‘ನಾನು ನನ್ನ ತಂದೆಯನ್ನೂ ನಂಬುವುದಿಲ್ಲ’; ನಾಲ್ಕು ಗೋಡೆಗಳ ನಡುವೆ ಆದ ಕರಾಳ ಅನುಭವ ಬಿಚ್ಚಿಟ್ಟ ಕಿರುತೆರೆ ನಟಿ
ವ್ಯಕ್ತಿಯೋರ್ವ ಯುವ ನಟ-ನಟಿಯರಿಗೆ ಅವಕಾಶ ಕೊಡಿಸುತ್ತಿದ್ದಾನೆ ಎನ್ನುವ ವಿಚಾರ ತಿಳಿಯಿತು. ಹೀಗಾಗಿ ನಾನು ರಾಂಚಿಗೆ ಹೋದೆ ಎಂದು ಮಾತು ಆರಂಭಿಸಿದ್ದಾರೆ ಆ ನಟಿ.

ಮೀ ಟೂ ವಿಚಾರ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಖ್ಯಾತ ನಿರ್ದೇಶಕರು, ನಿರ್ಮಾಪಕರು ಹಾಗೂ ನಟರ ಹೆಸರು ಇದರಲ್ಲಿ ಕೇಳಿ ಬಂದಿದೆ. ಈ ಅಭಿಯಾನ ಇನ್ನೂ ಕೊನೆಗೊಂಡಿಲ್ಲ. ಒಬ್ಬರಲ್ಲ ಒಬ್ಬರು ನಟಿಯರು ತಮಗಾದ ಕಹಿ ಅನುಭವವನ್ನು ಮಾಧ್ಯಮದ ಮುಂದೆ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ಹಿಂದಿ ಕಿರುತೆರೆ ನಟಿ ಆರಾಧನಾ ಶರ್ಮಾ ಅವರು ತಮಗಾದ ಕಹಿ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.
ಆಂಗ್ಲ ಮಾಧ್ಯಮವೊಂದರ ಜತೆ ಮಾತನಾಡಿರುವ ಆರಾಧನಾ, ‘ಆ ಘಟನೆಯನ್ನು ನಾನು ನನ್ನ ಜೀವನದಲ್ಲೇ ಮರೆಯುವುದಿಲ್ಲ. ನಾಲ್ಕು ವರ್ಷಗಳ ಹಿಂದಿನ ಘಟನೆ. ಆಗ ನಾನು ಪುಣೆಯಲ್ಲಿ ಓದುತ್ತಿದೆ. ಜತೆಗೆ ಮಾಡೆಲಿಂಗ್ ಕೂಡ ಮಾಡುತ್ತಿದ್ದೆ. ಈ ವೇಳೆ ನನ್ನ ಊರಾದ ರಾಂಚಿಯಲ್ಲಿ ವ್ಯಕ್ತಿಯೋರ್ವ ಯುವ ನಟ-ನಟಿಯರಿಗೆ ಅವಕಾಶ ಕೊಡಿಸುತ್ತಿದ್ದಾನೆ ಎನ್ನುವ ವಿಚಾರ ತಿಳಿಯಿತು. ಹೀಗಾಗಿ ನಾನು ರಾಂಚಿಗೆ ಹೋದೆ’ ಎಂದು ಮಾತು ಆರಂಭಿಸಿದ್ದಾರೆ.
‘ಕೆಲ ಪಾತ್ರಗಳಿಗೆ ನಾನು ಕಲಾವಿದರ ಆಯ್ಕೆ ಮಾಡುತ್ತಿದ್ದೇನೆ ಎಂದು ಆತ ಮೊದಲ ಭೇಟಿಯಲ್ಲಿ ಹೇಳಿದೆ. ಒಂದು ರೂಮ್ಗೆ ಕರೆದ. ಸ್ಕ್ರಿಪ್ಟ್ ರೀಡಿಂಗ್ ಮಾಡಬೇಕು ಎಂದ. ನಾನು ತೆರಳಿದೆ. ಇಬ್ಬರೇ ಕೂತಿದ್ದೆವು. ಆಗ, ಆತ ನನ್ನನ್ನು ಮುಟ್ಟೋಕೆ ಆರಂಭಿಸಿದೆ. ಏನಾಗುತ್ತಿದೆ ಎನ್ನುವುದು ನನಗೆ ಗೊತ್ತಾಗಲಿಲ್ಲ. ನಂತರ ಆತನನ್ನು ದೂಡಿ ಅಲ್ಲಿಂದ ಓಡಿ ಬಂದೆ. ಈವರೆಗೆ ನಾನು ಇದನ್ನು ಎಲ್ಲಿಯೂ ಹೇಳಿಕೊಂಡಿಲ್ಲ’ ಎಂದಿದ್ದಾರೆ ಅವರು.
ಈ ಘಟನೆ ಅವರ ಮೇಲೆ ತುಂಬಾನೇ ಪ್ರಭಾವ ಬೀರಿದೆಯಂತೆ. ‘ಈ ಕಹಿ ಘಟನೆ ನನ್ನ ಬದುಕಿನಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ನನಗೆ ಪುರುಷರ ಮೇಲೆ ನಂಬಿಕೆ ಅನ್ನೋದು ಹೊರಟು ಹೋಗಿದೆ. ಪುರುಷರ ಜತೆ ರೂಮ್ನಲ್ಲಿ ಇರೋಕೆ ಭಯವಾಗುತ್ತದೆ. ನನ್ನ ತಂದೆಯ ಜತೆಯೂ ನನಗೆ ಇರಲು ಆಗುತ್ತಿಲ್ಲ. ಏಕೆಂದರೆ ನಂಬಿಕೆಯೇ ಬರುತ್ತಿಲ್ಲ. ಎಷ್ಟೇ ಕ್ಲೋಸ್ ಇದ್ದರೂ ಯಾವುದೇ ಪುರುಷರು ನನ್ನನ್ನು ಟಚ್ ಮಾಡೋಕೆ ಬಂದರೆ ಅದಕ್ಕೆ ಅವಕಾಶ ನೀಡುವುದಿಲ್ಲ. ಇದನ್ನು ಆಗಲೇ ಹೇಳಬೇಕು ಎಂದುಕೊಂಡಿದ್ದೆ. ಆದರೆ, ಕುಟುಂಬದವರು ಇದಕ್ಕೆ ಅವಕಾಶ ನೀಡಿರಲಿಲ್ಲ’ ಎಂದಿದ್ದಾರೆ ಆರಾಧನಾ.
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಧಾರಾವಾಹಿಯಲ್ಲಿ ಆರಾಧಾನ ಕಾಣಿಸಿಕೊಂಡಿದ್ದರು. ಇದಲ್ಲದೆ, ಸ್ಪ್ಲಿಟ್ ವಿಲ್ಲಾ ರಿಯಾಲಿಟಿ ಶೋನಲ್ಲೂ ಆರಾಧಾನ ನಟಿಸಿದ್ದರು.
ಇದನ್ನೂ ಓದಿ: ರಿಯಾಲಿಟಿ ಶೋನಲ್ಲೇ ನಟಿಗೆ ಪ್ರಪೋಸ್ ಮಾಡಿದ್ದ ಕಿರುತೆರೆ ನಟ; ಲಾಕ್ಡೌನ್ನಿಂದ ಮುರಿದು ಬಿತ್ತು ಸಂಬಂಧ
ಬಾಲಿವುಡ್ನಲ್ಲಿ ಸ್ಟಾರ್ ಆದಮೇಲೂ ಸುಶಾಂತ್ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?