Bigg Boss Kannada Elimination: ಮೊದಲ ವಾರವೇ ಟಿಕ್​ಟಾಕ್​ ಸ್ಟಾರ್​ ಧನುಶ್ರೀಯನ್ನು ಟಾರ್ಗೆಟ್​ ಮಾಡಿದ್ದೇಕೆ ಬಿಗ್​ ಬಾಸ್​?

Bigg Boss Kannada Updates : ಬಿಗ್​ ಬಾಸ್​ ಮನೆಯೊಳಗೆ ಮೊದಲ ಸ್ಪರ್ಧಿಯಾಗಿ ಕಾಲಿಟ್ಟಿದ್ದ ಟಿಕ್​ ಟಾಕ್​ ಸ್ಟಾರ್​ ಧನುಶ್ರೀ ಅವರಿಗೆ ಮೊದಲ ವಾರವೇ ಹಿನ್ನಡೆ ಆಗಿದೆ. ಇನ್ನುಳಿದವರಿಗೆ ಪೈಪೋಟಿ ನೀಡುವಲ್ಲಿ ಅವರು ಸೋತಿದ್ದಾರೆ.

Bigg Boss Kannada Elimination: ಮೊದಲ ವಾರವೇ ಟಿಕ್​ಟಾಕ್​ ಸ್ಟಾರ್​ ಧನುಶ್ರೀಯನ್ನು ಟಾರ್ಗೆಟ್​ ಮಾಡಿದ್ದೇಕೆ ಬಿಗ್​ ಬಾಸ್​?
ಧನುಶ್ರೀ
Follow us
ರಾಜೇಶ್ ದುಗ್ಗುಮನೆ
| Updated By: ರಶ್ಮಿ ಕಲ್ಲಕಟ್ಟ

Updated on: Mar 07, 2021 | 4:29 PM

ನೂರು ದಿನಗಳನ್ನು ಪೂರೈಸಿ ವಿನ್ನರ್​ ಆಗಬೇಕು ಎಂಬ ಆಸೆ ಇಟ್ಟುಕೊಂಡೇ ಎಲ್ಲರೂ ಬಿಗ್​ ಬಾಸ್​ ಮನೆ ಪ್ರವೇಶಿಸುತ್ತಾರೆ. ಆದರೆ ಸೂಕ್ತ ಪೈಪೋಟಿ ನೀಡದಿದ್ದರೆ ಮೊದಲ ವಾರವೇ ಮನೆಯಿಂದ ಹೊರಗೆ ಬರಬೇಕಾದ ಸಂದರ್ಭ ಎದುರಾಗುತ್ತದೆ. ಟಿಕ್​ ಟಾಕ್​ ಮೂಲಕ ಫೇಮಸ್​ ಆಗಿದ್ದ ಧನುಶ್ರೀ ಅವರು ಮೊದಲ ವಾರವೇ ಎಮಿಲಿನೇಟ್​ ಆಗಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಪ್ರಸ್ತುತ ಈ ಎಪಿಸೋಡ್​ನ ಶೂಟಿಂಗ್​ನಲ್ಲಿ ಕಿಚ್ಚ ಸುದೀಪ್​ ಪಾಲ್ಗೊಂಡಿದ್ದಾರೆ.

ಶನಿವಾರವೇ ಸೇಫ್​ ಆಗಿದ್ದ ಶುಭಾ, ವಿಶ್ವನಾಥ್​ ಈ ವಾರ ರಘು, ನಿರ್ಮಲಾ ಚೆನ್ನಪ್ಪ, ಶುಭಾ ಪೂಂಜಾ, ವಿಶ್ವನಾಥ್​, ಧನುಶ್ರೀ ನಾಮಿನೇಟ್​ ಆಗಿದ್ದರು. ಆದರೆ ಶನಿವಾರದ ಸಂಚಿಕೆಯಲ್ಲಿ ವಿಶ್ವನಾಥ್​ ಮತ್ತು ಶುಭಾ ಪೂಂಜಾ ಸೇಫ್​ ಆದರು. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಸಮಾಧಾನಪಟ್ಟುಕೊಂಡರು. ಇನ್ನುಳಿದಂತೆ ಧನುಶ್ರೀ, ನಿರ್ಮಲಾ ಚೆನ್ನಪ್ಪ ಮತ್ತು ರಘು ಅವರಿಗೆ ಢವಢವ ಮುಂದುವರಿದಿತ್ತು.

ಕಳಪೆ ಹಣೆಪಟ್ಟಿ ಹೊತ್ತ ಧನುಶ್ರೀ ಟಾಸ್ಕ್​ಗಳಲ್ಲಿ ಧನುಶ್ರೀಯ ಪರ್ಫಾಮೆನ್ಸ್​ ತುಂಬ ಕಳಪೆ ಆಗಿತ್ತು. ನಾಮಿನೇಷನ್​ನಿಂದ ತಪ್ಪಿಸಿಕೊಳ್ಳಲು ಎರಡೆರಡು ಸಾರಿ ಅವಕಾಶ ಸಿಕ್ಕರೂ ಕೂಡ ಅವರು ಸರಿಯಾಗಿ ಆಟ ಆಡಲಿಲ್ಲ. ಅವರ ಈ ಸೋಲನ್ನು ಮನೆಯ ಎಲ್ಲ ಸದಸ್ಯರೂ ಒಪ್ಪಿಕೊಂಡರು. ಎಲ್ಲರೂ ಒಕ್ಕೊರಲಿನಿಂದ ಧನುಶ್ರೀಗೆ ‘ಕಳಪೆ’ ಎಂಬ ಹಣೆಪಟ್ಟಿ ಕಟ್ಟಿದರು. ಪರಿಣಾಮವಾಗಿ ಅವರನ್ನು ಜೈಲಿಗೂ ಕಳಿಸಲಾಗಿತ್ತು.

ಮನರಂಜನೆಯಲ್ಲಿ ಮುಗ್ಗರಿಸಿದ ಟಿಕ್​ಟಾಕ್​ ಪ್ರತಿಭೆ ಬಿಗ್​ ಬಾಸ್​ನಲ್ಲಿ ಬರೀ ಟಾಸ್ಕ್​ ಗೆದ್ದರೆ ಸಾಲದು. ಜನರಿಗೆ ಮನರಂಜನೆ ಕೂಡ ನೀಡಬೇಕು. ಅದಕ್ಕೆ ಯಾವ ಮಾರ್ಗ ಬೇಕಾದರೂ ಅನುಸರಿಸಬಹುದು. ಕೆಲವರು ಕಾಮಿಡಿ ಮಾಡ್ತಾರೆ, ಇನ್ನು ಕೆಲವರು ಕಿರಿಕ್​ ಮಾಡ್ತಾರೆ. ಹಾಡು ಹೇಳಿ ಕ್ಲಿಕ್​ ಆದವರೂ ಇದ್ದಾರೆ. ಆದರೆ ಧನುಶ್ರೀ ಈ ಯಾವುದನ್ನೂ ಮಾಡಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಟಿಕ್​ಟಾಕ್​ ಮಾಡುತ್ತಿದ್ದ ಅವರ ಪ್ರತಿಭೆ ಬಿಗ್​ ಬಾಸ್​ ಮನೆಯಲ್ಲಿ ಉಪಯೋಗಕ್ಕೆ ಬಂದಿಲ್ಲ. ಹಾಗಾಗಿ ಅವರಿಗೆ ಹಿನ್ನಡೆ ಆಗಿದೆ.

ಇದನ್ನೂ ಓದಿ: Bigg Boss Kannada : ಬಿಗ್​ ಬಾಸ್​ ಮನೆಯಲ್ಲಿ ದರ್ಶನ್​ ಹಾಡು ಯಾಕೆ ಪ್ಲೇ ಆಗಲ್ಲ? ಸುದೀಪ್​ಗೆ ಪ್ರಶ್ನೆ ಎಸೆದ ‘ಡಿ ಬಾಸ್’​ ಫ್ಯಾನ್ಸ್​!

Bigg Boss Kannada: ಈ ಬಾರಿ ಬಿಗ್​ ಬಾಸ್​ ಗೆಲ್ಲುವ ಸ್ಪರ್ಧಿ ಇವರೇ.. ಎಂದು ಭವಿಷ್ಯ ನುಡಿದ ಶಂಕರ್​ ಅಶ್ವತ್ಥ್​! ಆದರೆ