಬ್ಬರಿಸುತ್ತಿದ್ದಾರೆ.

ಸ್ಟಾರ್​ ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್​ ಅವರು ‘ಪುಷ್ಪ 2’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಅವರ ಮೇಲೆ ಇರುವ ನಿರೀಕ್ಷೆ ದೊಡ್ಡದು. ಅದಕ್ಕೆ ತಕ್ಕಂತೆಯೇ ಅವರು ಟೈಟಲ್ ಸಾಂಗ್​ ಕಂಪೋಸ್​ ಮಾಡಿದ್ದಾರೆ. ಹಾಡಿನಲ್ಲಿ ಕಥಾನಾಯಕ ಪುಷ್ಪರಾಜ್​ನ ಗುಣಗಾನ ಮಾಡಲಾಗಿದೆ. ಹಾಡಿನಲ್ಲಿ ಅದ್ದೂರಿತನ ಎದ್ದು ಕಾಣಿಸುತ್ತಿದೆ. ಸಿನಿಮಾದ ಮೇಲೆ ಹೈಪ್​ ಹೆಚ್ಚಲು ಈ ಸಾಂಗ್​ ಕಾರಣವಾಗಿದೆ.

ಇದನ್ನೂ ಓದಿ: 51 ಟೇಕ್​ ತೆಗೆದುಕೊಂಡ ಅಲ್ಲು ಅರ್ಜುನ್​; ‘ಪುಷ್ಪ 2’ ಟೀಸರ್​ ಹಿಂದಿದೆ ಅಚ್ಚರಿ ವಿಷಯ

ಇದು ಪ್ಯಾನ್​ ಇಂಡಿಯಾ ಸಿನಿಮಾ. ತೆಲುಗು, ಹಿಂದಿ, ಕನ್ನಡ, ತಮಿಳು, ಮಲಯಾಳ, ಬೆಂಗಾಲಿ ಭಾಷೆಗಳಲ್ಲಿ ‘ಪುಷ್ಪ 2’ ಬಿಡುಗಡೆ ಆಗಲಿದೆ. ಈಗ ಈ ಎಲ್ಲ ಭಾಷೆಗಳಲ್ಲೂ ‘ಪುಷ್ಪ ಪುಷ್ಪ..’ ಹಾಡನ್ನು ಬಿಡುಗಡೆ ಮಾಡಲಾಗಿದೆ. ಆಸ್ಕರ್​ ಪ್ರಶಸ್ತಿ ಪುರಸ್ಕೃತ ಚಂದ್ರಬೋಸ್​ ಅವರು ತೆಲುಗಿನಲ್ಲಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಕನ್ನಡ ವರ್ಷನ್​ಗೆ ವರದರಾಜ್​ ಚಿಕ್ಕಬಳ್ಳಾಪುರ ಅವರ ಸಾಹಿತ್ಯವಿದೆ.

‘ಪುಷ್ಪ ಪುಷ್ಪ..’ ಹಾಡು:

ತೆಲುಗಿನಲ್ಲಿ ‘ಪುಷ್ಪ ಪುಷ್ಪ..’ ಹಾಡನ್ನು ನಕಾಶ್​ ಅಜೀಜ್​ ಹಾಗೂ ದೀಪಕ್​ ಬ್ಯೂ ಅವರು ಹಾಡಿದ್ದಾರೆ. ಕನ್ನಡ ವರ್ಷನ್​ಗೆ​ ವಿಜಯ್​ ಪ್ರಕಾಶ್​ ಧ್ವನಿ ನೀಡಿದ್ದಾರೆ. ಎಲ್ಲ ಭಾಷೆಯಲ್ಲೂ ಈ ಹಾಡು ಭರ್ಜರಿ ವೀವ್ಸ್​ ಪಡೆಯುತ್ತಿದೆ. ಟಿ-ಸಿರೀಸ್​ ಮೂಲಕ ಈ ಹಾಡು ಬಿಡುಗಡೆ ಆಗಿದೆ. ಅಲ್ಲು ಅರ್ಜುನ್​ ಅವರ ಅಭಿಮಾನಿಗಳ ವಲಯದಲ್ಲಿ ಈ ಹಾಡು ಟ್ರೆಂಡ್​ ಸೃಷ್ಟಿಸಲು ಆರಂಭಿಸಿದೆ. 24 ಗಂಟೆಯಲ್ಲಿ ಎಲ್ಲ ಭಾಷೆಯ ವರ್ಷನ್​ ಸೇರಿ ಒಟ್ಟು ಎಷ್ಟು ವೀವ್ಸ್​ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಇದೆ. ಫಹಾದ್​ ಫಾಸಿಲ್​, ರಶ್ಮಿಕಾ ಮಂದಣ್ಣ ಮುಂತಾದವರು ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಜೊತೆ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!