ಹೇಗಿದೆ ನೋಡಿ ಜಾನ್ವಿ ಕಪೂರ್-ಜೂನಿಯರ್ ಎನ್ಟಿಆರ್ ಜೋಡಿ; ಆ.5ಕ್ಕೆ ರೊಮ್ಯಾಂಟಿಕ್ ಗಿಫ್ಟ್
ಜಾನ್ವಿ ಕಪೂರ್ ಅವರಿಗೆ ದಕ್ಷಿಣ ಭಾರತದಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ಜೂನಿಯರ್ ಎನ್ಟಿಆರ್ ಜೊತೆ ಅವರು ‘ದೇವರ: ಪಾರ್ಟ್ 1’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಬ್ಬರು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವ ಹೊಸ ಹಾಡಿನ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಆಗಸ್ಟ್ 5ರಂದು ಈ ಸಾಂಗ್ ಬಿಡುಗಡೆ ಆಗಲಿದ್ದು, ಪೋಸ್ಟರ್ ಮೂಲಕ ಕೌತುಕ ಮೂಡಿಸಲಾಗಿದೆ.
ಟಾಲಿವುಡ್ನ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ಅವರು ‘ದೇವರ: ಪಾರ್ಟ್ 1’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಲು ಹಲವು ಕಾರಣಗಳು ಇವೆ. ನಟಿ ಜಾನ್ವಿ ಕಪೂರ್ ಅವರು ಈ ಸಿನಿಮಾ ಮೂಲಕ ದಕ್ಷಿಣ ಭಾರತಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಕೊರಟಾಲ ಶಿವ ಅವರ ನಿರ್ದೇಶನದಲ್ಲಿ ‘ದೇವರ: ಪಾರ್ಟ್ 1’ ಚಿತ್ರ ಮೂಡಿಬರುತ್ತಿದೆ. ಹಾಡುಗಳ ಮೂಲಕ ಸಿನಿಮಾದ ಪ್ರಚಾರ ಕಾರ್ಯ ಶುರು ಮಾಡಲಾಗಿದೆ. ಆಗಸ್ಟ್ 5ರಂದು ಈ ಸಿನಿಮಾದಿಂದ ಎರಡನೇ ಹಾಡು ರಿಲೀಸ್ ಆಗಲಿದೆ.
‘ದೇವರ: ಪಾರ್ಟ್ 1’ ಸಿನಿಮಾದ ಎರಡನೇ ಹಾಡಿನಲ್ಲಿ ಜೂನಿಯರ್ ಎನ್ಟಿಆರ್ ಮತ್ತು ಜಾನ್ವಿ ಕಪೂರ್ ಅವರು ರೊಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ಝಲಕ್ ತೋರಿಸಲು ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಅವರಿಬ್ಬರ ಜೋಡಿಯನ್ನು ನೋಡಿ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಆಗಿದೆ. ಇದು ಆ್ಯಕ್ಷನ್ ಸಿನಿಮಾ ಆಗಿದ್ದರೂ ಕೂಡ ಜಾನ್ವಿ ಕಪೂರ್ ಜೊತೆ ಜೂನಿಯರ್ ಎನ್ಟಿಆರ್ ಅವರ ರೊಮ್ಯಾಂಟಿಕ್ ಕೆಮಿಸ್ಟ್ರಿ ಹೇಗಿರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ‘ಈಗ ಅವರು ಹಿಂಬದಿಯ ಫೋಟೋ ತೆಗೆಯಲ್ಲ’: ಜಾನ್ವಿ ಕಪೂರ್ ನೇರಮಾತು
ಅನಿರುದ್ಧ್ ರವಿಚಂದರ್ ಅವರು ‘ದೇವರ: ಪಾರ್ಟ್ 1’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ತೆಲುಗಿನ ಜೊತೆ ಕನ್ನಡ, ಹಿಂದಿ, ತಮಿಳು ಮುಂತಾದ ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಎರಡು ಪಾರ್ಟ್ನಲ್ಲಿ ಕಥೆ ಹೇಳಲು ನಿರ್ದೇಶಕ ಕೊರಟಾಲ ಶಿವ ಪ್ಲ್ಯಾನ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್, ಜಾನ್ವಿ ಕಪೂರ್ ಜೊತೆ ಪ್ರಕಾಶ್ ರಾಜ್, ಬಾಬಿ ಡಿಯೋಲ್, ಸೈಫ್ ಅಲಿ ಖಾನ್ ಮುಂತಾದವರು ನಟಿಸುತ್ತಿದ್ದಾರೆ.
Sizzling Duo ka Love Dhamaka 🔥#DevaraSecondSingle on August 5th ❤️🔥#Devara #DevaraonSep27th pic.twitter.com/Yl8dAYNBg6
— Devara (@DevaraMovie) August 2, 2024
ಆಗಸ್ಟ್ 5ರಂದು ಬಿಡುಗಡೆ ಆಗಲಿರುವ ಹೊಸ ಹಾಡಿಗೆ ಬಾಲಿವುಡ್ನ ಬಾಸ್ಕೋ ಮಾರ್ಟಿಸ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ಪಠಾಣ್’, ‘ವಾರ್’, ‘ಫೈಟರ್’ ಮುಂತಾದ ಸಿನಿಮಾದ ಹಾಡುಗಳಿಗೆ ಅವರು ಕೊರಿಯೋಗ್ರಾಫ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರ ಕೊರಿಯೋಗ್ರಫಿಯಲ್ಲಿ ‘ದೇವರ: ಪಾರ್ಟ್ 1’ ಚಿತ್ರದ ರೊಮ್ಯಾಂಟಿಕ್ ಹಾಡು ಮೂಡಿಬಂದಿರುವುದರಿಂದ ಫ್ಯಾನ್ಸ್ ನಿರೀಕ್ಷೆ ಡಬಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.