AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಂಡವ್​​ಗೆ ಚಪ್ಪಾಳೆ ನೀಡಿ ಮೂರು ಕಾರಣ ಕೊಟ್ಟ ಕಿಚ್ಚ ಸುದೀಪ್

ತಾಂಡವ್ ಕ್ಷಮತೆ ಇರುವ ಸ್ಪರ್ಧಿ ಆದರೆ ತಮ್ಮ ತಾಳ್ಮೆ, ಪರರಿಗಾಗಿ ಮರುಗುವ ವ್ಯಕ್ತಿತ್ವದಿಂದ ಆಟದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರುತಿಸಿಕೊಳ್ಳಲು ಆಗಿರಲಿಲ್ಲ. ಆದರೆ ಈ ವಾರ ನಡೆದ ಟಾಸ್ಕ್​​​ನಲ್ಲಿ ಅವರಿಗೆ ಕ್ರಿಯೇಟಿವ್ ಆಗಿ ಯೋಚಿಸುವ, ಯೋಜನೆ ಹಾಕುವ, ನಾಯಕನಂತೆ ಎಲ್ಲರನ್ನು ಜೊತೆಗೆ ಕೊಂಡೊಯ್ಯುವ ಅವಕಾಶ ಸಿಕ್ಕಿತ್ತು. ಎಲ್ಲದಕ್ಕಿಂತಲೂ ಹೆಚ್ಚಾಗಿ ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳುವ ಅವಕಾಶ ಸಿಕ್ಕಿತ್ತು. ಅದನ್ನು ಅವರು ಬಳಸಿಕೊಂಡಿದ್ದಾರೆ. ಅದಕ್ಕೆ ತಕ್ಕ ಬಹುಮಾನವೂ ಅವರಿಗೆ ದೊರಕಿದೆ.

ತಾಂಡವ್​​ಗೆ ಚಪ್ಪಾಳೆ ನೀಡಿ ಮೂರು ಕಾರಣ ಕೊಟ್ಟ ಕಿಚ್ಚ ಸುದೀಪ್
Bigg Boss Kannada 13
ಮಂಜುನಾಥ ಸಿ.
|

Updated on:Oct 24, 2026 | 11:16 PM

Share

ತಾಂಡವ್ ರಾಮ್, ಬಿಗ್​​ಬಾಸ್ ಮನೆಯಲ್ಲಿ ಹಲವರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸ್ಪರ್ಧಿ. ಒಂದು ಬಾರಿ ಹೊರಗೆ ಹೋಗಿ ಒಳಗೆ ಸಹ ಬಂದಿದ್ದಾರೆ. ತಾಂಡವ್ ಕ್ಷಮತೆ ಇರುವ ಸ್ಪರ್ಧಿ ಆದರೆ ತಮ್ಮ ತಾಳ್ಮೆ, ಪರರಿಗಾಗಿ ಮರುಗುವ ವ್ಯಕ್ತಿತ್ವದಿಂದ ಆಟದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರುತಿಸಿಕೊಳ್ಳಲು ಆಗಿರಲಿಲ್ಲ. ಆದರೆ ಈ ವಾರ ನಡೆದ ಟಾಸ್ಕ್​​​ನಲ್ಲಿ ಅವರಿಗೆ ಕ್ರಿಯೇಟಿವ್ ಆಗಿ ಯೋಚಿಸುವ, ಯೋಜನೆ ಹಾಕುವ, ನಾಯಕನಂತೆ ಎಲ್ಲರನ್ನು ಜೊತೆಗೆ ಕೊಂಡೊಯ್ಯುವ ಅವಕಾಶ ಸಿಕ್ಕಿತ್ತು. ಎಲ್ಲದಕ್ಕಿಂತಲೂ ಹೆಚ್ಚಾಗಿ ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳುವ ಅವಕಾಶ ಸಿಕ್ಕಿತ್ತು. ಅದನ್ನು ಅವರು ಬಳಸಿಕೊಂಡಿದ್ದಾರೆ. ಅದಕ್ಕೆ ತಕ್ಕ ಬಹುಮಾನವೂ ಅವರಿಗೆ ದೊರಕಿದೆ.

ತಾಂಡವ್ ಅವರು ಈ ವಾರ ಲೂಟಿಕೋರರ ಗುಂಪಿನ ನಾಯಕ ಆಗಿದ್ದರು. ಅದ್ಭುತವಾಗಿ ಎಲ್ಲವನ್ನೂ ಯೋಜನೆ ಮಾಡಿ ಟಾಸ್ಕ್​​ನಲ್ಲಿ ಗೆದ್ದರು. ಸುದೀಪ್ ಅವರು ವಿಡಿಯೋ ಹಾಕಿ ತೋರಿಸುವವರೆಗೆ ಎಷ್ಟೋ ಕಾವಲುಗಾರರಿಗೆ ತಾಂಡವ್ ಮಾಸ್ಟರ್ ಪ್ಲ್ಯಾನ್ ಅರ್ಥವೇ ಆಗಿರಲಿಲ್ಲ. ತಾಂಡವ್ ಆಡಿರುವ ರೀತಿಯನ್ನು ವಾರಾಂತ್ಯದಲ್ಲಿ ನೋಡಿ ಎಲ್ಲರೂ ಅವಾಕ್ಕಾದರು. ತಾಂಡವ್ ಅನ್ನು ‘ಸೋಮಾರಿ, ದಡ್ಡ ಕ್ಯಾಪ್ಟನ್‘ ಎಂದೆಲ್ಲ ಟೀಕೆ ಮಾಡಿದ್ದ ಗಾನವಿ ಸಹ ‘ಹೀರೋ’ ಎಂದು ಕರೆದಿದ್ದು ವಿಶೇಷ.

ಎಲ್ಲದಕ್ಕಿಂತಲೂ ವಿಶೇಷವಾಗಿದ್ದು ಸುದೀಪ್ ಅವರು ತಾಂಡವ್ ಬಗ್ಗೆ ಹೇಳಿದ ಮಾತುಗಳು. ತಾಂಡವ್​​ಗೆ ನಿರೀಕ್ಷೆಯಂತೆ ಕಿಚ್ಚನ ಚಪ್ಪಾಳೆ ನೀಡಿದ ಸುದೀಪ್, ಮೂರು ಅಂಶಗಳನ್ನು ಪರಿಗಣಿಸಿ ತಮಗೆ ಚಪ್ಪಾಳೆ ಕೊಡುತ್ತಿರುವುದಾಗಿ ಹೇಳಿದರು. ಮೊದಲ ಕಾರಣವಾಗಿ ‘ನೀವು ಬಹಳ ಒಳ್ಳೆಯ ಗೆಳೆಯ, ನಿಮ್ಮ ಗೆಳೆಯರ ಪರವಾಗಿ ಏನೇ ಆದರೂ ನೀವು ನಿಂತುಕೊಳ್ಳುತ್ತೀರಿ. ಎಂಥಹಾ ಸಂದರ್ಭದಲ್ಲಿಯೂ ಸಹ ನೀವು ನಿಮ್ಮ ಗೆಳೆಯನನ್ನು ಬಿಟ್ಟುಕೊಟ್ಟಿಲ್ಲ. ಎದುರಿನಿಂದ ಅದೇ ಗೆಳೆತನ ಬರದೇ ಇದ್ದಾಗಲೂ ನೀವು ತಲೆ ಕೆಡಿಸಿಕೊಳ್ಳಲಿಲ್ಲ. ಅಲ್ಲಿ ನೀವು ದೊಡ್ಡವರಾಗಿ ಕಂಡಿರಿ, ನೀವು ಮನುಷ್ಯತ್ವ ಇರುವ ವ್ಯಕ್ತಿ’ ಎಂದರು ಕಿಚ್ಚ.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಫ್ಯಾಷನ್ ಶೋ, ಸೌಂದರ್ಯಾ-ಆಸಿಯಾ ಕ್ಯಾಟ್ ವಾಕ್: ವಿಡಿಯೋ

ಎರಡನೇ ಕಾರಣವಾಗಿ ‘ನೀವು ಅವಮಾನವನ್ನು ಮೌನವಾಗಿ ಸ್ವೀಕರಿಸುವ ರೀತಿ ವಿಭಿನ್ನವಾದುದು. ಎಲಿಮಿನೇಷನ್ ಸಮಯದಲ್ಲಿ, ನಾಮಿನೇಷನ್ ಸಮಯದಲ್ಲಿ ನಿಮ್ಮ ಬಗ್ಗೆ ಸತತ ಟೀಕೆ ಬರುತ್ತಿದ್ದರೂ ಸಹ ಅದನ್ನು ಸ್ವೀಕರಿಸಿ, ಅದಕ್ಕೆ ತಕ್ಕಂತೆ ನಿಮ್ಮನ್ನು ನೀವು ಅಳವಡಿಸಿಕೊಳ್ಳುವ ರೀತಿ ಚೆನ್ನಾಗಿದೆ. ಈ ವಾರ ನೀವು ಅದ್ಭುತವಾಗಿ ಆಟ ಆಡಿದಿರಿ. ನೀವು ಚೆನ್ನಾಗಿ ಆಡುತ್ತಿದ್ದರೂ ನಿಮಗೆ ಅವಮಾನ ಆಗುತ್ತಿದೆ ಎಂದು ಗೊತ್ತಾದರೂ ಕೊನೆಯ ಫಲಿತಾಂಶಕ್ಕಾಗಿ ಎಲ್ಲವನ್ನೂ ತಡೆದುಕೊಂಡ ರೀತಿ ಚೆನ್ನಾಗಿತ್ತು ಹಾಗಾಗಿ ನಿಮಗೆ ಕಿಚ್ಚನ ಚಪ್ಪಾಳೆ ಎಂದರು.

ಸುದೀಪ್ ಅವರ ಹೊಗಳಿಕೆ ಕೇಳಿ ತಾಂಡವ್ ಭಾವುಕರಾಗಿಬಿಟ್ಟರು. ಈ ವಾರವೆಲ್ಲ ಅವರು ಇತರೆ ಸ್ಪರ್ಧಿಗಳಿಂದ ‘ಡಬ್ಬ’, ‘ಕೈಲಾಗದವನು’, ‘ಅನರ್ಹ’ ಇತ್ಯಾದಿ-ಇತ್ಯಾದಿ ಮಾತುಗಳನ್ನು ಕೇಳಿದ್ದರು. ಆದರೆ ಎಲ್ಲರ ಮಾತನ್ನು ಸುಳ್ಳುಮಾಡಿ ಗೇಮ್ ಚೇಂಜರ್ ಎನಿಸಿಕೊಂಡರು ತಾಂಡವ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:02 pm, Sat, 24 October 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​
ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ: ಬೆಳಗಾವಿಯಲ್ಲಿ ಹೈಡ್ರಾಮಾ
ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ: ಬೆಳಗಾವಿಯಲ್ಲಿ ಹೈಡ್ರಾಮಾ
ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಏಳನೇ ದಿನವೂ ಸಾವಿರಾರು ಭಕ್ತರು
ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಏಳನೇ ದಿನವೂ ಸಾವಿರಾರು ಭಕ್ತರು
‘ರಾಮಾಯಣ’ ಸಿನಿಮಾ ನೋಡಿದ ಯಶ್ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ: ವಿಡಿಯೋ
‘ರಾಮಾಯಣ’ ಸಿನಿಮಾ ನೋಡಿದ ಯಶ್ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ: ವಿಡಿಯೋ
ನಂಜನಗೂಡಿನ ಆಕಳ ಸುತ್ತಮುತ್ತ ನಾಲ್ಕು ಹುಲಿಗಳ ಓಡಾಟ
ನಂಜನಗೂಡಿನ ಆಕಳ ಸುತ್ತಮುತ್ತ ನಾಲ್ಕು ಹುಲಿಗಳ ಓಡಾಟ
ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆ: ಬಾರ್​​ಗೆ ನುಗ್ಗಿದ ನೀರು
ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆ: ಬಾರ್​​ಗೆ ನುಗ್ಗಿದ ನೀರು
‘ರಾಮಾಯಣ’ ಸಿನಿಮಾನ ಸಂಭ್ರಮಿಸಿದ ಫ್ಯಾನ್ಸ್; ಯಶ್ ನಟನೆಗೆ ಫುಲ್ ಮಾರ್ಕ್ಸ್
‘ರಾಮಾಯಣ’ ಸಿನಿಮಾನ ಸಂಭ್ರಮಿಸಿದ ಫ್ಯಾನ್ಸ್; ಯಶ್ ನಟನೆಗೆ ಫುಲ್ ಮಾರ್ಕ್ಸ್