AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಗ್ನ​ ಫೋಟೋ ಹಂಚಿಕೊಂಡ ಅನುಪಮಾ ಪರಮೇಶ್ವರನ್​; ಇದರ ಹಿಂದಿದೆ ಒಂದೊಳ್ಳೇ ಉದ್ದೇಶ

Anupama Parameswaran: ಪೇಜ್​ ಒಂದರಲ್ಲಿ ಹಾಕಲಾದ ಪೋಸ್ಟ್​ಅನ್ನು ಅನುಪಮಾ ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ನ್ಯೂಡ್​ ಫೋಟೋ ಇದಾಗಿದ್ದು, ಈ ಬಗ್ಗೆ ಅವರು ಒಂದಷ್ಟು ವಿಚಾರಗಳನ್ನು ಬರೆದುಕೊಂಡಿದ್ದಾರೆ.

ನಗ್ನ​ ಫೋಟೋ ಹಂಚಿಕೊಂಡ ಅನುಪಮಾ ಪರಮೇಶ್ವರನ್​; ಇದರ ಹಿಂದಿದೆ ಒಂದೊಳ್ಳೇ ಉದ್ದೇಶ
ನ್ಯೂಡ್​ ಫೋಟೋ ಹಂಚಿಕೊಂಡ ಅನುಪಮಾ ಪರಮೇಶ್ವರನ್​; ಇದರ ಹಿಂದಿದೆ ಒಂದೊಳ್ಳೇ ಉದ್ದೇಶ
TV9 Web
| Edited By: |

Updated on: Jul 23, 2021 | 6:27 PM

Share

ನಟಿ ಅನುಪಮಾ ಪರಮೇಶ್ವರನ್​ ಅವರು ಯಾವಾಗಲೂ ತಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳೋಕೆ ಹಿಂಜರಿಯುವುದಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿರುವ ಅವರು ಅಭಿಮಾನಿಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅನುಪಮಾ ಬಗ್ಗೆ ಬರುವ ಕಮೆಂಟ್​ಗಳಿಗೆ ಅವರೇ ಉತ್ತರ ನೀಡುತ್ತಾರೆ. ಈಗ ಅನುಪಮಾ ಅವರು ಒಂದು ಮಹತ್ವದ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಪೇಜ್​ ಒಂದರಲ್ಲಿ ಹಾಕಲಾದ ಪೋಸ್ಟ್​ಅನ್ನು ಅನುಪಮಾ ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ನ್ಯೂಡ್​ ಫೋಟೋ ಇದಾಗಿದ್ದು, ಈ ಬಗ್ಗೆ ಅವರು ಒಂದಷ್ಟು ವಿಚಾರಗಳನ್ನು ಬರೆದುಕೊಂಡಿದ್ದಾರೆ. ‘ಮಹಿಳೆಯ ಬಣ್ಣ ಮತ್ತು ಅವರ ಗಾತ್ರದ ಆಧಾರದ ಮೇಲೆ ತಾರತಮ್ಯ ಮಾಡುವುದು ಸರಿಯಲ್ಲ. ಮಹಿಳೆಯರು ತೆಳ್ಳಗೆ ಹಾಗೂ ದಪ್ಪ ಇದ್ದಾರೆ ಅಥವಾ ಬಿಳಿ ಹಾಗೂ ಕಪ್ಪಗಿದ್ದಾರೆ ಎಂದು ಟೀಕಸಲಾಗುತ್ತಿದೆ ಎಂದು ಈ ಪೋಸ್ಟ್​ ಹೇಳುತ್ತಿದೆ. ಕೆಲವರು ಮಹಿಳೆಯರ ನೋಟವನ್ನು ನೋಡಿ ಅವರು ಹೇಗೆ ಎಂದು ನಿರ್ಧರಿಸುತ್ತಾರೆ. ಇದು ಸರಿಯಲ್ಲ’ ಎಂದಿದ್ದಾರೆ ಅನುಪಮಾ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಅವರು ಮಾಡಿದ್ದಾರೆ. ನಂತರ ಸ್ಟೋರಿಯಿಂದ ಈ ಫೋಟೋ ತೆಗೆದು ಹಾಕಲಾಗಿದೆ.

ಇತ್ತೀಚೆಗೆ ಅನುಪಮಾ ಇನ್​ಸ್ಟಾಗ್ರಾಮ್​ನಲ್ಲಿ ಆಸ್ಕ್​ ಮಿ ಎನಿಥಿಂಗ್​ ಸೆಷನ್​ ನಡೆಸಿದ್ದರು. ಈ ವೇಳೆ ಅಭಿಮಾನಿಗಳು ನಾನಾ ಪ್ರಶ್ನೆಗಳು ಕೇಳಿದ್ದರು. ಅದರಲ್ಲಿ ಓರ್ವ ಅಭಿಮಾನಿ ನೀವು ನಿಜವಾದ ಪ್ರೀತಿಯನ್ನು ನೋಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದ. ಇದಕ್ಕೆ ಉತ್ತರಿಸಿದ್ದ ಅನುಪಮಾ, ‘ನನಗೆ ನಿಜವಾದ ಪ್ರೀತಿಯೂ ಆಗಿದೆ ಮತ್ತು ನಿಜವಾದ ಬ್ರೇಕಪ್​ ಕೂಡ ಆಗಿದೆ’ ಎಂದಿದ್ದರು.

ಮಲಯಾಳಂ ಮಾತ್ರವಲ್ಲದೆ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲೂ ಅನುಪಮಾ ಗುರುತಿಸಿಕೊಂಡಿದ್ದಾರೆ.  ಪುನೀತ್ ರಾಜ್​ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾ ಮೂಲಕ ಅನುಪಮಾ ಕನ್ನಡಕ್ಕೂ ಕಾಲಿಟ್ಟರು. ಈ ಮೂಲಕ ಕನ್ನಡದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು.

ಇದನ್ನೂ ಓದಿ: ಅನುಪಮಾ ಪರಮೇಶ್ವರನ್​ ನಕಲಿ ಮಾರ್ಕ್ಸ್​ ಕಾರ್ಡ್​ ವೈರಲ್​; ಈ ಹಗರಣದ ಹಿಂದೆ ಯಾರೆಲ್ಲ ಇದ್ದಾರೆ?

ಬ್ರೇಕಪ್​ ನೋವಿನಲ್ಲಿ ನಟಸಾರ್ವಭೌಮ ನಟಿ; ಅಭಿಮಾನಿಗಳ ಎದುರು ಮೌನ ಮುರಿದ ಅನುಪಮಾ ಪರಮೇಶ್ವರನ್

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್