AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುನೀತ್ ಸ್ಟಾರ್ ಆಗಿ ಅದನ್ನೆಲ್ಲ ಮಾಡಬೇಕಿರಲಿಲ್ಲ’; ಭಾವುಕರಾಗಿ ಮಾತನಾಡಿದ ಅನುಪಮಾ ಪರಮೇಶ್ವರನ್

Puneeth Rajkumar: ಅನುಪಮಾ ಪರಮೇಶ್ವರನ್ ಅವರು ಪುನೀತ್ ರಾಜ್ ಕುಮಾರ್ ಅವರೊಂದಿಗೆ ‘ನಟಸಾರ್ವಭೌಮ’ ಚಿತ್ರದಲ್ಲಿ ನಟಿಸಿದ್ದರು. ಅವರ ನಟನಾ ಅನುಭವ ಮತ್ತು ಪುನೀತ್ ನಡುವಿನ ಬಲವಾದ ಬಾಂಡಿಂಗ್ ಬಗ್ಗೆ ಮಾತನಾಡಿದ್ದಾರೆ. ಪುನೀತ್ ಅವರ ಅದ್ಭುತ ಸರಳತೆ ಮತ್ತು ನಮ್ರತೆಯನ್ನು ಅವರು ಕೊಂಡಾಡಿದ್ದಾರೆ.

‘ಪುನೀತ್ ಸ್ಟಾರ್ ಆಗಿ ಅದನ್ನೆಲ್ಲ ಮಾಡಬೇಕಿರಲಿಲ್ಲ’; ಭಾವುಕರಾಗಿ ಮಾತನಾಡಿದ ಅನುಪಮಾ ಪರಮೇಶ್ವರನ್
ಪುನೀತ್​-ಅನುಪಮಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Aug 13, 2025 | 11:06 AM

Share

ಅನುಪಮಾ ಪರಮೇಶ್ವರನ್ ಅವರು ಈ ಮೊದಲು ಪುನೀತ್ ರಾಜ್​ಕುಮಾರ್ ಜೊತೆ ‘ನಟಸಾರ್ವಭೌಮ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿಯನ್ನು ಜನರು ಇಷ್ಟಪಟ್ಟರು. ಅನುಪಮಾ ಸೌಂದರ್ಯಕ್ಕೆ ಎಲ್ಲರೂ ಫಿದಾ ಆಗಿದ್ದರು. ಅವರಿಗೆ ಪುನೀತ್ ರಾಜ್​ಕುಮಾರ್ ಜೊತೆ ಒಳ್ಳೆಯ ಬಾಂಡ್ ಬೆಳೆದಿತ್ತು. ಈ ಬಾಂಡಿಂಗ್ ಬಗ್ಗೆ ಅವರು ಇತ್ತೀಚೆಗೆ ಮಾತನಾಡಿದ್ದಾರೆ. ಪುನೀತ್ ಸರಳತೆಯನ್ನು ಅನುಪಮಾ (Anupama)  ಕೊಂಡಾಡಿದ್ದಾರೆ ಎಂದೇ ಹೇಳಬಹುದು.

ಅನುಪಮಾ ಪರಮೇಶ್ವರನ್ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದರು. ಈ ಸಂದರ್ಶನದಲ್ಲಿ ಮಾತನಾಡುವಾಗ ಅವರಿಗೆ ‘ನಟಸಾರ್ವಭೌಮ’ ಚಿತ್ರದ ಶೂಟಿಂಗ್ ಅನುಭವಗಳು ನೆನಪಿಗೆ ಬಂದವು. ಅಲ್ಲದೆ, ಆ ಸಮಯದಲ್ಲಿ ಪುನೀತ್ ಅವರ ಸರಳತೆಯ ಪರಿಚಯ ಆಯಿತು ಮತ್ತು ಅವರು ಯಾವ ರೀತಿಯಲ್ಲಿ ಇರುತ್ತಿದ್ದರು ಎಂಬುದನ್ನು ಅವರು ವಿವರಿಸುವ ಕೆಲಸವನ್ನು ಮಾಡಿದರು.

ಇದನ್ನೂ ಓದಿ
Image
ಶ್ವಾನಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ರಾಜ್ ಹೇಳೋದೇನು?
Image
ಸಹೋದರನ ರೀತಿ ಕಾಣುತ್ತಿದ್ದ ಬೋನಿಯನ್ನೇ ವಿವಾಹ ಆಗಿದ್ದ ಶ್ರೀದೇವಿ
Image
‘ಕೂಲಿ’ ಹೆಸರಲ್ಲಿ ವಸೂಲಿ; ಹೇಳೋರೂ ಇಲ್ಲ, ಕೇಳೋರೂ ಇಲ್ಲ
Image
‘ಸು ಫ್ರಮ್ ಸೋ’ ಕಲೆಕ್ಷನ್​ನಲ್ಲಿ ವಿದೇಶಿಗರ ಪಾಲೆಷ್ಟು? ಪರಭಾಷೆಯವರದ್ದೆಷ್ಟು

‘ಪುನೀತ್  ಅವರು ಅದ್ಭುತ ವ್ಯಕ್ತಿ. ನಟಸಾರ್ವಭೌಮ ಚಿತ್ರವನ್ನು ಸಣ್ಣ ಜಾಗದಲ್ಲಿ ಶೂಟ್ ಮಾಡಲಾಗುತ್ತಿತ್ತು. ಅಲ್ಲಿ ಕುಳಿತುಕೊಳ್ಳಲು ಜಾಗವೇ ಇರಲಿಲ್ಲ. ಒಂದು ಕುರ್ಚಿ ಮಾತ್ರ ಇತ್ತು. ನನ್ನ ತಾಯಿ ಚೇರ್​ಮೇಲೆ ಕುಳಿತಿದ್ದರು. ಪುನೀತ್ ಬರುತ್ತಿದ್ದಂತೆ ನನ್ನ ತಾಯಿ ಎದ್ದುಕೊಂಡರು. ಆದರೆ, ಚೇರ್ ಮೇಲೆ ತಾಯಿಯನ್ನು ಕೂರಿಸಿ ಅವರು ಫುಟ್​ಪಾತ್​ ಮೇಲೆ ಹೋಗಿ ಕುಳಿತರು. ಸ್ಟಾರ್ ಆಗಿ ಇದನ್ನೆಲ್ಲ ಮಾಡುವ ಅಗತ್ಯ ಇರಲಿಲ್ಲ. ಈಗಿನ ಜನರೇಶನ್​ಗೆ ಈ ರೀತಿಯ ಮನಸ್ಥಿತಿ ಇಲ್ಲ’ ಎಂದು ಅನುಪಮಾ ಅವರು ನೇರ ಮಾತುಗಳಲ್ಲಿ ಹೇಳಿದರು.

ಅನುಪಮಾ ಮಾತು

ಪುನೀತ್ ಹಾಗೂ ಅನುಪಮಾ ಅವರ ಗೆಳೆತನ ಉತ್ತಮವಾಗಿತ್ತು. ಅವರು ನಿಧನ ಹೊಂದಿದ್ದಾರೆ ಎಂಬ ವಿಚಾರವನ್ನು ಅನುಪಮಾಗೆ ನಂಬೋಕೆ ಸಾಧ್ಯವೇ ಆಗಿರಲಿಲ್ಲ. ಅವರನ್ನು ಕಳೆದುಕೊಂಡು ಎಲ್ಲರೂ ಸಾಕಷ್ಟು ನೊಂದಿದ್ದಾರೆ. 2021ರ ಅಕ್ಟೋಬರ್​ನಲ್ಲಿ ಪುನೀತ್ ಅವರು ಹೃದಯಾಘಾತದಿಂದ ನಿಧನ ಹೊಂದಿದರು. ಅದೇ ದಿನ ಶಿವರಾಜ್​ಕುಮಾರ್ ನಟನೆಯ ‘ಬಜರಂಗಿ 2’ ಸಿನಿಮಾ ಕೂಡ ರಿಲೀಸ್ ಆಗಿತ್ತು.

ಇದನ್ನೂ ಓದಿ: ಬಗೆಬಗೆಯ ಕಾಸ್ಟ್ಯೂಮ್ ಧರಿಸಿ ಮಿಂಚಿದ ಅನುಪಮಾ ಪರಮೇಶ್ವರನ್

ಅನುಪಮಾ ಅವರು ಸದ್ಯ ದಕ್ಷಿಣ ಭಾರತದಲ್ಲಿ ಬ್ಯುಸಿ ಆಗಿದ್ದಾರೆ. ಅವರು ಆರಂಭದಲ್ಲಿ ಬೋಲ್ಡ್ ಪಾತ್ರಗಳನ್ನು ಮಾಡಲು ಸುತರಾಂ ಒಪ್ಪುತ್ತಾ ಇರಲಿಲ್ಲ. ಆದರೆ, ಇತ್ತೀಚೆಗೆ ಅವರು ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ಯಾವುದೇ ಮುಜುಗರ ಮಾಡಿಕೊಳ್ಳುತ್ತಿಲ್ಲ ಎನ್ನಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ