
ಸಿನಿಪ್ರಿಯರಿಗೆ ಸಂಕ್ರಾಂತಿ ಸಖತ್ ವಿಶೇಷ. ಈ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತವೆ. 2024ರ ಸಂಕ್ರಾಂತಿ ಸಂದರ್ಭದಲ್ಲಿ ತೆಲುಗಿನಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ‘ಗುಂಟೂರು ಖಾರಂ’, ‘ಸೈಂಧವ್’, ‘ಈಗಲ್’, ‘ನಾ ಸಾಮಿ ರಂಗ’ (Na Sami Ranga Movie) ಮತ್ತು ‘ಹನುಮಾನ್’ ಚಿತ್ರಗಳು ಸಂಕ್ರಾಂತಿ ಸಂದರ್ಭದಲ್ಲಿ ಬಿಡುಗಡೆಗೆ ರೆಡಿ ಆಗಿವೆ. ಈ ಚಿತ್ರದಲ್ಲಿ ನಟಿಸಿದ ನಾಯಕಿಯರಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಕನ್ನಡದ ನಟಿ ಶ್ರೀಲೀಲಾ ಅವರು ಸದ್ಯ ಟಾಲಿವುಡ್ನಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ಅಲ್ಲಿ ಯಶಸ್ಸು ಸಿಕ್ಕಿದೆ. ಆದರೆ, ‘ಸ್ಕಂದ, ‘ಎಕ್ಸ್ಟ್ರಾ ಆರ್ಡಿನರಿ ಮ್ಯಾನ್’ ಸಿನಿಮಾಗಳು ಸೋತಿವೆ. ಇದರಿಂದ ಅವರಿಗೆ ಹಿನ್ನಡೆ ಆಗಿದೆ. ಅವರಿಗೆ ಒಂದು ದೊಡ್ಡ ಗೆಲುವು ಬೇಕಿದೆ. ‘ಗುಂಟೂರು ಖಾರಂ’ ಸಿನಿಮಾ ಮೂಲಕ ಅವರು ದೊಡ್ಡ ಗೆಲುವು ಕಾಣುವ ಕನಸು ಕಾಣುತ್ತಿದ್ದಾರೆ. ಮಹೇಶ್ ಬಾಬು ನಟನೆಯ ಈ ಚಿತ್ರಕ್ಕೆ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನ ಇದೆ. ಈ ಸಿನಿಮಾ ಮೂಲಕ ಅವರು ದೊಡ್ಡ ಗೆಲುವು ನಿರೀಕ್ಷಿಸುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ ನಟಿ ಆಶಿಕಾ ರಂಗನಾಥ್. ಅವರು ‘ನಾ ಸಾಮಿ ರಂಗ’ ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ ಜೊತೆ ನಟಿಸಿದ್ದಾರೆ. ಈ ಚಿತ್ರ ಹಿಟ್ ಆದರೆ ಟಾಲಿವುಡ್ನಲ್ಲಿ ಅವರ ಬೇಡಿಕೆ ಹೆಚ್ಚಲಿದೆ. ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ವಿಶೇಷ ಸಾಂಗ್ಗಳಲ್ಲೂ ಹೆಜ್ಜೆ ಹಾಕಿದ್ದಾರೆ. ಗ್ಲಾಮರಸ್ ಫೋಟೋಗಳ ಮೂಲಕ ಅವರು ಗಮನ ಸೆಳೆಯುತ್ತಾರೆ. ‘ನಾ ಸಾಮಿ ರಂಗ’ ಚಿತ್ರದಲ್ಲಿ ರುಕ್ಸರ್ ದಿಲ್ಲೋನ್ ಕೂಡ ನಟಿಸಿದ್ದಾರೆ. ಅವರಿಗೂ ಗೆಲ್ಲಬೇಕಾದ ಅನಿವಾರ್ಯತೆ ಇದೆ.
ದಗ್ಗುಬಾಟಿ ವೆಂಕಟೇಶ್, ಶ್ರದ್ಧಾ ಶ್ರೀನಾಥ್, ಆರ್ಯ, ನವಾಜುದ್ದೀನ್ ಸಿದ್ದಿಕಿ ಮೊದಲಾದವರು ‘ಸೈಂಧವ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ಗೆ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ.
ಅಮೃತಾ ಅಯ್ಯರ್ ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷ ಕಳೆದಿದೆ. ಅವರಿಗೆ ದೊಡ್ಡ ಗೆಲುವು ಬೇಕಾಗಿದೆ. ‘ಹನುಮಾನ್’ ಚಿತ್ರದ ಮೂಲಕ ಅವರು ಗೆಲುವು ಕಾಣುವ ಕನಸು ಕಂಡಿದ್ದಾರೆ. ಈ ಚಿತ್ರದಲ್ಲಿ ಮೀನಾಕ್ಷಿ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಆಧುನಿಕ ಹಾಗೂ ಪುರಣಾದ ಕಥೆಯ ಮಿಶ್ರಣ ಆಗಿದೆ. ‘ಬಿಗಿಲ್’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರು.
ಇದನ್ನೂ ಓದಿ: ನಟಿ ಅನುಪಮಾ ಪರಮೇಶ್ವರನ್ ಮನೆಯಲ್ಲಿ ಅದ್ದೂರಿಯಾಗಿದೆ ದೀಪಾವಳಿ ಹಬ್ಬ
ಅನುಪಮಾ ಪರಮೇಶ್ವರನ್ ಅವರು 2015ರಲ್ಲಿ ತೆರೆಕಂಡ ‘ಪ್ರೇಮಂ’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು. ಕನ್ನಡ, ತಮಿಳು, ತೆಲುಗಿನಲ್ಲಿ ಅವರು ನಟಿಸಿದ್ದಾರೆ. ‘ಡಿಜೆ ಟಿಳ್ಳು’ ಸೀಕ್ವೆಲ್ ‘ಟಿಳ್ಳು ಸ್ಕ್ವೇರ್’ನಲ್ಲಿ ಅನುಪಮಾ ನಟಿಸಿದ್ದಾರೆ. ಅವರು ಈ ಚಿತ್ರದ ಮೂಲಕ ಗೆಲುವು ಕಾಣುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ