AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶತಮಾನದ ಮೂರ್ತಿಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟಿದ್ದ ಸ್ವಾಮೀಜಿ: ಬೆಂಗಳೂರು ಪೊಲೀಸರ ತನಿಖೆಯಲ್ಲಿ ಸತ್ಯ ಬಯಲು, ಬಾಳೆಕುದ್ರು ಶ್ರೀ ನಾಪತ್ತೆ

ಉಡುಪಿ ಬಾಳೆಕುದ್ರು ಮಠದ ಪ್ರಾಚೀನ ವಿಗ್ರಹಗಳನ್ನು ಬೆಂಗಳೂರಿನ ಕಂಪನಿಗೆ ಮಾರಾಟ ಮಾಡಿದ ಆರೋಪದಲ್ಲಿ ಎಫ್‌ಐಆರ್ ದಾಖಲಾಗುತ್ತಿದ್ದಂತೆ ವಾಸುದೇವ ಸದಾಶಿವಶ್ರಮ ಸ್ವಾಮೀಜಿ ಪರಾರಿಯಾಗಿದ್ದಾರೆ. ಈ ಬಗ್ಗೆ ಬೆಂಗಳೂರು ಪೊಲೀಸರು ತನಿಖೆಯನ್ನು ನಡೆಸಿ, ಕಂಪನಿಯ ಮಾಲೀಕನನ್ನು ಬಂಧನ ಮಾಡಿದ್ದಾರೆ. ಇದೀಗ ಸ್ವಾಮೀಜಿಗಾಗಿ ಹುಟುಕಾಟ ಕಾರ್ಯಚರಣೆ ಮುಂದುವರಿದಿದೆ.

ಶತಮಾನದ ಮೂರ್ತಿಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟಿದ್ದ ಸ್ವಾಮೀಜಿ: ಬೆಂಗಳೂರು ಪೊಲೀಸರ ತನಿಖೆಯಲ್ಲಿ ಸತ್ಯ ಬಯಲು, ಬಾಳೆಕುದ್ರು ಶ್ರೀ ನಾಪತ್ತೆ
, ಬಾಳೆಕುದ್ರು ಮಠ
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on:Nov 05, 2026 | 3:08 PM

Share

ಬ್ರಹ್ಮಾವರ, ನ.5: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿರುವ ಶತಮಾನಗಳ ಪರಂಪರೆಯ ಭಾಗವತ ಸಂಪ್ರದಾಯದ ಪ್ರಸಿದ್ಧ ‘ಬಾಳೆಕುದ್ರು ಮಠ’ದ ಶತಮಾನಗಳ ಇತಿಹಾಸವಿರುವ ದೇವತಾ ವಿಗ್ರಹಗಳನ್ನು ಕದ್ದು ಮಾರಾಟ ಮಾಡಿದ ಭಾರಿ ಅಕ್ರಮ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಠಾಧೀಶರಾದ ಶ್ರೀ ವಾಸುದೇವ ಸದಾಶಿವಶ್ರಮ ಸ್ವಾಮೀಜಿ ಹಾಗೂ ಮಠದ ಸಿಬ್ಬಂದಿಗಳ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ, ಸ್ವಾಮೀಜಿ ಮಠಕ್ಕೆ ಬೀಗ ಜಡಿದು ನಾಪತ್ತೆಯಾಗಿದ್ದಾರೆ.\

ಬಾಳೆಕುದ್ರು ಮಠದಲ್ಲಿ ಅನಾದಿ ಕಾಲದಿಂದಲೂ ಪೂಜಿಸಲ್ಪಡುತ್ತಿದ್ದ ನರಸಿಂಹದೇವರು, ಗಣಪತಿ, ಹಾಗೂ ಮಹಿಷಮರ್ದಿನಿ ಸೇರಿದಂತೆ ಒಟ್ಟು ಆರು ಅತ್ಯಮೂಲ್ಯ ಪ್ರಾಚೀನ ವಿಗ್ರಹಗಳು ಹಠಾತ್ತಾಗಿ ಮಠದಿಂದ ನಾಪತ್ತೆಯಾಗಿದ್ದವು. ಈ ಬಗ್ಗೆ ಶಿಷ್ಯಂದಿರು ಮತ್ತು ಭಕ್ತರು ಸ್ವಾಮೀಜಿಯವರನ್ನು ಪ್ರಶ್ನಿಸಿದಾಗ, “ಹಳೆಯ ಮೂರ್ತಿಗಳನ್ನು ವಿಸರ್ಜನೆ ಮಾಡಿ, ನೂತನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ” ಎಂದು ನಂಬಿಸಿದ್ದರು. ಆದರೆ, ನಾಪತ್ತೆಯಾಗಿದ್ದ ಪ್ರಾಚೀನ ವಿಗ್ರಹಗಳ ಫೋಟೋಗಳನ್ನು ಅಂತಾರಾಷ್ಟ್ರೀಯ ಆನ್‌ಲೈನ್ ವೆಬ್‌ಸೈಟ್ ಒಂದರಲ್ಲಿ ಮಾರಾಟಕ್ಕಿಡಲಾಗಿತ್ತು. ಇದನ್ನು ಗಮನಿಸಿದ ಮಠದ ಶಿಷ್ಯ ಜಗದೀಶ್ ಐತಾಳ್ ಎಂಬುವರು ಆಘಾತಗೊಂಡು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರು ಪೊಲೀಸರ ತನಿಖೆ: ಕಂಪನಿ ಮಾಲೀಕ ನಾಗೇಂದ್ರ ಪ್ರಸಾದ್ ಬಂಧನ

ಜಗದೀಶ್ ಐತಾಳ್ ಅವರು ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ನೀಡಿದ ಬೆನ್ನಲ್ಲೇ, ಸೈಬರ್ ಹಾಗೂ ಸೋಶಿಯಲ್ ಮೀಡಿಯಾ ಲಿಂಕ್‌ಗಳ ಆಧಾರದ ಮೇಲೆ ಬೆಂಗಳೂರು ಪೊಲೀಸರು ತನಿಖೆ ತೀವ್ರಗೊಳಿಸಿದರು. ತನಿಖೆಯ ವೇಳೆ ಸ್ವಾಮೀಜಿ ಈ ಅತ್ಯಮೂಲ್ಯ ದೇವತಾ ಮೂರ್ತಿಗಳನ್ನು ಬೆಂಗಳೂರಿನ ಪ್ರಸಿದ್ಧ ‘Idols’ ಆಂಟಿಕ್ ಕಲಾಕೃತಿ ಕಂಪನಿಗೆ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಪೊಲೀಸರು ಈ ಕಂಪನಿ ಮಾಲೀಕ ನಾಗೇಂದ್ರ ಪ್ರಸಾದ್ ಎಂಬುವವರನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಿದಾಗ, ಸ್ವಾಮೀಜಿ ಹಾಗೂ ಮಠದ ಸಿಬ್ಬಂದಿಗಳ ಶಾಮೀಲಾತಿಯ ಅಸಲಿ ಸತ್ಯ ಬಯಲಾಗಿದೆ. ಈ ಪ್ರಕರಣದಲ್ಲಿ ಅನಿಲ್ ಕುಮಾರ್, ಜಯಲಕ್ಷ್ಮಿ, ಶ್ರೇಯಸ್ ಸೇರಿದಂತೆ ಇತರರು ಭಾಗಿಗಳಾಗಿದ್ದು, ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಇದನ್ನೂ ಓದಿ: ರೈತರಿಗೆ ದೀಪಾವಳಿ ಗಿಫ್ಟ್: ಬರ ಪರಿಹಾರ ಹೆಚ್ಚಳ, ಮೊದಲ ಕಂತಿನಲ್ಲಿ 2500 ರೂ. ರಿಲೀಸ್

ಶಿಷ್ಯಂದಿರ ಜೊತೆ ಸಂಘರ್ಷ ಮತ್ತು ಶೃಂಗೇರಿ ಶ್ರೀಗಳ ಅವಹೇಳನ

ಬಾಳೆಕುದ್ರು ಮಠದಲ್ಲಿ ಕಳೆದ ಅನೇಕ ವರ್ಷಗಳಿಂದ ಸ್ವಾಮೀಜಿ ಹಾಗೂ ಶಿಷ್ಯ ಸಮುದಾಯದ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಕಳೆದ ಒಂದೆರಡು ತಿಂಗಳುಗಳಿಂದ ಈ ಸಂಘರ್ಷ ತಾರಕಕ್ಕೇರಿತ್ತು. ಶೃಂಗೇರಿ ಮಠದ ಜಗದ್ಗುರು ಶ್ರೀಗಳನ್ನು ಬಾಳೆಕುದ್ರು ಸ್ವಾಮೀಜಿ ಅವಹೇಳನ ಮಾಡಿದ್ದಾರೆ ಎಂಬ ಕಾರಣಕ್ಕೆ ಭಕ್ತರು ಹಾಗೂ ಶಿಷ್ಯಂದಿರು ಸ್ವಾಮೀಜಿ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದರು. ಇದೀಗ ಶತಮಾನದ ವಿಗ್ರಹಗಳನ್ನೇ ಮಾರಾಟ ಮಾಡಿರುವುದು ಸಾಬೀತಾಗುತ್ತಿದ್ದಂತೆ, ಬಂಧನದ ಭೀತಿಯಿಂದ ಶ್ರೀ ವಾಸುದೇವ ಸದಾಶಿವಶ್ರಮ ಸ್ವಾಮೀಜಿ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಸ್ವಾಮೀಜಿಯವರ ಪತ್ತೆಗೆ ಬಲೆ ಬೀಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Thu, 5 November 26

Follow Us
ಪ್ರಜ್ವಲ್ ಅಮೀನ್​, ಉಡುಪಿ
ಪ್ರಜ್ವಲ್ ಅಮೀನ್​, ಉಡುಪಿ

ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read More
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​
ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ: ಬೆಳಗಾವಿಯಲ್ಲಿ ಹೈಡ್ರಾಮಾ
ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ: ಬೆಳಗಾವಿಯಲ್ಲಿ ಹೈಡ್ರಾಮಾ
ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಏಳನೇ ದಿನವೂ ಸಾವಿರಾರು ಭಕ್ತರು
ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಏಳನೇ ದಿನವೂ ಸಾವಿರಾರು ಭಕ್ತರು
‘ರಾಮಾಯಣ’ ಸಿನಿಮಾ ನೋಡಿದ ಯಶ್ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ: ವಿಡಿಯೋ
‘ರಾಮಾಯಣ’ ಸಿನಿಮಾ ನೋಡಿದ ಯಶ್ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ: ವಿಡಿಯೋ
ನಂಜನಗೂಡಿನ ಆಕಳ ಸುತ್ತಮುತ್ತ ನಾಲ್ಕು ಹುಲಿಗಳ ಓಡಾಟ
ನಂಜನಗೂಡಿನ ಆಕಳ ಸುತ್ತಮುತ್ತ ನಾಲ್ಕು ಹುಲಿಗಳ ಓಡಾಟ
ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆ: ಬಾರ್​​ಗೆ ನುಗ್ಗಿದ ನೀರು
ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆ: ಬಾರ್​​ಗೆ ನುಗ್ಗಿದ ನೀರು
‘ರಾಮಾಯಣ’ ಸಿನಿಮಾನ ಸಂಭ್ರಮಿಸಿದ ಫ್ಯಾನ್ಸ್; ಯಶ್ ನಟನೆಗೆ ಫುಲ್ ಮಾರ್ಕ್ಸ್
‘ರಾಮಾಯಣ’ ಸಿನಿಮಾನ ಸಂಭ್ರಮಿಸಿದ ಫ್ಯಾನ್ಸ್; ಯಶ್ ನಟನೆಗೆ ಫುಲ್ ಮಾರ್ಕ್ಸ್