‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ

ಆಮಿರ್ ಖಾನ್ ಅವರ ‘ಸಿತಾರೆ ಜಮೀನ್ ಪರ್’ ಚಿತ್ರವು ಸ್ಪ್ಯಾನಿಷ್ ಚಿತ್ರ ‘ಚಾಂಪಿಯನ್ಸ್’ನ ರಿಮೇಕ್ ಆಗಿದೆ. ರಿಮೇಕ್ ಮಾಡಿದ್ದಕ್ಕೆ ಅವರು ಸ್ಪಷ್ಟನೆ ನೀಡಿ, ಭಾರತೀಯರಿಗೆ ಈ ಕಥೆಯನ್ನು ತಲುಪಿಸುವ ಉದ್ದೇಶವನ್ನು ಹಂಚಿಕೊಂಡಿದ್ದಾರೆ. ಚಿತ್ರದ ಬಾಕ್ಸ್ ಆಫೀಸ್ ಯಶಸ್ಸು ಅವರ ನಿರ್ಧಾರಕ್ಕೆ ಸಮರ್ಥನೆಯಾಗಿದೆ. ಈ ಚಿತ್ರದಿಂದ ಅವರು ಯಶಸ್ಸು ಕಂಡಿದ್ದಾರೆ.

‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ
ಆಮಿರ್ ಖಾನ್
Updated By: ರಾಜೇಶ್ ದುಗ್ಗುಮನೆ

Updated on: Jun 27, 2025 | 8:21 AM

ಆಮಿರ್ ಖಾನ್ ಅವರು ಮಾಡಿರೋ ‘ಸಿತಾರೆ ಜಮೀನ್ ಪರ್’ ಸಿನಿಮಾ (Sitare Zameen Par) ಸೂಪರ್ ಹಿಟ್ ಆಗಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಚಿತ್ರ ಸ್ಪ್ಯಾನಿಶ್ ಭಾಷೆಯ ‘ಚಾಂಪಿಯನ್ಸ್’ ಸಿನಿಮಾದ ರಿಮೇಕ್. ಈ ಚಿತ್ರವನ್ನು ರಿಮೇಕ್ ಮಾಡಿದ್ದಕ್ಕೆ ಅನೇಕರು ಟೀಕೆ ಮಾಡಿದ್ದರು. ಈ ಬಗ್ಗೆ ಆಮಿರ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ರಿಮೇಕ್ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.

ಆಮಿರ್ ಖಾನ್ ಅವರು ಆ್ಯಕ್ಷನ್ ಸಿನಿಮಾಗಳ ಜೊತೆ ಒಂದಷ್ಟು ಸಂದೇಶ ನೀಡುವ ಸಿನಿಮಾಗಳನ್ನು ಕೂಡ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಹೆಚ್ಚು ಇಷ್ಟ ಆಗುತ್ತಾರೆ ಎನ್ನಬಹುದು. ಅವರು ‘ಚಾಂಪಿಯನ್ಸ್’ ಸಿನಿಮಾ ನೋಡಿದಾಗ ಸಾಕಷ್ಟು ಭಾವುಕರಾದರು, ಮತ್ತು ಈ ಸಿನಿಮಾನ ಭಾರತೀಯರಿಗೆ ತೋರಿಸಬೇಕು ಎಂದು ನಿರ್ಧರಿಸಿದರು.

‘ಚಾಂಪಿಯನ್ಸ್ ಸಿನಿಮಾ ನೋಡುವಾಗ ತಾರೇ ಜಮೀನ್ ಪರ್ ಚಿತ್ರದ ಸೀಕ್ವೆಲ್ ನೋಡಿದಂತೆ ಅನಿಸಿತು. ಭಾರತದವರು ಸ್ಪ್ಯಾನಿಶ್ ಸಿನಿಮಾ ಎಲ್ಲಿ ನೋಡ್ತಾರೆ? ನಾವು ಯಾವಾಗಲೂ ಭಾರತದ ಫುಡ್​ನ ಮಾತ್ರ ತಿನ್ನೋದು. ಸ್ಪ್ಯಾನಿಶ್ ಫುಡ್ ಇಷ್ಟ ಆಗಲ್ಲ. ಹೀಗಿರುವಾಗ ಸ್ಪ್ಯಾನಿಶ್ ಸಿನಿಮಾನ ಎಷ್ಟು ಜನರು ನೋಡ್ತಾರೆ? ಅದು ಹಾಗೆ ನೋಡಲು ಸಿಗೋದೂ ಇಲ್ಲ. ಹೀಗಿರುವಾಗ ರಿಮೇಕ್ ಮಾಡೋದ್ರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ’ ಎಂದು ಅವರು ಹೇಳಿದರು.

ಇದನ್ನೂ ಓದಿ
ಪಿಯುಸಿಯಲ್ಲಿ ಟಾಪರ್, ಐಎಎಸ್ ಓದಬೇಕಿದ್ದ ಯುವತಿ ನಟಿಯಾದ ಕಥೆ
ವಿಚ್ಛೇದನ ಹಂತದಲ್ಲಿದ್ದ ನಟಿ ಈಗ ಪ್ರೆಗ್ನೆಂಟ್; ಆದರೆ, ಪತಿಗೇ ಗೊತ್ತೇ ಇಲ್ಲ
ಡ್ರಗ್ಸ್ ತೆಗೆದುಕೊಳ್ಳೋ ಕಲಾವಿದರು ಇನ್ಮುಂದೆ ಚಿತ್ರರಂಗದಿಂದ ಬ್ಯಾನ್
‘ಆರ್ಯನ್ ಯಾವಾಗಲೂ ನಾನು ಮುಸ್ಲಿಂ ಎಂದೇ ಹೇಳುತ್ತಾನೆ’; ಗೌರಿ ಖಾನ್

‘ಚಾಂಪಿಯನ್ಸ್’ ಸಿನಕಮಾದ ಯಥಾವತ್ತು ದೃಶ್ಯಗಳನ್ನು ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಇಡಲಾಗಿದೆ ಎಂದು ಕೆಲವರು ಟೀಕೆ ಮಾಡಿದ್ದು ಇದೆ. ಆದರೆ, ಈ ಟೀಕೆಗಳನ್ನು ಅವರು ಹೆಚ್ಚು ಗಂಭೀರವಾಗಿ ಸ್ವೀಕರಿಸಿಲ್ಲ. ಈಗ ಅವರು ಗೆದ್ದು ಬೀಗಿದ್ದಾರೆ. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಗೆದ್ದು ಬೀಗಿದೆ.

ಇದನ್ನೂ ಓದಿ: ರಾಷ್ಟ್ರಪತಿಗೆ ‘ಸಿತಾರೆ ಜಮೀನ್ ಪರ್’ ಸಿನಿಮಾ ತೋರಿಸಿದ ಆಮಿರ್ ಖಾನ್

ಈ ಮೊದಲು ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾನ ಮಾಡಿದ್ದರು. ಇದು ಕೂಡ ರಿಮೇಕ್ ಆಗಿತ್ತು. ಈ ಸಿನಿಮಾ ಸೋತಾಗ ಎಲ್ಲರೂ ಆಮಿರ್​ನ ತೆಗಳಿದ್ದರು. ಅವರು ಮತ್ತೆ ರಿಮೇಕ್ ಮಾಡಲು ಹೋಗುತ್ತಾರೆ ಎಂದಾಗ ಅನೇಕರು ಅವರನ್ನು ನೋಡಿ ನಕ್ಕಿದ್ದರು. ಆದರೆ, ಈಗ ಎಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಂತೆ ಆಗಿದೆ. ಅವರು ಗೆಲುವಿನ ಮೂಲಕ ಎಲ್ಲದ್ದಕ್ಕೂ ಸ್ಪಷ್ಟನೆ ಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 8:10 am, Fri, 27 June 25