
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ಯಾವುದೇ ವೈಮನಸ್ಸು ಬಂದರೂ ಅದನ್ನು ಬಗೆ ಹರಿಸಿಕೊಂಡು ಮುಂದೆ ಸಾಗುತ್ತಿದ್ದಾರೆ. ಇತ್ತೀಚೆಗೆ ವಿರಾಟ್ ಕೊಹ್ಲಿ (Virat Kohli) ಅವರು ಅವನೀತ್ ಕೌರ್ ಅವರ ಬೋಲ್ಡ್ ಫೋಟೋ ಲೈಕ್ ಮಾಡಿ ಸುದ್ದಿ ಆಗಿದ್ದರು. ಈ ವಿಚಾರವಾಗಿ ಅವರು ಸ್ಪಷ್ಟನೆ ಕೂಡ ನೀಡಿದ್ದರು. ಇಷ್ಟೇ ಅಲ್ಲ, ಇನ್ಸ್ಟಾಗ್ರಾಮ್ ಗ್ಲಿಚ್ ಎಂದು ಹೇಳಿದ್ದರು. ಈ ಬಗ್ಗೆ ಟ್ರೋಲ್ ಕೂಡ ಆದರು. ಈಗ ವಿರಾಟ್ ಹಾಗೂ ಅನುಷ್ಕಾ ಮಧ್ಯೆ ಈ ವಿಚಾರಕ್ಕೆ ಮುನಿಸಾಯಿತೇ ಎನ್ನುವ ಪ್ರಶ್ನೆ ಮೂಡಿದೆ. ಈಗ ವೈರಲ್ ಆಗಿರೋ ವಿಡಿಯೋ ಇದಕ್ಕೆ ಸಾಕ್ಷಿ ಒದಗಿಸುವಂತಿದೆ.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇತ್ತೀಚೆಗೆ ಬೆಂಗಳೂರಿನ ಎಂಜಿ ರೋಡ್ನಲ್ಲಿರೋ ರೆಸ್ಟೋರೆಂಟ್ ಒಂದಕ್ಕೆ ತೆರಳಿದ್ದರು. ಈ ಸಂದರ್ಭದ ವಿಡಿಯೋನ ಈಗ ವೈರಲ್ ಮಾಡಲಾಗುತ್ತಿದೆ. ಕಾರಿನಿಂದ ಇಳಿಯುವಾಗ ಕೊಹ್ಲಿ ಬಂದು ಅನುಷಾ ಅವರ ಕೈ ಹಿಡಿಯಲು ಹೋದರು. ಆದರೆ, ಇದಕ್ಕೆ ಅನುಷ್ಕಾ ಕೇರೇ ಮಾಡಲಿಲ್ಲ. ಅವರು ಇಳಿದು ನೇರವಾಗಿ ರೆಸ್ಟೋರೆಂಟ್ ಒಳಗೆ ಹೋದರು. ಇದು ಕೆಲವರಿಗೆ ದೊಡ್ಡದಾಗಿ ಕಾಣಿಸಿದೆ.
Virat Kohli & @AnushkaSharma Seen At Lupa Restaurant In MG Road, Bengaluru.🤍
.
.
.#Virushka #RCB #IPL25 @imVkohli pic.twitter.com/8e7XcmesUO— virat_kohli_18_club (@KohliSensation) May 6, 2025
ಈ ವಿಡಿಯೋ ನೋಡಿದ ಬಳಿಕ ಅನುಷ್ಕಾ ಹಾಗೂ ವಿರಾಟ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತುಗಳನ್ನು ಕೆಲವರು ಆಡಿದ್ದಾರೆ. ಅನುಷ್ಕಾ ಹಾಗೂ ವಿರಾಟ್ ಯಾವಾಗಲೂ ಕೈ ಕೈ ಹಿಡಿದು ಸಾಗುತ್ತಾರೆ. ಆದರೆ, ಈ ಸಂದರ್ಭದಲ್ಲಿ ಅವರು ಆ ರೀತಿ ಮಾಡಿಲ್ಲ ಅನ್ನೋದು ವಿಶೇಷ. ಇನ್ನೂ ಕೆಲವರು, ಇಬ್ಬರ ಮಧ್ಯೆ ಎಲ್ಲವೂ ಸರಿ ಇದೆ ಎಂಬ ಮಾತನ್ನು ಹೇಳಿದ್ದಾರೆ.
ಇದನ್ನೂ ಓದಿ: ಅನುಷ್ಕಾ ಕೈಗೆ ಮುತ್ತು; ಕೊಹ್ಲಿನ ಜೋಕರ್ ಎಂದಿದ್ದ ರಾಹುಲ್ ವಿಡಿಯೋ ವೈರಲ್
ಅನುಷ್ಕಾ ಚಿತ್ರರಂಗದವರು. ಅವರು ಸಾಕಷ್ಟು ವಿಶಾಲವಾಗಿ ಯೋಚಿಸುತ್ತಾರೆ. ಪತಿ ಯಾವುದೋ ನಟಿಯ ಫೋಟೋ ಲೈಕ್ ಮಾಡಿದರು ಎಂಬ ಕಾರಣಕ್ಕೆ ಸಿಟ್ಟು ಮಾಡಿಕೊಂಡರು ಎಂಬುದರಲ್ಲಿ ಅರ್ಥವಿಲ್ಲ ಎಂಬುದು ಅನೇಕರ ಅಭಿಪ್ರಾಯ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.