AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮಿರ್ ಹಾಗೂ ಗೌರಿ ವಯಸ್ಸಿನ ಅಂತರ ಇಷ್ಟೊಂದಾ? ಇಬ್ಬರಿಗೂ ಪರಸ್ಪರ ಇಷ್ಟವಾದ ಗುಣವೇನು?

ಆಮಿರ್ ಖಾನ್ ಅವರು ತಮ್ಮ 60ನೇ ಹುಟ್ಟುಹಬ್ಬದಂದು ಹೊಸ ಗೆಳತಿ ಗೌರಿಯನ್ನು ಪರಿಚಯಿಸಿದ್ದಾರೆ. ಇಬ್ಬರ ನಡುವೆ 25 ವರ್ಷಗಳ ಹಿಂದಿನ ಪರಿಚಯವಿದ್ದರೂ, ಒಂದೂವರೆ ವರ್ಷಗಳ ಹಿಂದೆ ಮತ್ತೆ ಸಂಪರ್ಕವಾಯಿತು. ಗೌರಿ ಅವರು ಆಮಿರ್‌ರಲ್ಲಿ ಶಾಂತಿ ಮತ್ತು ದಯೆ ಇಷ್ಟವಾಯಿತು ಎಂದು ಹೇಳಿದ್ದಾರೆ. ಗೌರಿ ದಕ್ಷಿಣ ಭಾರತೀಯ ಚಲನಚಿತ್ರಗಳ ಅಭಿಮಾನಿ ಮತ್ತು ಆಮಿರ್‌ರ ಚಲನಚಿತ್ರಗಳನ್ನು ಇತ್ತೀಚೆಗೆ ವೀಕ್ಷಿಸಿದ್ದಾರೆ.

ಆಮಿರ್ ಹಾಗೂ ಗೌರಿ ವಯಸ್ಸಿನ ಅಂತರ ಇಷ್ಟೊಂದಾ? ಇಬ್ಬರಿಗೂ ಪರಸ್ಪರ ಇಷ್ಟವಾದ ಗುಣವೇನು?
ಆಮಿರ್-ಗೌರಿ
ರಾಜೇಶ್ ದುಗ್ಗುಮನೆ
|

Updated on:Mar 15, 2025 | 1:43 PM

Share

ಬಾಲಿವುಡ್​ನ ಸ್ಟಾರ್ ಹೀರೋ ಆಮಿರ್ ಖಾನ್ ಅವರು ಸಿನಿಮಾ ರಂಗದಲ್ಲಿ ಯಶಸ್ಸು ಕಂಡಿರಬಹುದು. ಆದರೆ, ಪ್ರೀತಿ ವಿಚಾರದಲ್ಲಿ ವಿಫಲತೆ ಕಂಡಿದ್ದೇ ಹೆಚ್ಚು. ಅವರ ಎರಡು ವಿವಾಹಗಳು ಕೊನೆ ಆಗಿವೆ. ಈಗ ಆಮಿರ್​ ಖಾನ್ ಅವರಿಗೆ ಹೊಸ ಗರ್ಲ್​ಫ್ರೆಂಡ್ ಸಿಕ್ಕಿದ್ದಾರೆ. ಗೌರಿ (Gauri) ಅನ್ನೋದು ಅವರ ಹೆಸರು. ತಮ್ಮ 60ನೇ ವರ್ಷದ ಜನ್ಮದಿನದ ಅಂಗವಾಗಿ ಅವರು ಹೊಸ ಗೆಳತಿಯನ್ನು ಪರಿಚಯಿಸಿದ್ದಾರೆ. ಈಗ ಗೌರಿ ಅವರು ಆಮಿರ್ ಖಾನ್ ಅವರಲ್ಲಿ ಇಷ್ಟವಾದ ವಿಚಾರ ಯಾವುದು ಎಂಬುದನ್ನು ರಿವೀಲ್ ಮಾಡಿದ್ದಾರೆ.

ಪರಸ್ಪರ ಇಷ್ಟವಾದ ವಿಚಾರ

ಆಮಿರ್ ಖಾನ್ ಅವರಿಗೆ ಗೌರಿಯಲ್ಲಿ ಇಷ್ಟವಾದ ವಿಚಾರ ಏನು ಎಂಬುದನ್ನು ರಿವೀಲ್ ಮಾಡಿದ್ದರು. ‘ನಾನು ಶಾಂತವಾಗಿ ಇರುವಂತೆ ನೋಡಿಕೊಳ್ಳುವ, ನನಗೆ ಶಾಂತಿ ನೀಡುವ ಸಂಗಾತಿಯನ್ನು ಹುಡುಕುತ್ತಿದ್ದೆ. ಗೌರಿಯಲ್ಲಿ ಆ ಗುಣಗಳು ಇದ್ದವು’ ಎಂದಿದ್ದಾರೆ ಆಮಿರ್ ಖಾನ್. ‘ದಯೆ ತೋರುವ, ಸಜ್ಜನ ಮತ್ತು ಕಾಳಜಿಯುಳ್ಳ ವ್ಯಕ್ತಿ ಬೇಕಾಗಿದ್ದರು. ಆಗ ನನಗೆ ಆಮಿರ್ ಸಿಕ್ಕರು’ ಎಂದಿದ್ದಾರೆ’ ಗೌರಿ.

25 ವರ್ಷ ಹಿಂದಿನ ಪರಿಚಯ

ಆಮಿರ್ ಖಾನ್ ಹಾಗೂ ಗೌರಿ ಮಧ್ಯೆ 25 ವರ್ಷ ಹಿಂದಿನ ಪರಿಚಯ ಇದೆ. ಹೌದು, 25 ವರ್ಷಗಳ ಹಿಂದೆಯೇ ಒಬ್ಬರಿಗೊಬ್ಬರು ಪರಿಚಯ ಆಗಿದ್ದರು. ಆದರೆ, ಆ ಬಳಿಕ ಇಬ್ಬರ ಮಧ್ಯೆ ಕಾಂಟ್ಯಾಕ್ಟ್ ಇರಲಿಲ್ಲ. ಒಂದೂವರೆ ವರ್ಷಗಳ ಹಿಂದೆ ಮತ್ತೆ ಪರಿಚಯ ಬೆಳೆಯಿತು’ ಎಂದಿದ್ದಾರೆ ಆಮಿರ್.

ಇದನ್ನೂ ಓದಿ
Image
ಹಿಂದಿ ಹೇರಿಕೆ ಗಲಾಟೆ; ಸ್ಟಾಲಿನ್​ಗೆ ಟಾಂಗ್ ಕೊಟ್ಟ ಪವನ್ ಕಲ್ಯಾಣ್
Image
ಕತ್ರಿನಾ ಮಾಜಿ ಗೆಳೆಯನ ದಾಖಲೆಯನ್ನು ಮುರಿಯಲಿದ್ದಾರೆ ವಿಕ್ಕಿ ಕೌಶಲ್
Image
ಆಲಿಯಾ ಭಟ್ ಕಂಡ ಬ್ರೇಕಪ್​ಗಳು ಒಂದೆರಡಲ್ಲ; ಶಾಲೆಯಲ್ಲೇ ಆಗಿತ್ತು ಲವ್ ಫೇಲ್
Image
‘ಹಣಕ್ಕಲ್ಲ, ಹುಚ್ಚಾಟಕ್ಕೆ’; ಅಂಬಾನಿ ಮನೆ ಮದುವೆಗೆ ಬಂದ ಕಾರಣ ನೀಡಿದ ಕಿಮ್

 ಆಮಿರ್ ಸಿನಿಮಾ ನೋಡಿಲ್ಲ..

ಗೌರಿ ಬೆಳೆದಿದ್ದು ಬೆಂಗಳೂರಿನಲ್ಲಿ. ಅವರು ದಕ್ಷಿಣದ ಸಿನಿಮಾಗಳನ್ನು ಹೆಚ್ಚು ಇಷ್ಟಪಟ್ಟವರು. ಅವರು ಹಿಂದಿ ಸಿನಿಮಾಗಳನ್ನು ಅಷ್ಟಾಗಿ ನೋಡಿಲ್ಲ. ವರ್ಷದ ಹಿಂದೆ ಆಮಿರ್ ನಟನೆಯ ‘ದಿಲ್ ಚಾಹ್ತಾ ಹೇ’ ಹಾಗೂ ‘ಲಗಾನ್’ ಚಿತ್ರಗಳನ್ನು ಗೌರಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಆಮಿರ್ ಖಾನ್ ಜತೆ 3ನೇ ಮದುವೆಗೆ ಸಜ್ಜಾದ ಗೌರಿ ಯಾರು? ಬೆಂಗಳೂರು ಸುಂದರಿ ಬಗ್ಗೆ ಇಲ್ಲಿದೆ ವಿವರ

14 ವರ್ಷಗಳ ಅಂತರ

ಆಮಿರ್ ಖಾನ್ ಅವರು ಹುಟ್ಟಿದ್ದು 1965ರ ಮಾರ್ಚ್​ 14ರಂದು. ಅದೇ ರೀತಿ ಗೌರಿ ಜನಿಸಿದ್ದು 1978ರ ಆಗಸ್ಟ್ 21ರಂದು. ಇಬ್ಬರ ಮಧ್ಯೆ ಸುಮಾರು 14 ವರ್ಷಗಳ ಅಂತರ ಇದೆ. ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:04 pm, Sat, 15 March 25

ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ