ಅಮಿತಾಬ್ ಅವರನ್ನು ‘ಲಂಬೂಜಿ’ ಎನ್ನುತ್ತಿದ್ದ ಪತ್ನಿ ಜಯಾ, ನಿಲ್ಲಿಸಿದ್ದು ಏಕೆ?
ಅಮಿತಾಬ್ ಬಚ್ಚನ್ ಹಾಗಲ್ಲ, ಸಂದರ್ಶನಗಳಲ್ಲಿ, ಸಿನಿಮಾ ಪ್ರಮೋಷನ್ಗಳಲ್ಲಿ ಅವರೇ ನಿರೂಪಣೆ ಮಾಡುವ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ತಮ್ಮದೇ ಜೀವನದ ಹಲವು ತಮಾಷೆ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಒಂದು ತಮಾಷೆಯ ನೆನಪನ್ನು ಮೆಲುಕು ಹಾಕುತ್ತಾ ಬಚ್ಚನ್ ತಮ್ಮ ಹಾಗೂ ಜಯಾ ಬಚ್ಚನ್ ಅವರ ಕುರಿತಾದ ವಿಷಯವೊಂದನ್ನು ಹಂಚಿಕೊಂಡರು.

ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರದ್ದು ಬಾಲಿವುಡ್ನ ಐಕಾನಿಕ್ ಜೋಡಿ. ಇಬ್ಬರೂ ಸ್ಟಾರ್ ತಾರೆಯರಾಗಿದ್ದಾಗ ಮದುವೆಯಾದ ಈ ಜೋಡಿ ದಶಕಗಳಿಂದಲೂ ದಾಂಪತ್ಯದಲ್ಲಿದ್ದಾರೆ. ಜಯಾ ಬಚ್ಚನ್ ಬಹಿರಂಗವಾಗಿ ಕಾಣಿಸಿಕೊಳ್ಳುವುದು ತುಸು ಕಡಿಮೆ, ಕಾಣಿಸಿಕೊಂಡರು ಹೆಚ್ಚು ಮಾತಿಲ್ಲ, ಶಿಸ್ತಿನ, ಗಂಭೀರ ಸ್ವಭಾವದ ವ್ಯಕ್ತಿತ್ವ ಅವರದ್ದು. ಆದರೆ ಅಮಿತಾಬ್ ಬಚ್ಚನ್ ಹಾಗಲ್ಲ, ಸಂದರ್ಶನಗಳಲ್ಲಿ, ಸಿನಿಮಾ ಪ್ರಮೋಷನ್ಗಳಲ್ಲಿ ಅವರೇ ನಿರೂಪಣೆ ಮಾಡುವ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ತಮ್ಮದೇ ಜೀವನದ ಹಲವು ತಮಾಷೆ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಒಂದು ತಮಾಷೆಯ ನೆನಪನ್ನು ಮೆಲುಕು ಹಾಕುತ್ತಾ ಬಚ್ಚನ್ ತಮ್ಮ ಹಾಗೂ ಜಯಾ ಬಚ್ಚನ್ ಅವರ ಕುರಿತಾದ ವಿಷಯವೊಂದನ್ನು ಹಂಚಿಕೊಂಡರು.
ಕೌನ್ ಬನೇಗಾ ಕರೋಡ್ಪತಿ ಶೋಗೆ ‘ರಾಮಾಯಣ’ದ ಪ್ರಮುಖ ಪಾತ್ರಧಾರಿಗಳು ಆಗಮಿಸಿದ್ದರು. ಸಾಯಿ ಪಲ್ಲವಿ, ರಣ್ಬೀರ್ ಕಪೂರ್ ಹಾಗೂ ರವಿದುಬೆ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವೇಳೆ ಅಮಿತಾಬ್ ಅವರು ತಮ್ಮ ಹಾಗೂ ಜಯಾ ಬಚ್ಚನ್ ಅವರ ನಡುವೆ ನಡೆದಿದ್ದ ಸ್ವಾರಸ್ಯಕರ ವಿಷಯ ಹಂಚಿಕೊಂಡರು. ಒಂದು ಕಾಲದಲ್ಲಿ ಜಯಾ ಅವರು ಪ್ರೀತಿಯಿಂದ ಅಮಿತಾಬ್ ಅವರನ್ನು ‘ಲಂಬುಜಿ’ ಎಂದು ಕರೆಯುತ್ತಿದ್ದರಂತೆ. ಅಮಿತಾಬ್ ಬಚ್ಚನ್ ಅವರು ಎತ್ತರದ ವ್ಯಕ್ತಿ ಆಗಿದ್ದ ಕಾರಣದಿಂದಾಗಿ ಅವರು ಹಾಗೆ ಕರೆಯುತ್ತಿದ್ದರು. ಆದರೆ ಸೊಸೆಯ ಬಾಯಲ್ಲಿ ಮಗನ ಬಗ್ಗೆ ಈ ಸಂಬೋಧನೆ ಅಮಿತಾಬ್ ಬಚ್ಚನ್ ಅವರ ತಂದೆ ಖ್ಯಾತ ಸಾಹಿತಿ ಹರಿವಂಶ್ ರಾಯ್ ಬಚ್ಚನ್ ಇಷ್ಟವಾಗಿರಲಿಲ್ಲ.
ಒಂದು ದಿನ ಸೊಸೆ ಜಯಾಗೆ ಸ್ಪಷ್ಟ ಸೂಚನೆ ನೀಡಿ ಅವರು ಹೇಳಿದ್ದರು, ‘ನೋಡು, ಹೀಗೆ ಆತನನ್ನು ‘ಲಂಬುಜಿ’ ಎಂದು ಕರೆಯಬೇಡ. ಅಥವಾ ಆತನ ಹೆಸರನ್ನೇ ಕ್ಯಾರೆ ಅಥವಾ ಬೇರೆ ಯಾವುದಾದರೂ ಸೂಕ್ತವಾದ ಗೌರವಯುತ ಹೆಸರನ್ನು ಬಳಸು’ ಮಾವನ ಸೂಚನೆ ನಂತರ ಜಯಾ ಅವರು ನೇರವಾಗಿ ಹೆಸರನ್ನೇ ಕರೆಯಲು ಶುರು ಮಾಡಿದರು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಕೆಬಿಸಿಯಲ್ಲಿ ಬಾಬು ಪಟ್ಟಿ ಗ್ರಾಮಸ್ಥರಿಗೆ ಕ್ಷಮೆ ಕೇಳಿದ ಅಮಿತಾಬ್ ಬಚ್ಚನ್
ಕಾರ್ಯಕ್ರಮದ ಸೆಟ್‌ನಲ್ಲಿ ಈ ತಮಾಷೆಯ ಕಥೆಯನ್ನು ಕೇಳಿ ನಗುವಿನ ಅಲೆ ಎದ್ದಿತು. ಈ ಮಾತಿಗೆ ರಣಬೀರ್ ಕಪೂರ್ ಕೂಡ ಧ್ವನಿಗೂಡಿಸಿದರು. ಅಮಿತಾಭ್ ಹಾಗೂ ಜಯಾ ಅವರ ಎತ್ತರದ ಅಂತರದೊಂದಿಗೆ ತಮ್ಮ ಹಾಗೂ ಆಲಿಯಾ ಭಟ್ ಅವರ ಎತ್ತರವನ್ನು ಹೋಲಿಸಿ ರಣಬೀರ್ ತಮಾಷೆಯಾಗಿ ಹೇಳಿದರು, ‘ನಾನು ಆಗಾಗ್ಗೆ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದೆ, ನಾನು ಒಮ್ಮೊಮ್ಮೆ ಅಮಿತ್ ಜೀ ಅವರಂತೆ ಸ್ವಲ್ಪ ಎತ್ತರವಾಗಿದ್ದರೆ ಮತ್ತು ಆಲಿಯಾ ಜಯಾ ಆಂಟಿಯಂತೆ ಸ್ವಲ್ಪ ಕುಳ್ಳಗಿದ್ದರೆ, ಪರದೆಯ ಮೇಲೆ ನಮ್ಮ ಎತ್ತರದ ವ್ಯತ್ಯಾಸ ಎಷ್ಟು ಚೆನ್ನಾಗಿ ಕಾಣುತ್ತಿತ್ತು’ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಸಾಕಷ್ಟು ತಮಾಷೆಯ ವಿಷಯಗಳು ನಡೆದಿವೆ. ಅಮಿತಾಬ್ ಅವರು ರಣ್ಬೀರ್ ಕಪೂರ್, ಸಾಯಿ ಪಲ್ಲವಿ, ರವಿ ದುಬೆ ಅವರೊಟ್ಟಿಗೆ ಸಾಕಷ್ಟು ಸ್ವಾರಸ್ಯಕರ ವಿಷಯಗಳನ್ನು ಮಾತನಾಡಿದ್ದಾರೆ. ಸಾಯಿ ಪಲ್ಲವಿ ಅವರ ಬಗ್ಗೆ ವಿಶೇಷ ಪ್ರೀತಿ ಮತ್ತು ಗೌರವವನ್ನು ಅಮಿತಾಬ್ ಬಚ್ಚನ್ ವ್ಯಕ್ತಪಡಿಸಿದ್ದಾರೆ. ಖುದ್ದು ಸಾಯಿ ಪಲ್ಲವಿ ಸಹ ಅಮಿತಾಬ್ ಅವರ ಬಗ್ಗೆ ಸಾಕಷ್ಟು ಗೌರವ ಇರುವುದಾಗಿ ಹೇಳಿಕೊಂಡಿದ್ದಾರೆ. ‘ರಾಮಾಯಣ’ ನಾಳೆ ಅಂದರೆ ನವೆಂಬರ್ 5ಕ್ಕೆ ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




