Bigg Boss Kannada: ಬಿಗ್ ಬಾಸ್ ಆಟ ಗೆದ್ದಿದ್ದು ರಾಜೀವ್; ಆದರೆ ಎಲ್ಲರ ಮನ ಗೆದ್ದಿದ್ದು ಶುಭಾ ಪೂಂಜಾ
BBK8: ಕೊನೇ ಸುತ್ತಿನಲ್ಲಿ ರಾಜೀವ್ ಮತ್ತು ಶುಭಾ ಪೂಂಜಾ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅದರಲ್ಲಿ ರಾಜೀವ್ ಅವರು ತಮ್ಮ ಸ್ವಾರ್ಥ ಸಾಧಿಸಿದರು.

ಬಿಗ್ ಬಾಸ್ ಮನೆಯಲ್ಲಿ ನಟಿ ಶುಭಾ ಪೂಂಜಾ ಅವರು ಡಿಫರೆಂಟ್ ಆಗಿ ಗುರುತಿಸಿಕೊಂಡಿದ್ದಾರೆ. ಜಗಳ, ಕಿರಿಕ್ ಏನೇ ಇದ್ದರೂ ಆ ಕ್ಷಣಕ್ಕೆ ಮಾತ್ರ ಎಂಬುದು ಅವರ ಪಾಲಿಸಿ. ಆದರೆ ಟಾಸ್ಕ್ ವಿಚಾರ ಬಂದಾಗ ಅವರು ಯಾವುದೇ ಕಲ್ಮಶ ಇಲ್ಲದೇ ಆಟ ಆಡುತ್ತಾರೆ. ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ನಡೆದ ಒಂದು ಘಟನೆಯೇ ಈ ಮಾತಿಗೆ ಸಾಕ್ಷಿ.
ಸುದೀಪ್ ಇಲ್ಲದೇ ಇರುವ ಕಾರಣ ಡಿಫರೆಂಟ್ ಆದಂತಹ ಒಂದು ಟಾಸ್ಕ್ ನೀಡುವ ಮೂಲಕ ವೀಕೆಂಡ್ ಎಪಿಸೋಡ್ಗಳನ್ನು ಮುಗಿಸಲಾಯಿತು. ಗೋಲ್ಡನ್ ಪಾಸ್ ಪಡೆಯಲು ನೀಡಲಾಗಿದ್ದ ಟಾಸ್ಕ್ನಲ್ಲಿ ಎಲ್ಲ ಸದಸ್ಯರ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಆದರೆ ಅದರಲ್ಲಿ ಒಂದು ಟ್ವಿಸ್ಟ್ ಕೂಡ ಇತ್ತು. ಬೇರೆಯವರನ್ನು ಸೇವ್ ಮಾಡುವ ಸಲುವಾಗಿ ಎಲ್ಲರೂ ಆಡಬೇಕಿತ್ತು. ತಾವು ಚೆನ್ನಾಗಿ ಆಡದೇ ಇದ್ದರೆ ಬೇರೆಯವರು ಸೋಲುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೂ ಸಹ ಬಹುತೇಕ ಸ್ಪರ್ಧಿಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಿದರು.
ಕೊನೇ ಸುತ್ತಿನಲ್ಲಿ ರಾಜೀವ್ ಮತ್ತು ಶುಭಾ ಪೂಂಜಾ ನಡುವೆ ಪೈಪೋಟಿ ಏರ್ಪಟ್ಟಿತ್ತು. ಶುಭಾ ಚೆನ್ನಾಗಿ ಆಡಿದರೆ ರಾಜೀವ್ ಸೇವ್ ಆಗುತ್ತಾರೆ. ಅದೇ ರೀತಿ, ರಾಜೀವ್ ಚೆನ್ನಾಗಿ ಆಡಿದರೆ ಶುಭಾ ಪೂಂಜಾ ಸೇವ್ ಆಗುತ್ತಾರೆ ಎಂಬುದು ಸ್ಪಷ್ಟವಾಗಿತ್ತು. ಹಾಗಿದ್ದರೂ ಸಹ, ಕೊನೇ ಹಂತದವರೆಗೂ ಶುಭಾ ಚೆನ್ನಾಗಿ ಆಡುವ ಮೂಲಕ ರಾಜೀವ್ನನ್ನು ಸೇವ್ ಮಾಡಿದರು.
ಆದರೆ ರಾಜೀವ್ ತಮ್ಮ ಸ್ವಾರ್ಥ ಸಾಧಿಸಿದರು. ಟಾಸ್ಕ್ ವಿಚಾರದಲ್ಲಿ ಸ್ವಲ್ಪ ವೀಕ್ ಎನಿಸಿಕೊಂಡಿದ್ದ ಶುಭಾ ಪೂಂಜಾ ಅವರನ್ನು ಹಿಮ್ಮೆಟ್ಟಿಸಿ ಆಡಬಹುದಾದ ಎಲ್ಲ ಅವಕಾಶವನ್ನು ರಾಜೀವ್ ಕೈ ಚೆಲ್ಲಿದರು. ಆ ಮೂಲಕ ಶುಭಾಗೆ ಗೋಲ್ಡನ್ ಪಾಸ್ ಸಿಗುವುದನ್ನು ಅವರು ಬೇಕಂತಲೇ ತಪ್ಪಿಸಿದರು. ಈ ಘಟನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆ ಆಗುತ್ತಿದೆ.
ಈ ರೀತಿ ಆಟವ ಮೂಲಕ ರಾಜೀವ್ ಅವರು ಬಿಗ್ ಬಾಸ್ನ ಟಾಸ್ಕ್ ಗೆದ್ದಿರಬಹುದು. ಆದರೆ ಅವರು ಕ್ರೀಡಾ ಸ್ಫೂರ್ತಿ ಉಳಿಸಿಕೊಳ್ಳಲಿಲ್ಲ. ಆದರೆ ಶುಭಾ ಪೂಂಜಾ ಟಾಸ್ಕ್ನಲ್ಲಿ ಸೋತಿರಬಹುದು. ಆದರೆ ಅಂತಿಮವಾಗಿ ಎಲ್ಲರ ಹೃದಯ ಗೆದ್ದಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಬಿಗ್ ಬಾಸ್ನಲ್ಲಿ 7 ವಾರಗಳು ಕಳೆದಿವೆ. 8ನೇ ವಾರದ ಆಟಕ್ಕೆ ಎಲ್ಲ ಸ್ಪರ್ಧಿಗಳು ಸಜ್ಜಾಗಿದ್ದಾರೆ.
ಇದನ್ನೂ ಓದಿ: Bigg Boss Kannada: ಮಂಜು ಪಾವಗಡ ಅಲ್ಲ, ಬಿಗ್ ಬಾಸ್ ಗೆಲ್ಲೋದು ಇವರು!