ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದ ಅನುಪಮಾ ಕೈ ಹಿಡಿದ ನಟನೆ
Anupama Parameswaran Birthday: ಪುನೀತ್ ರಾಜ್ಕುಮಾರ್ ನಟನೆಯ ‘ನಟಸಾರ್ವಭೌಮ’ ಸಿನಿಮಾದಲ್ಲಿ ನಟಿಸಿದ್ದ ನಟಿ ಅನುಪಮಾ ಪರಮೇಶ್ವರನ್ ಕನ್ನಡಿಗರಿಗೆ ಚೆನ್ನಾಗಿಯೇ ಪರಿಚಿತ. ಕೇರಳದ ಈ ನಟಿ ಹೆಚ್ಚಾಗಿ ಮಿಂಚುತ್ತಿರುವುದು ತೆಲುಗು ಚಿತ್ರರಂಗದಲ್ಲಿ. ನಿರ್ದೇಶಕಿ ಆಗಬೇಕು ಎಂಬ ಆಸೆಯಿಂದ ಚಿತ್ರರಂಗಕ್ಕೆ ಬಂದ ಅನುಪಮಾ ಪರಮೇಶ್ವರನ್ಗೆ ಕೈ ಹಿಡಿದಿದ್ದು ಮಾತ್ರ ನಟನೆ.

ಅನುಪಮಾ ಪರಮೇಶ್ವರನ್ ಅವರಿಗೆ ಇಂದು (ಫೆಬ್ರವರಿ 18) ಬರ್ತ್ಡೇ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. 2015ರಲ್ಲಿ ಮಲಯಾಳಂ ಚಿತ್ರರಂಗದ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರು ಸ್ಟಾರ್ ನಟಿಯಾಗಿದ್ದಾರೆ. ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಿದೆ. ಗ್ಲಾಮರ್ ಆಗಿ ಗಮನ ಸೆಳೆಯುವುದರ ಜೊತೆಗೆ ಅವರು ನಟನೆಯಿಂದಲೂ ಭೇಷ್ ಎನಿಸಿಕೊಂಡಿದ್ದಾರೆ.
2015ರಲ್ಲಿ ‘ಪ್ರೇಮಂ’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ತಮಿಳು, ತೆಲುಗು ಕನ್ನಡ ಸಿನಿಮಾಗಳಲ್ಲೂ ನಟಿಸಿದರು. ಅವರು ದಕ್ಷಿಣದ ಬ್ಯುಸಿ ನಟಿಯರಲ್ಲಿ ಒಬ್ಬರು. ಅವರ ಜರ್ನಿ ಬಗ್ಗೆ ಇಲ್ಲಿದೆ ಮಾಹಿತಿ.
ಅನುಪಮಾ ಪರಮೇಶ್ವರನ್ ಅವರು ಹೀರೋಯಿನ್ ಆಗಿದ್ದು ಕೇವಲ 19ನೇ ವಯಸ್ಸಿಗೆ. ಮಲಯಾಳಂನ ‘ಪ್ರೇಮಂ’ ಅವರ ಬದುಕು ಬದಲಿಸಿತು. ಕಡಿಮೆ ಹೊತ್ತು ತೆರೆಮೇಲೆ ಕಾಣಿಸಿಕೊಂಡರೂ ಗಮನ ಸೆಳೆದರು. ಈ ಚಿತ್ರದಲ್ಲಿ ಅವರು ಮೇರಿ ಹೆಸರಿನ ಪಾತ್ರ ಮಾಡಿದ್ದರು. ಕಥಾ ನಾಯಕನ ಶಾಲಾ ಲವ್ ಸ್ಟೋರಿಯಲ್ಲಿ ಇವರು ಬರುತ್ತಾರೆ.
ಅನುಪಮಾ ಅವರು ನಟನೆಗೆ ಬರುವಾಗ ಇನ್ನೂ ಕಾಲೇಕ್ನಲ್ಲಿ ಓದುತ್ತಿದ್ದರು. ಇಂಗ್ಲಿಷನ್ಲ್ಲಿ ಬ್ಯಾಚುಲರ್ ಡಿಗ್ರೀ ಪಡೆಯುತ್ತಿದ್ದರು. ಅವರು ಕೊಟ್ಟಾಯಂನ ಸಿಎಂಎಸ್ ಕಾಲೇಜ್ನಲ್ಲಿ ಓದುತ್ತಿದ್ದರು. ಈ ಸಿನಿಮಾ ಸಿಕ್ಕ ಬಳಿಕ ಅವರಿಗೆ ಸಾಕಷ್ಟು ಆಫರ್ ಬಂದಿದ್ದರಿಂದ ಕಾಲೇಜ್ನ ಅರ್ಧಕ್ಕೆ ಬಿಡಬೇಕಾಯಿತು.
ಇದನ್ನೂ ಓದಿ:ಪ್ರತಿಷ್ಠಿತ ವೋಗ್ ಮ್ಯಾಗಜಿನ್ನಲ್ಲಿ ಮಿಂಚಿದ ಅನುಪಮಾ ಪರಮೇಶ್ವರನ್
ಅನುಪಮಾಗೆ ಸಿನಿಮಾ ಬಗ್ಗೆ ಸಾಕಷ್ಟು ಆಸಕ್ತಿ ಇತ್ತು. ಅವರು ‘ಮನಿಯರಳಿಯೆ ಅಶೋಕನ್’ ಸಿನಿಮಾಗೆ ಸಹಾಯಕ ನಿರ್ದೇಶಕಿ ಆಗಿ ಕೆಲಸ ಮಾಡಿದ್ದರು. ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರವನ್ನೂ ಮಾಡಿದ್ದರು. ಈ ಚಿತ್ರದ ಮೂಲಕ ಅವರು ಹೊಸ ಅನುಭವ ಪಡೆದರು. ಅನುಪಮಾ ಅವರಿಗೆ ದುಲ್ಖರ್ ಸಲ್ಮಾನ್ ಜೊತೆ ಒಳ್ಳೆಯ ಗೆಳೆತನ ಇದೆ.
ಅನುಪಮಾ ಅವರಿಗೆ ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಅವರ ಮನೆಯಲ್ಲಿ ಹಲವು ರೀತಿಯ ಪ್ರಾಣಿಗಳು ಇವೆ. ಇದನ್ನು ಅವರು ಪ್ರೀತಿಯಿಂದ ಸಾಕುತ್ತಾರೆ. ಅನುಪಮಾ ಅವರ ಪರಿಚಯ ಕನ್ನಡಿಗರಿಗೂ ಇದೆ. ಅವರು ಕನ್ನಡದ ‘ನಟಸಾರ್ವಭೌಮ’ ಚಿತ್ರದಲ್ಲಿ ಪುನೀತ್ ಜೊತೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಮೂಲಕ ಅವರು ಗಮನ ಸೆಳೆದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:15 am, Tue, 18 February 25