‘ಇವನೇ ನನ್ನ ಪ್ರಪಂಚ’; ವೇದಿಕೆ ಮೇಲೆ ಬೆಸ್ಟ್ ಫ್ರೆಂಡ್​ನ ಪರಿಚಯಿಸಿದ ಅನುಪಮಾ ಗೌಡ

ಏಪ್ರಿಲ್ 4 ಫ್ರೆಂಡ್​ಶಿಪ್ ಡೇ. ಎಲ್ಲರೂ ತಮ್ಮ ಜೀವನಕ್ಕೆ ಆಸರೆ ಆದ, ಕಷ್ಟಗಳಿಗೆ ನೆರವಾದ ಗೆಳೆಯರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಅನುಪಮಾ ಗೌಡ ಕೂಡ ತಮ್ಮ ಬೆಸ್ಟ್​ ಫ್ರೆಂಡ್ ಯಾರು ಎಂಬುದನ್ನು ಹೇಳಿದ್ದಾರೆ. ಈ ಪ್ರೋಮೋ ಸಖತ್ ವೈರಲ್ ಆಗುತ್ತಿದೆ.

‘ಇವನೇ ನನ್ನ ಪ್ರಪಂಚ’; ವೇದಿಕೆ ಮೇಲೆ ಬೆಸ್ಟ್ ಫ್ರೆಂಡ್​ನ ಪರಿಚಯಿಸಿದ ಅನುಪಮಾ ಗೌಡ
ಅನುಪಮಾ
Follow us
ರಾಜೇಶ್ ದುಗ್ಗುಮನೆ
|

Updated on: Aug 03, 2024 | 7:02 AM

ನಟಿ ಅನುಪಮಾ ಗೌಡ ಅವರು ಹಿರಿತೆರೆ ಹಾಗೂ ಕಿರುತೆರೆ ಎರಡಕ್ಕೂ ಸಲ್ಲುತ್ತಾರೆ. ಅವರಿಗೆ ಎರಡೂ ಕ್ಷೇತ್ರದಲ್ಲಿ ಜನಪ್ರಿಯತೆ ಇದೆ. ಅವರು ಈಗ ‘ಗಿಚ್ಚಿ ಗಿಲಿಗಿಲಿ 3’ ವೇದಿಕೆ ಮೇಲೆ ಬೆಸ್ಟ್​ ಫ್ರೆಂಡ್​ನ ಪರಿಚಯಿಸಿದ್ದಾರೆ. ಅಷ್ಟೇ ಅಲ್ಲ ಆತನೇ ನನ್ನ ಪ್ರಪಂಚ ಎಂದು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅನುಪಮಾ ಗೌಡ ಪರಿಚಯಿಸಿದ್ದು ಯಾರನ್ನು? ಆತನ ಪರಿಚಯ ಆಗಿದ್ದು ಹೇಗೆ ಎಂಬುದನ್ನು ಅನುಪಮಾ ಗೌಡ ವಿವರಿಸಿದ್ದಾರೆ.

ಏಪ್ರಿಲ್ 4 ಫ್ರೆಂಡ್​ಶಿಪ್ ಡೇ. ಎಲ್ಲರೂ ತಮ್ಮ ಜೀವನಕ್ಕೆ ಆಸರೆ ಆದ, ಕಷ್ಟಗಳಿಗೆ ನೆರವಾದ ಗೆಳೆಯರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಅನುಪಮಾ ಗೌಡ ಕೂಡ ತಮ್ಮ ಬೆಸ್ಟ್​ ಫ್ರೆಂಡ್ ಯಾರು ಎಂಬುದನ್ನು ಹೇಳಿದ್ದಾರೆ. ಅನುಪಮಾ ಗೌಡ ಬೆಸ್ಟ್ ಫ್ರೆಂಡ್ ಒಂದು ಪುಟಾಣಿ ಶ್ವಾನ. ಅವರ ತಂದೆ ಆಗತಾನೇ ನಿಧನ ಹೊಂದಿದ್ದರು. ಆಗ ಇವರ ಪ್ರಪಂಚಕ್ಕೆ ಶ್ವಾನದ ಎಂಟ್ರಿ ಆಗಿತ್ತು.

‘ಇವನೇ ನನ್ನ ಪ್ರಪಂಚ. ತಂದೆ ತೀರಿಕೊಂಡಾಗ ಮಗು ರೂಪದಲ್ಲಿ ಬರ್ತಾರೆ ಎಂಬ ಮಾತಿದೆ. ನನ್ನ ಜೀವನದಲ್ಲಿ ಇವನು ಬಂದಿದ್ದಾನೆ. ನಾನು ಈತನಿಗೆ ತಾಯಿ ಆಗಿದೀನಿ. ನನಗೆ ಈತನೇ ಎಲ್ಲವೂ’ ಎಂದು ಅನುಪಮಾ ಗೌಡ ಹೇಳಿಕೊಂಡಿದ್ದಾರೆ. ಇವರ ಬಾಂಧವ್ಯ ನೋಡಿ ಎಲ್ಲರೂ ಅಚ್ಚರಿ ಹೊರಹಾಕಿದ್ದಾರೆ.

ಇದನ್ನೂ ಓದಿ: ‘ಅಡಲ್ಟ್ ಕಂಟೆಂಟ್ ಇಲ್ಲ’; ಅನುಪಮಾ ಪರಮೇಶ್ವರನ್ ನಟನೆಯ ಚಿತ್ರಕ್ಕೆ ಸಿಕ್ತು ಸ್ಪಷ್ಟನೆ

ಅನುಪಮಾ ಗೌಡ ಅವರು 2010ರ ಸಂದರ್ಭದಲ್ಲೇ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು. ‘ಬಿಗ್ ಬಾಸ್ ಕನ್ನಡ ಸೀಸನ್ 5’ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಅನುಪಮಾ ಕಾಣಿಸಿಕೊಂಡರು. ಈಗ ಅವರು ಕಲರ್ಸ್ ಕನ್ನಡದ ‘ಗಿಚ್ಚಿ ಗಿಲಿಗಿಲಿ 3’ನೇ ಸೀಸನ್​ಗೆ ಆ್ಯಂಕರ್ ಆಗಿದ್ದಾರೆ. ಈ ಮೂಲಕ ಎಲ್ಲರನ್ನೂ ಮನರಂಜಿಸುತ್ತಿದ್ದಾರೆ. ಹಿರಿತೆರೆ ಜೊತೆಗೂ ಅನುಪಮಾ ಗೌಡ ಅವರು ನಂಟು ಹೊಂದಿದ್ದಾರೆ. ‘ಲಂಕೇಶ್  ಪತ್ರಿಕೆ’, ‘ಆ ಕರಳಾ ರಾತ್ರಿ’, ‘ಪುಟ 109’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ