AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಬಾಯ್​ಫ್ರೆಂಡ್​ನಿಂದ ಮಗು ಪಡೆದು, ಬ್ರೇಕಪ್​ ಮಾಡಿಕೊಂಡ ಬಳಿಕ ಬೇರೆ ನಟನ ಜತೆ ಆ್ಯಮಿ ಜಾಕ್ಸನ್ ಸುತ್ತಾಟ

ಆ್ಯಮಿ ಮಗುವಿನ ಜತೆ ಇರುವ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. 2021ರಲ್ಲಿ ಆ್ಯಮಿ ಹಾಗೂ ಜಾರ್ಜ್ ಪನಯೋಟು ಬೇರೆ ಆದರು.

ಮಾಜಿ ಬಾಯ್​ಫ್ರೆಂಡ್​ನಿಂದ ಮಗು ಪಡೆದು, ಬ್ರೇಕಪ್​ ಮಾಡಿಕೊಂಡ ಬಳಿಕ ಬೇರೆ ನಟನ ಜತೆ ಆ್ಯಮಿ ಜಾಕ್ಸನ್ ಸುತ್ತಾಟ
TV9 Web
| Edited By: |

Updated on: Jun 05, 2022 | 5:02 PM

Share

ನಟಿ ಆ್ಯಮಿ ಜಾಕ್ಸನ್ (Amy Jackson)​ ಬ್ರಿಟನ್ ಮೂಲದವರು. ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಬೇಡಿಕೆ ಇದೆ. ಕನ್ನಡದ ‘ದಿ ವಿಲನ್’​ ಸಿನಿಮಾದಲ್ಲಿ ಸುದೀಪ್​ಗೆ (Kichcha Sudeep) ಜತೆಯಾಗಿ ಅವರು ನಟಿಸಿದ್ದರು. 8 ವರ್ಷಗಳ ಕಾಲ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದ ಅವರು ಹಲವು​ ಚಿತ್ರಗಳಲ್ಲಿ ನಟಿಸಿದರು. ಅವರು ಈಗ ವೈಯಕ್ತಿಕ ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಬ್ರಿಟಿಷ್​ ಉದ್ಯಮಿ ಜಾರ್ಜ್ ಪನಯೋಟು (George Panayiotou) ಜತೆ ಆ್ಯಮಿ ರಿಲೇಶನ್​ಶಿಪ್​ನಲ್ಲಿದ್ದರು. ಜಾರ್ಜ್​​ನಿಂದ ಮಗು ಕೂಡ ಪಡೆದರು. ಆದರೆ, ಇವರ ಸಂಬಂಧ ಮುರಿದು ಬಿದ್ದಿದೆ. ಈಗ ಬ್ರಿಟನ್​ ನಟ ಎಡ್​ ವೆಸ್ಟ್​ವಿಕ್​ ಜತೆ ಸುತ್ತಾಟ ನಡೆಸುತ್ತಿರುವುದನ್ನು ಆ್ಯಮಿ ಖಚಿತಪಡಿಸಿದ್ದಾರೆ.

ಜಾರ್ಜ್ ಪನಯೋಟು ಜತೆ ಆ್ಯಮಿ ರಿಲೇಶನ್​ಶಿಪ್​ನಲ್ಲಿದ್ದರು. ಗರ್ಭಿಣಿ ಆದ  ನಂತರದಲ್ಲಿ ಇಬ್ಬರೂ ಎಂಗೇಜ್​ಮೆಂಟ್​ ಮಾಡಿಕೊಂಡರು. 2019ರಲ್ಲಿ ಆ್ಯಮಿಗೆ ಗಂಡು ಮಗು ಜನಿಸಿತು. ಇದಾದ ನಂತರದಲ್ಲಿ ಆ್ಯಮಿ ಮಗುವಿನ ಜತೆ ಇರುವ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. 2021ರಲ್ಲಿ ಆ್ಯಮಿ ಹಾಗೂ ಜಾರ್ಜ್ ಪನಯೋಟು ಬೇರೆ ಆದರು.

ಸದ್ಯ ಬ್ರಿಟನ್​ ನಟ ಎಡ್​ ವೆಸ್ಟ್​ವಿಕ್​ ಜತೆ ಆ್ಯಮಿ ಸುತ್ತಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಗಾಸಿಪ್ ಹಬ್ಬಿತ್ತು. ಈಗ ಆ್ಯಮಿ ಇನ್​ಸ್ಟಾಗ್ರಾಮ್​ನಲ್ಲಿ ಎಡ್​ ಜತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ನಡೆದ ‘ರೆಡ್​ ಸೀ ಇಂಟರ್​ನ್ಯಾಷನಲ್​ ಫಿಲ್ಮ್​​ ಫೆಸ್ಟಿವಲ್​​’ನಲ್ಲಿ ಆ್ಯಮಿ ಹಾಗೂ ಎಡ್​ ಭೇಟಿ ಆದರು. ಈ ವೇಳೆ ಇಬ್ಬರಿಗೂ ಪರಿಚಯ ಬೆಳೆದಿದ್ದು, ಇಬ್ಬರೂ ಡೇಟಿಂಗ್​ ಶುರು ಹಚ್ಚಿಕೊಂಡಿದ್ದಾರೆ.

ಇದನ್ನೂ ಓದಿ
Image
150 ಕೋಟಿ ರೂ. ಬಾಚಿದ ‘ಭೂಲ್​ ಭುಲಯ್ಯ 2’; ಬಾಲಿವುಡ್​ ಗುಂಪುಗಾರಿಕೆಗೆ ತಕ್ಕ ಉತ್ತರ ನೀಡಿದ ನಟ
Image
Sonakshi Sinha: ಸಿಂಗಾಪುರ್​ನಲ್ಲಿ ಸೋನಾಕ್ಷಿ ಸಿನ್ಹಾ; ಇಲ್ಲಿವೆ ಫೋಟೋಗಳು
Image
ಒಳ ಉಡುಪು ಧರಿಸದೆ ಬೀದಿಗೆ ಬಂದ ಮಾಜಿ ಭುವನ ಸುಂದರಿ; ಮುಂದೇನಾಯ್ತು?
Image
‘ದಿ ವಿಲನ್​’ ನಟಿಯ ಹಾಟ್​ ಅವತಾರ; ವೈರಲ್​ ಆಗಿವೆ ಆ್ಯಮಿ ಜಾಕ್ಸನ್ ಫೋಟೋಗಳು

ಇದನ್ನೂ ಓದಿ: ಒಳ ಉಡುಪು ಧರಿಸದೆ ಬೀದಿಗೆ ಬಂದ ಮಾಜಿ ಭುವನ ಸುಂದರಿ; ಮುಂದೇನಾಯ್ತು?

2010ರಲ್ಲಿ ತೆರೆಗೆ ಬಂದ ತಮಿಳಿನ ‘ಮದ್ರಾಸಪಟ್ಟಿಣಂ​’​ ಸಿನಿಮಾ ಮೂಲಕ ಆ್ಯಮಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ‘ಐ’, ‘ಥೆರಿ’ ಅಂಥ ಹಿಟ್​ ಚಿತ್ರಗಳಲ್ಲಿ ಆ್ಯಮಿ ನಟಿಸಿದರು. 2018ರಲ್ಲಿ ತೆರೆಗೆ ಬಂದ ಪ್ರೇಮ್​ ನಿರ್ದೇಶನದ ದಿ ವಿಲನ್​ ಸಿನಿಮಾಗೂ ಆ್ಯಮಿ ನಾಯಕಿಯಾದರು. ಅದೇ ವರ್ಷ ತೆರೆಗೆ ಬಂದ ‘2.0’ ಅವರ ಕೊನೆಯ ಚಿತ್ರ. ಇದಾದ ನಂತರದಲ್ಲಿ ಅವರು ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾದರು. ಸದ್ಯ, ಆ್ಯಮಿ ಬ್ರಿಟನ್​ನಲ್ಲಿಯೇ ಸೆಟಲ್​ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
TV9 Web
TV9 Web

TV9 Kannada

Read More
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು