AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮಿರ್ ಖಾನ್ ಮದುವೆಗೂ ಮುನ್ನ ಕ್ಷಮೆಯಾಚಿಸಿದ ಸಹೋದರ ಫೈಸಲ್ ಖಾನ್: ಹಳೆಯ ವಿವಾದಕ್ಕೆ ತೆರೆ

ಆಮಿರ್ ಖಾನ್ ಅವರು 3ನೇ ಮದುವೆಯ ಸಂಭ್ರಮದಲ್ಲಿದ್ದಾರೆ. ಈ ನಡುವೆ ಅವರ ಸಹೋದರ ಫೈಸಲ್ ಖಾನ್ ಅವರು ಹಳೆಯ ಮನಸ್ತಾಪಗಳನ್ನು ಮರೆತು ಒಂದಾಗುವ ಮುನ್ಸೂಚನೆಯನ್ನು ನೀಡಿದ್ದಾರೆ. ಯೂಟ್ಯೂಬರ್ ಉಜ್ವಲ್ ತ್ರಿವೇದಿ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಫೈಸಲ್ ಖಾನ್, ತಮ್ಮ ಹಳೆಯ ಮಾತುಗಳಿಗೆ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

ಆಮಿರ್ ಖಾನ್ ಮದುವೆಗೂ ಮುನ್ನ ಕ್ಷಮೆಯಾಚಿಸಿದ ಸಹೋದರ ಫೈಸಲ್ ಖಾನ್: ಹಳೆಯ ವಿವಾದಕ್ಕೆ ತೆರೆ
Faissal Khan, Aamir Khan
ಮದನ್​ ಕುಮಾರ್​
|

Updated on: Jul 03, 2026 | 9:50 PM

Share

ಮುಖ್ಯಾಂಶಗಳು

  • ಈ ಮೊದಲು ತಮ್ಮದೇ ಕುಟುಂಬದ ಮೇಲೆ ಕಿಡಿಕಾರಿದ್ದ ಫೈಸಲ್ ಖಾನ್.
  • ಆಮಿರ್ ಖಾನ್ ಸಹೋದರ ಫೈಸಲ್ ಖಾನ್ ಈಗ ಸಂಪೂರ್ಣ ಬದಲಾಗಿದ್ದಾರೆ.
  • ಕುಟುಂಬದವರ ಕ್ಷಮೆ ಕೇಳಿ ಮತ್ತೆ ಬಾಂದವ್ಯ ಬೆಳೆಸುವ ಪ್ರಯತ್ನದಲ್ಲಿ ಫೈಸಲ್.

ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ (Aamir Khan) ಮತ್ತು ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಈ ಹಿಂದೆ ಸುದ್ದಿಯಾಗಿದ್ದ ಅವರ ಸಹೋದರ, ಮಾಜಿ ನಟ ಫೈಸಲ್ ಖಾನ್ ಈಗ ಮತ್ತೆ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಗೌರಿ ಸ್ಪ್ರ್ಯಾಟ್ (Gauri Spratt) ಜೊತೆ ಆಮಿರ್ ಖಾನ್ ಅವರ ವಿವಾಹ ನಿಶ್ಚಯವಾಗಿರುವ ಬೆನ್ನಲ್ಲೇ, ಫೈಸಲ್ ಖಾನ್ (Faissal Khan) ಅವರು ತಮ್ಮ ಇಡೀ ಕುಟುಂಬದ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ತಮ್ಮ ಮಾನಸಿಕ ಆರೋಗ್ಯದ ಕುರಿತು ಆಸ್ಪತ್ರೆಯಿಂದ ತಮಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದೂ ಅವರು ಬಹಿರಂಗಪಡಿಸಿದ್ದಾರೆ.

ಕುಟುಂಬದ ಬಳಿ ಬಹಿರಂಗ ಕ್ಷಮೆಯಾಚನೆ:

‘ನಾನು ಮೊದಲನೆಯದಾಗಿ ನನ್ನ ತಾಯಿಯ ಬಳಿ ಕ್ಷಮೆ ಕೇಳಲು ಬಯಸುತ್ತೇನೆ. ಕುಟುಂಬದ ವೈಯಕ್ತಿಕ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸಿ ನಾನು ದೊಡ್ಡ ತಪ್ಪು ಮಾಡಿದೆ. ನನ್ನ ತಾಯಿ ಮತ್ತು ಅಕ್ಕ ನಿಖತ್ ಬಳಿ ನಾನು ಕ್ಷಮೆ ಯಾಚಿಸುತ್ತೇನೆ. ಒಬ್ಬ ಮನುಷ್ಯ ದೀರ್ಘಕಾಲದವರೆಗೆ ತನ್ನ ಮನಸ್ಸಿನಲ್ಲೇ ಎಲ್ಲವನ್ನೂ ಹತ್ತಿಕ್ಕಿಕೊಂಡಾಗ, ಒಂದು ದಿನ ಅದು ಮಿತಿಮೀರಿ ಹೊರಬರುತ್ತದೆ. ನಾನು ನಿಖತ್ ಮತ್ತು ಅವರ ಪತಿ ಸಂತೋಷ್ ಹೆಗ್ಡೆ ಅವರ ಬಗ್ಗೆಯೂ ಅತಿಯಾಗಿ ಮಾತನಾಡಬಾರದಿತ್ತು. ನಾನು ಮಾಡಿದ್ದು ತಪ್ಪು’ ಎಂದು ಫೈಸಲ್ ಹೇಳಿದ್ದಾರೆ.

‘ನನಗೆ ಈಗ ನನ್ನ ತಪ್ಪಿನ ಅರಿವಾಗಿದೆ’:

ಮುಂದುವರಿದು ಮಾತನಾಡಿದ ಫೈಸಲ್ ಖಾನ್ ಅವರು, ‘ನನಗೆ ಈಗ ನನ್ನ ತಪ್ಪಿನ ಅರಿವಾಗಿದೆ, ಹಾಗಾಗಿ ಕ್ಷಮೆ ಕೇಳುತ್ತಿದ್ದೇನೆ. ನಾನು ಆಮಿರ್ ಖಾನ್ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದೆ. ಆದರೆ ಇನ್ನು ಮುಂದೆ ನಾವೆಲ್ಲರೂ ಒಟ್ಟಾಗಿ, ಒಳ್ಳೆಯ ಬಾಂಧವ್ಯದೊಂದಿಗೆ ಮುನ್ನಡೆಯಬೇಕು ಎನ್ನುವುದು ನನ್ನ ಆಶಯ. ನಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಲಿ ಎಂದು ನಾನು ಹಾರೈಸುತ್ತೇನೆ’ ಎಂದಿದ್ದಾರೆ.

ಮಾನಸಿಕ ಆರೋಗ್ಯದ ವಿವಾದಕ್ಕೆ ಸಿಕ್ಕಿತು ಕ್ಲೀನ್ ಚಿಟ್:

ತಮ್ಮ ಮಾನಸಿಕ ಸ್ಥಿತಿಯ ಕುರಿತು ಮಾತನಾಡಿದ ಫೈಸಲ್, ‘ಅದು ನನ್ನ ಜೀವನದ ಒಂದು ಭಿನ್ನವಾದ ಹಂತವಾಗಿತ್ತು. ಅಂದು ನನ್ನ ಕುಟುಂಬದವರು ನನ್ನನ್ನು ವೈದ್ಯರ ಬಳಿ ಕರೆದೊಯ್ದಾಗ, ಆ ವೈದ್ಯರು ನೀಡಿದ ವರದಿ ತಪ್ಪಾಗಿರಬಹುದು. ಆದರೆ ನಂತರ ನ್ಯಾಯಾಲಯವು ನನ್ನನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದಾಗ, ಅಲ್ಲಿನ ವೈದ್ಯರು ನನ್ನ ಮಾನಸಿಕ ಆರೋಗ್ಯ ಸ್ಥಿತಿಗತಿ ಉತ್ತಮವಾಗಿದೆ ಎಂದು ಕ್ಲೀನ್ ಚಿಟ್ ನೀಡಿದ್ದರು’ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನೆಪೋಟಿಸಂ ಇರೋದು ನಿಜ, ಅದರಿಂದಲೇ ನನಗೆ ಕೆಲಸ ಸಿಗುತ್ತಿದೆ: ಆಮಿರ್ ಖಾನ್ ಮಗನ ನೇರ ಮಾತು

ಕೆಲವು ವೈದ್ಯರು ತಮ್ಮ ಕುಟುಂಬ ಹಾದಿ ತಪ್ಪಿಸಿರುವ ಸಾಧ್ಯತೆಯಿದೆ ಎಂದಿರುವ ಫೈಸಲ್, ‘ಕಹಿ ಘಟನೆಗಳನ್ನು ಮರೆತು, ನನ್ನ ಕುಟುಂಬದವರು ನನ್ನನ್ನು ನಂಬುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ ಎಂಬ ಭರವಸೆ ನನಗಿದೆ’ ಎಂದಿದ್ದಾರೆ. ತಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಕುಟುಂಬದಲ್ಲೇ ಭಿನ್ನಾಭಿಪ್ರಾಯಗಳಿದ್ದವು ಎಂದು ತಿಳಿಸಿದ ಅವರು, ‘ಕೆಲವರು ವೈದ್ಯರ ಮಾತನ್ನು ನಂಬಿದ್ದರೆ, ಇನ್ನು ಕೆಲವರು ನನ್ನನ್ನು ನಂಬಿದ್ದರು. ನನಗೆ ಯಾವುದೇ ರೀತಿಯ ಸ್ಕಿಜೋಫ್ರೇನಿಯಾ ಕಾಯಿಲೆ ಇಲ್ಲ ಎಂದು ನನ್ನ ಅಕ್ಕ ನಿಖತ್, ತಾಯಿ ಮತ್ತು ಸಂತೋಷ್ ಹಲವು ಬಾರಿ ಹೇಳಿದ್ದರು’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಚಿತ್ರದುರ್ಗದ ಮಂಕಿಮ್ಯಾನ್ ಜ್ಯೋತಿರಾಜ್​​ಗೆ ಮದುವೆ ಫಿಕ್ಸ್: ಹುಡುಗಿ ಯಾರು?
ಚಿತ್ರದುರ್ಗದ ಮಂಕಿಮ್ಯಾನ್ ಜ್ಯೋತಿರಾಜ್​​ಗೆ ಮದುವೆ ಫಿಕ್ಸ್: ಹುಡುಗಿ ಯಾರು?
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಪೊಲೀಸರ ವಿರುದ್ಧದ ತನಿಖೆ ಕ್ಲೋಸ್
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಪೊಲೀಸರ ವಿರುದ್ಧದ ತನಿಖೆ ಕ್ಲೋಸ್
ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಪ್ರಬಲ ಸಂದೇಶ ರವಾನಿಸಿದೆ; ರಾಷ್ಟ್ರಪತಿ
ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಪ್ರಬಲ ಸಂದೇಶ ರವಾನಿಸಿದೆ; ರಾಷ್ಟ್ರಪತಿ
'ಜಮ್ಮು ಕಾಶ್ಮೀರ, ಲಡಾಖ್​ ಭಾರತದ ಅವಿಭಾಜ್ಯ ಅಂಗ'; ವಿದೇಶಾಂಗ ಸಚಿವಾಲಯ
'ಜಮ್ಮು ಕಾಶ್ಮೀರ, ಲಡಾಖ್​ ಭಾರತದ ಅವಿಭಾಜ್ಯ ಅಂಗ'; ವಿದೇಶಾಂಗ ಸಚಿವಾಲಯ
ಮನೆ ಮುಂದೆ ವಾಹನ ಪಾರ್ಕಿಂಗ್‌ಗೆ ಶುಲ್ಕ: ಜಿಬಿಎ ನಿಯಮಕ್ಕೆ ಸಿಟಿ ಮಂದಿ ಕಿಡಿ
ಮನೆ ಮುಂದೆ ವಾಹನ ಪಾರ್ಕಿಂಗ್‌ಗೆ ಶುಲ್ಕ: ಜಿಬಿಎ ನಿಯಮಕ್ಕೆ ಸಿಟಿ ಮಂದಿ ಕಿಡಿ
ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್‌; ಹಿಂಬಾಕಿ ಬಿಡುಗಡೆ
ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್‌; ಹಿಂಬಾಕಿ ಬಿಡುಗಡೆ
ಯತೀಂದ್ರ ಸಿದ್ದರಾಮಯ್ಯನವರನ್ನ ವಿಶೇಷವಾಗಿ ಪರಿಚಯಿಸಿದ ಡಿಕೆಶಿ
ಯತೀಂದ್ರ ಸಿದ್ದರಾಮಯ್ಯನವರನ್ನ ವಿಶೇಷವಾಗಿ ಪರಿಚಯಿಸಿದ ಡಿಕೆಶಿ
ಜೈಲಾಧಿಕಾರಿಗಳಿಗೆ ಅಲೋಕ್ ಕುಮಾರ್ ಕ್ಲಾಸ್!
ಜೈಲಾಧಿಕಾರಿಗಳಿಗೆ ಅಲೋಕ್ ಕುಮಾರ್ ಕ್ಲಾಸ್!
RSS ಚಟುವಟಿಕೆಗಳಿಗೆ ಬ್ರೇಕ್ ಆರೋಪ: ವಿಧೇಯಕದ ಅಂಶ ಬಿಚ್ಚಿಟ್ಟ ಗೃಹ ಸಚಿವ
RSS ಚಟುವಟಿಕೆಗಳಿಗೆ ಬ್ರೇಕ್ ಆರೋಪ: ವಿಧೇಯಕದ ಅಂಶ ಬಿಚ್ಚಿಟ್ಟ ಗೃಹ ಸಚಿವ
‘ಮುಂಗಾರು ಮಳೆ’ ಸಿನಿಮಾ ಆಗಲು ಕಾರಣನಾದೆ: ನಾಗತಿಹಳ್ಳಿ ಚಂದ್ರಶೇಖರ್
‘ಮುಂಗಾರು ಮಳೆ’ ಸಿನಿಮಾ ಆಗಲು ಕಾರಣನಾದೆ: ನಾಗತಿಹಳ್ಳಿ ಚಂದ್ರಶೇಖರ್