ಬೆಂಗಳೂರಲ್ಲಿ ಅನಿರುದ್ಧ್ ‘ಹುಕುಂ’ ಟೂರ್ಗೆ ಕೆವಿಎನ್ ಪ್ರಸ್ತುತಿ; ಒಂದೇ ಗಂಟೆಯಲ್ಲಿ ಟಿಕೆಟ್ ಸೋಲ್ಡ್ಔಟ್
ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ‘ಹುಕುಂ’ ಟೂರ್‌ನ ಬೆಂಗಳೂರು ಕಾರ್ಯಕ್ರಮದ ಟಿಕೆಟ್‌ಗಳು ಕೇವಲ ಒಂದು ಗಂಟೆಯಲ್ಲಿ ಸಂಪೂರ್ಣ ಮಾರಾಟವಾಗಿವೆ. ಕೆವಿಎನ್ ಪ್ರಸ್ತುತ ಪಡಿಸಿದ ಈ ಕಾರ್ಯಕ್ರಮವು ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ಅನಿರುದ್ಧ್ ಅವರ ಅಪಾರ ಜನಪ್ರಿಯತೆ ಮತ್ತು ಅಭಿಮಾನಿಗಳ ಉತ್ಸಾಹವನ್ನು ಇದು ಸಾಬೀತುಪಡಿಸುತ್ತದೆ.

ಖ್ಯಾತ ಗಾಯಕರು, ಸಂಗೀತ ಸಂಯೋಜಕರು ಸಿನಿಮಾ ಕೆಲಸ ಮಾಡುವುದರ ಜೊತೆಗೆ ಕಾನ್ಸರ್ಟ್ಗಳನ್ನು ಕೂಡ ಆಯೋಜನೆ ಮಾಡುತ್ತಾರೆ. ಇದಕ್ಕೆ ತಮಿಳಿನ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ (Anirudh Ravichander) ಕೂಡ ಹೊರತಾಗಿಲ್ಲ. ಸಾಕಷ್ಟು ಮಾಸ್ ಸಾಂಗ್ಗಳನ್ನು ನೀಡಿದ ಅವರು ಬೆಂಗಳೂರಿನಲ್ಲಿ ಕಾನ್ಸರ್ಟ್ ಮಾಡುತ್ತಿದ್ದಾರೆ. ಇದರ ಟಿಕೆಟ್ ಕೇವಲ ಒಂದು ಗಂಟೆಯಲ್ಲಿ ಸಂಪೂರ್ಣ ಸೋಲ್ಡ್ಔಟ್ ಆಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಅನಿರುದ್ಧ್ಗೆ ಇರೋ ಕ್ರೇಜ್ ಎಂಥದ್ದು ಎಂಬುದು ಸಾಬೀತಾಗಿದೆ.
2012ರಲ್ಲಿ ಬಂದ ‘ವೈ ದಿಸ್ ಕೊಲವೆರಿ..’ ಹಾಡಿನ ಮೂಲಕ ಅನಿರುದ್ಧ್ ಖ್ಯಾತಿ ಪಡೆದರು. ಮೊದಲ ಹಾಡಿನ ಮೂಲಕ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಈಗ ಅವರು ಸ್ಟಾರ್ ಹೀರೋಗಳ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ. ಮಾಸ್ ಹಾಡುಗಳ ಮೂಲಕ ಅವರು ಜನಪ್ರಿಯತೆ ಪಡೆಯುತ್ತಾ ಇದ್ದಾರೆ. ಈಗ ಬೆಂಗಳೂರಿನಲ್ಲಿ ಅವರು ಮ್ಯೂಸಿಕ್ ಕಾನ್ಸರ್ಟ್ ಆಯೋಜನೆ ಮಾಡಿದ್ದು, ಇದನ್ನು ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರಸ್ತುತಪಡಿಸುತ್ತಿದೆ.
‘ಹುಕುಂ ಟೂರ್..’ ಎಂದು ಇದಕ್ಕೆ ನಾಮಕರಣ ಮಾಡಲಾಗಿದೆ. ಈಗಾಗಲೇ ಅನಿರುದ್ಧ್ ಅವರು ದುಬೈ, ಆಸ್ಟ್ರೇಲಿಯಾ, ಅಮೆರಿಕ, ಪ್ಯಾರಿಸ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಅತ್ಯಂತ ಯಶಸ್ವಿಯಾಗಿ ಟೂರ್ ನಡೆಸಿಕೊಟ್ಟಿದ್ದಾರೆ. ಈ ಟೂರ್ ಈಗ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದೆ. ಬೆಂಗಳೂರಿನಲ್ಲಿ ಮೊದಲ ಶೋ ನಡೆಯಲಿದೆ ಅನ್ನೋದು ವಿಶೇಷ.
ಇದನ್ನೂ ಓದಿ: ಅನಿರುದ್ಧ್ ರವಿಚಂದರ್ಗೆ ಕಿವಿಮಾತು ಹೇಳಿದ ಎಆರ್ ರೆಹಮಾನ್
ವಿಶೇಷ ದಾಖಲೆ:
ಮೇ 31ರಂದು ಟೆರಾಫಾರ್ಮ್ ಅರೇನಾದಲ್ಲಿ ‘ಹುಕುಂ’ ಕಾನ್ಸರ್ಟ್ ನಡೆಯಿತ್ತಿದೆ. ಇದು ಭಾರತದಲ್ಲಿ ನಡೆಯುತ್ತಿರುವ ಮೊದಲ ಹುಕುಂ ಟೂರ್. ಕೇವಲ 60 ನಿಮಿಷಗಳಲ್ಲಿ ಬರೋಬ್ಬರಿ 16 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿದೆ ಅನ್ನೋದು ವಿಶೇಷ. ಈ ವಿಚಾರವನ್ನು ಕೆವಿಎನ್ ಸಂಸ್ಥೆಯ ಮುಖ್ಯಸ್ಥ ವೆಂಕಟ್ ಕೆ. ನಾರಾಯಣ ಹೇಳಿದ್ದಾರೆ. ಈ ಮೂಲಕ ಅವರ ಬಗ್ಗೆ ಸಾಕಷ್ಟು ಕ್ರೇಜ್ ಇರೋದು ಗೊತ್ತಾಗೊದೆ.
Bengaluru‼️ Get your pass to the ultimate crazy madness of @anirudhofficial ‘s #HukumWorldTour 🔥
Tickets live now on @lifeindistrict 💥
Coming to you on May 31st, Terraform Arena, Bengaluru ♥️@anirudhofficial @TheRoute @BrandAvatar@Jagadishbliss… pic.twitter.com/rJFgKx8Tvh
— KVN Productions (@KvnProductions) April 9, 2025
ಮನೋರಂಜನೆ ವಿಷಯವಾಗಿ ಮತ್ತೊಂದಿಷ್ಟು ಸರ್ಪ್ರೈಸ್ಗಳು ಕೆವಿಎನ್ ಸಂಸ್ಥೆಯ ಕಡೆಯಿಂದ ಬರುವ ನಿರೀಕ್ಷೆಗಳಿವೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಅವರು ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.