AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಂದರವಾಗಿ ಕಾಣಲು ಸುದೀಪ್ ಫಾಲೋ ಮಾಡೋ ಟೆಕ್ನಿಕ್ ಏನು?

Kichcha Sudeep: ಕಿಚ್ಚ ಸುದೀಪ್​ಗೆ 50ಕ್ಕೂ ಹೆಚ್ಚು ವಯಸ್ಸಾಗಿದೆ. ಆದರೆ ಈಗಲೂ ಅವರು ಫಿಟ್ ಆಗಿದ್ದಾರೆ. ಈಗ ನಡೆಯುತ್ತಿರುವ ಸಿಸಿಎಲ್​ನಲ್ಲಿ ಯುವಕರಂತೆ ಕ್ರೀಡಾಂಗಣವೆಲ್ಲ ಓಡಾಡುತ್ತಾ ಆಟವಾಡುತ್ತಿದ್ದಾರೆ. ಇಷ್ಟು ವಯಸ್ಸಾದರೂ ಇನ್ನೂ ಯಂಗ್ ಆಗಿ ಕಾಣುವುದು ಹೇಗೆ? ಫಿಟ್​ನೆಸ್ ಹಿಂದಿನ ಗುಟ್ಟೇನು ಎಂಬುದನ್ನು ಸುದೀಪ್ ಹೇಳಿದ್ದಾರೆ.

ಸುಂದರವಾಗಿ ಕಾಣಲು ಸುದೀಪ್ ಫಾಲೋ ಮಾಡೋ ಟೆಕ್ನಿಕ್ ಏನು?
Kichcha Sudeep
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 18, 2025 | 8:19 AM

Share

ಕಿಚ್ಚ ಸುದೀಪ್ ಅವರು ಅಭಿಮಾನಿಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ನಟನೆಯ ‘ಮ್ಯಾಕ್ಸ್’ ಸಿನಿಮಾ ಭರ್ಜರಿ ಗಳಿಕೆ ಮಾಡಿ ಬಾಕ್ಸ್ ಆಫೀಸ್ನಲ್ಲಿ ಹಿಟ್ ಎನಿಸಿಕೊಂಡಿದೆ. ಸುದೀಪ್ ಅವರು ಇಷ್ಟು ದೊಡ್ಡ ಯಶಸ್ಸನ್ನು ಇತ್ತೀಚಿಗಿನ ವರ್ಷಗಳಲ್ಲಿ ಕಂಡಿರಲೇ ಇಲ್ಲ. ಈ ಮಧ್ಯೆ ಅವರ ವಿವಿಧ ಹೇಳಿಕೆಗಳು ವೈರಲ್ ಆಗುತ್ತಾ ಇರುತ್ತವೆ. ಆ ಪೈಕಿ ಒಂದು ವಿಚಾರ ಸಾಕಷ್ಟು ಗಮನ ಸೆಳೆದಿದೆ.

ಕಿಚ್ಚ ಸುದೀಪ್ ಅವರ ವಯಸ್ಸು ಎಷ್ಟು ಎಂಬುದು ಎಲ್ಲಿಯೂ ಪಕ್ಕಾ ಇಲ್ಲ. ಸುದೀಪ್ ವಯಸ್ಸನ್ನು ರಿವೀಲ್ ಮಾಡಲು ಇಷ್ಟಪಡುವುದಿಲ್ಲ. ಆದರೆ, ಅವರಿಗೆ 50 ವರ್ಷ ತುಂಬಿ ಕೆಲವು ವರ್ಷಗಳು ಕಳೆದಿವೆ. ಈ ವಯಸ್ಸಲ್ಲೂ ಅವರು ಫಿಟ್ ಆಗಿದ್ದಾರೆ. ಅವರು ಸಖತ್ ಚಾರ್ಮಿಂಗ್ ಆಗಿ ಇದ್ದಾರೆ. ಇದಕ್ಕೆ ಸಹಾಯ ಮಾಡಿರೋದು ಏನು? ಈ ಬಗ್ಗೆ ಅವರು ಈ ಮೊದಲು ಮಾತನಾಡಿದ್ದರು. ಅಷ್ಟು ಸುಂದರವಾಗಿ ಕಾಣಲು ಸಹಾಯ ಆಗಿದ್ದು ಏನು ಎಂಬುದನ್ನು ವಿವರಿಸಿದ್ದರು.

‘ಸ್ನಾನ ಮಾಡಿದಮೇಲೆ, ಮಲಗುವಾಗ ಕ್ರೀಮ್ ಹಚ್ಚಲ್ಲ, ವರ್ಷಕ್ಕೆ ಮೂರು ದಿನ ತಲೆಗೆ ಎಣ್ಣೆ ಹಾಕಿದರೆ ಹೆಚ್ಚು. ಕ್ರೀಮ್, ಸ್ಕಿನ್ ಕೇರ್ ಮಾಡಲ್ಲ. ಸ್ನಾನ ಮಾಡಿ ಪೂಜೆ ಮಾಡಿ ನೇರವಾಗಿ ಶೂಟ್ ಹೋಗ್ತೀನಿ. ಸರಿಯಾದ ಸಮಯಕ್ಕೆ ಊಟ ಮಾಡುತ್ತೇನೆ. ದೇವರ ದಯೆಯಿಂದ ಸಿರಮ್ ಬಳಸುವ ಅವಶ್ಯಕತೆ ನನಗೆ ಬಂದಿಲ್ಲ. ಎಲ್ಲರೂ ಕ್ರೀಮ್ ತಂದುಕೊಡ್ತಾರೆ. ಎಲ್ಲವನ್ನೂ ಇಟ್ಟುಕೊಳ್ಳುತ್ತೇನೆ. ಅದನ್ನು 2 ದಿನ ಹಚ್ಚಿಕೊಳ್ಳುತ್ತೇನೆ. ಆಮೇಲೆ ಬಿಡುತ್ತೇನೆ’ ಎಂದಿದ್ದರು ಸುದೀಪ್.

ಇದನ್ನೂ ಓದಿಚಾಲೆಂಜ್ ಹಾಕಿ ‘ಸ್ವಾತಿ ಮುತ್ತು’ ಚಿತ್ರ ಮಾಡಿದ್ದ ಸುದೀಪ್

ಸುದೀಪ್ ಅವರು ಫಿಟ್ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರು ನಿತ್ಯ ವರ್ಕೌಟ್ ಮಾಡುತ್ತಾರೆ. ಅವರು ತಮ್ಮದೇ ಆದ ವರ್ಕೌಟ್ ಸೆಟ್ನ ಹೊಂದಿದ್ದಾರೆ. ಹೊರ ಭಾಗದಲ್ಲಿ ಶೂಟ್ ನಡೆದು ಅಲ್ಲಿ ಉಳಿದುಕೊಳ್ಳಬೇಕಾದರೆ ಜಿಮ್ ಸೆಟ್ನ ಅವರು ತೆಗೆದುಕೊಂಡು ಹೋಗುತ್ತಾರೆ. ಇದನ್ನು ಸಲ್ಮಾನ್ ಖಾನ್ ಅವರು ಗಿಫ್ಟ್ ಆಗಿ ಕೊಟ್ಟಿದ್ದರು ಎನ್ನಲಾಗಿದೆ. ನಿತ್ಯವೂ ಬಿಡದೇ ವರ್ಕೌಟ್ ಮಾಡೋದೇ ಸುದೀಪ್ ಅವರ ಫಿಟ್ನೆಸ್ ಗುಟ್ಟು ಎಂದು ಹೇಳಲಾಗುತ್ತಿದೆ. ಅವರು ‘ಬಿಲ್ಲ ರಂಗ ಭಾಷ’ ಚಿತ್ರಕ್ಕಾಗಿ ಬಾಡಿ ಬಿಲ್ಡ್ ಮಾಡಿಕೊಳ್ಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ